/newsfirstlive-kannada/media/post_attachments/wp-content/uploads/2025/05/mng-suhas.jpg)
ಕೇವಲ ಎರಡೇ ಎರಡು ದಿನದಲ್ಲಿ ಮಂಗಳೂರು ಪೊಲೀಸರು ಸುಹಾಸ್ ಶೆಟ್ಟಿ ಪ್ರಕರಣವನ್ನು ಬೇಧಿಸಿದ್ದಾರೆ. ಒಟ್ಟು 10 ಆರೋಪಿಗಳಲ್ಲಿ 8 ಮಂದಿಯನ್ನು ಬಂಧಿಸಿರುವ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಇಂಚಿಂಚು ಮಾಹಿತಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ನೀಡಿದ್ದಾರೆ. ಬೆನ್ನಲ್ಲೇ ಇದೊಂದು ಪ್ರತೀಕಾರದ ಕೃತ್ಯ ಅನ್ನೋದು ಕನ್ಫರ್ಮ್ ಆಗಿದೆ.
ಇದು ಪ್ರತೀಕಾರದ ಕೃತ್ಯ
ಪೊಲೀಸ್ ಕಮಿಷನರ್ ನೀಡಿದ ಮಾಹಿತಿಯಂತೆ.. ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಬಂಧಿಸಲಾಗಿದೆ. ಶಾಂತಿಗುಡ್ಡೆದ ನಿವಾಸಿ ಅಬ್ದುಲ್ ಸಫ್ವಾನ್ (27), ನಿಯಾಜ್ (25) ಮೊಹಮ್ಮದ್ ಮುಸ್ಸಾಮಿರ್ ( 32) ಕಲಂದರ್ ಶಫಿ ( 29), ಆದಿಲ್ ಮೆಹರೂಪ್ (27), ನಾಗರಾಜ್ (20), ಮೊಹಮದ್ ರಿಜ್ವಾನ್ (28) ಹಾಗೂ ರಂಜಿತ್ ಎಂಬ ಆರೋಪಿಗಳನ್ನ ಬಂಧಿಸಲಾಗಿದೆ. ಇಲ್ಲಿ ಆದಿಲ್ ಮೆಹರೂಪ್, ಫಾಸಿಲ್ ಸಹೋದರ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಕೇಸ್‌ಗೆ ರೋಚಕ ಟ್ವಿಸ್ಟ್.. ಭಾಗಿಯಾದ 8 ಮಂದಿ ಯಾರು? ಸ್ಫೋಟಕ ಮಾಹಿತಿ ಬಯಲು
ದ್ವೇಷ ಹುಟ್ಟಿದ್ದು ಹೇಗೆ..?
ಅಂದ್ಹಾಗೆ ಈ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿಗಳಾಗಿದ್ದಾರೆ. ಅಬ್ದುಲ್ ಸಫ್ವಾನ್ ಹಾಗೂ ಫಾಸಿಲ್ (2022ರಲ್ಲಿ ಜೀವಕಳೆದುಕೊಂಡವ) ಸಹೋದರ ಆದಿಲ್ ಮೆಹರೂಪ್. ಆದಿಲ್ ಮೆಹರೂಪ್ಗೆ ತನ್ನ ಸಹೋದರನ ಕಳೆದುಕೊಂಡ ದ್ವೇಷ ಇತ್ತು. ಇತ್ತ ಅಬ್ದುಲ್ ಸಫ್ವಾನ್ಗೂ ಸುಹಾಸ್ ಶೆಟ್ಟಿ ಮೇಲೆ ದ್ವೇಷ ಬೆಳೆದಿತ್ತು. ಅದಕ್ಕೆ ಕಾರಣ 2023ರಲ್ಲಿ ಸುಹಾಸ್ ಶೆಟ್ಟಿ ಗ್ಯಾಂಗ್ನಿಂದ, ಸಫ್ವಾನ್ ಮೇಲೆ ಅಟ್ಯಾಕ್ ಆಗಿತ್ತು. ಸುಹಾಸ್ ಶೆಟ್ಟಿ, ತನ್ನ ಸ್ನೇಹಿತರಾದ ಪ್ರಶಾಂತ್, ಧನರಾಜ್ ಜೊತೆ ಸೇರಿ ದಾಳಿ ಮಾಡಿದ ಆರೋಪ ಇದೆ. ಹೀಗಾಗಿ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿ ಮೇಲೆ ದ್ವೇಷ ಮುಂದುವರಿದಿತ್ತು..
ಎರಡೂ ಗ್ಯಾಂಗ್ಗೂ ದಾಳಿಯ ಸೂಚನೆ ಸಿಕ್ಕಿತ್ತು..
ಫಾಸಿಲ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ, ಕಳೆದ ಒಂದು ವರ್ಷದ ಹಿಂದೆ ಜೈಲಿನಿಂದ ಹೊರಬಂದಿದ್ದ. ಜಾಮೀನು ಪಡೆದು ಬಂದ ಬೆನ್ನಲ್ಲೇ, ಸ್ನೇಹಿತ ಪ್ರಶಾಂತ್ನನ್ನು ಭೇಟಿಯಾಗಿದ್ದ. ಇವರಿಬ್ಬರಿಗೂ ಸಫ್ವಾನ್ ಗ್ಯಾಂಗ್ ದಾಳಿ ಮಾಡುವ ಭಯ ಇತ್ತು. ಇತ್ತ, ಅಬ್ದುಲ್ ಫಾಸ್ವಾನ್ಗೆ ಸುಹಾಸ್ ಗ್ಯಾಂಗ್ನಿಂದ ಮೇಲೆ ದಾಳಿಯಾಗುವ ಆತಂಕವಿತ್ತು. ಇದೇ ಕಾರಣಕ್ಕೆ ಸುಹಾಸ್ನನ್ನು ಮುಗಿಸಲು ಸಫ್ವಾನ್ ಗ್ಯಾಂಗ್ ತೀರ್ಮಾನಿಸಿದೆ. ಸುಹಾಸ್ ಶೆಟ್ಟಿಯನ್ನು ಮುಗಿಸಲು ಸಫ್ವಾನ್, ಆದಿಲ್ನನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಸುಪಾರಿ ಮಾತುಕತೆ ನಡೆದಿದೆ.
ಇದನ್ನೂ ಓದಿ: BREAKING: ಸುಹಾಸ್ ಶೆಟ್ಟಿ ಪ್ರಕರಣ ಬೇಧಿಸಿದ ಮಂಗಳೂರು ಪೊಲೀಸರು; 8 ಜನರ ಬಂಧನ
ಸುಪಾರಿ ಪ್ಲಾನ್ ಹೇಗಿತ್ತು..?
ಸುಹಾಸ್ ಮುಗಿಸಲು ಒಟ್ಟು 5 ಲಕ್ಷ ರೂಪಾಯಿ ಹಣದ ಮಾತುಕತೆ ಆಗಿದೆ. ಅದರಲ್ಲಿ ಆದಿಲ್ ಮೂರು ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ಗ್ಯಾಂಗ್ಗೆ ನೀಡಿದ್ದಾನೆ. ನಂತರ ತಂಡ ರಚನೆ ಆಗಿದೆ. ಬೆನ್ನಲ್ಲೇ ಚಿಕ್ಕಮಗಳೂರಿನ ಕಳಸ ಮೂಲದ ರಂಜಿತ್ ಮತ್ತು ನಾಗರಾಜ್ ಎಂಬುವವರನ್ನು ಸಂಪರ್ಕ ಮಾಡಿದ್ದಾರೆ. ಅವರು ಕಳೆದ 15 ದಿನಗಳ ಹಿಂದೆ ಸಫ್ವಾನ್ ಮನೆಗೆ ಬಂದು ಠಿಕಾಣಿ ಹೂಡಿದ್ದರು. ಇವರು ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿದ್ದಾರೆ. ಕಳೆದ ಮೇ 1ರಂದು ಚಲನವಲನಗಳನ್ನು ಗಮನಿಸಿ ಸುಹಾಸ್ ಶೆಟ್ಟಿಯನ್ನ ಮುಗಿಸಿದ್ದಾರೆ.
ಎರಡು ಬಾರಿ ಅಟ್ಯಾಕ್ಗೆ ಯತ್ನ
ಮೊನ್ನೆಯ ದಾಳಿಗೂ ಮೊದಲು ಎರಡು ಬಾರಿ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕೊನೆಗೆ ಸುಹಾಸ್ ಶೆಟ್ಟಿ ಬಗ್ಗೆ ಸಫ್ವಾನ್ ತಂಡಕ್ಕೆ ನಿಖರವಾಗಿ ಗೊತ್ತಾಗುತ್ತೆ. ಕೃತ್ಯಕ್ಕಾಗಿ ಎರಡು ವಾಹನ ಬಳಸಿಕೊಂಡಿದ್ದಾರೆ. ಒಂದು ಬುಲೆರೋ ಪಿಕಪ್, ಸ್ವಿಫ್ಟ್ ಕಾರು ಬಳಸಿಕೊಂಡರು. ಎರಡು ವಾಹನದಲ್ಲಿ ಒಟ್ಟು 7 ಮಂದಿ ಸುಹಾಸ್ ಶೆಟ್ಟಿಯನ್ನು ಚೇಸ್ ಮಾಡಿದ್ದಾರೆ. ನಂತರ ಒಂದು ನಿರ್ದಿಷ್ಟ ಸ್ಥಳದಲ್ಲಿ ಪಿಕಪ್ ವಾಹನದಿಂದ ಅಪಘಾತ ಮಾಡಿ ಅಟ್ಯಾಕ್ ಮಾಡಿದ್ದಾರೆ. ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಬಂಧಿಸಿದ್ದೇವೆ. ಇನ್ನೂ, ಇಬ್ಬರು ಆರೋಪಿಗಳು ಉಳಿದಿದ್ದು, ಅವರ ಬಂಧನಕ್ಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟು 10 ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಕಮಿಷನರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಮಹತ್ವದ ತಿರುವು.. ಪ್ರತೀಕಾರದ ಮಾಸ್ಟರ್ ಮೈಂಡ್ ಹೆಸರು ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ