/newsfirstlive-kannada/media/post_attachments/wp-content/uploads/2023/10/DRUGS.jpg)
ಯುವಕರು ಭಾರತದ ಆಸ್ತಿ. ಇವರು ರಾಷ್ಟ್ರ ನಿರ್ಮಾಣದ ಭಾಗವಾಗಬೇಕು. ಆದರೆ ಮಹಾನಗರಗಳು ಬೆಳೆದಂತೆ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಕೆಟ್ಟ ಚಟಗಳಿಗೆ ದಾಸರಾಗಿ ಅರ್ಧ ಜೀವನ ಕಳೆದುಕೊಳ್ಳುತ್ತಿದ್ದಾರೆ. ಆಲ್ಕೋಹಾಲ್, ತಂಬಾಕು, ಓಪಿಯಮ್, ಆಂಫಿಟಮೈನ್, ಹಿರಾಯಿನ್, ಕೊಕೇನ್, ಡ್ರಗ್ಸ್ ಸೇರಿಂದತೆ ಗಾಂಜಾಕ್ಕೆ ಬಲಿಯಾಗುತ್ತಲೇ ಇದ್ದಾರೆ. ಈ ಗಾಂಜಾ ಯಾವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಬಗ್ಗೆ ಸ್ಫೋಟಕ ಸತ್ಯ ಹೊರಬಿದ್ದಿದೆ.
ಗಾಂಜಾ ವೈಜ್ಞಾನಿಕವಾಗಿ ಕ್ಯಾನಬಿಸ್ ಸಟೈವಾ (Cannabis Sativa) ಎಂದು ಕರೆಯುತ್ತಾರೆ. ಈಗೀಗ ಇದನ್ನು ವೀಡ್, ಪಾಟ್, ಡಾಪ್ ಗ್ರಾಸ್ ಎಂದು ಕೂಡ ಕರೆಯಲಾಗುತ್ತಿದೆ. ಇದನ್ನು ಸೇವನೆ ಮಾಡಿದಾಗ ದೇಹ ಮತ್ತು ಮೆದುಳಿನ ಮೇಲೆ ಹಲವಾರು ದುಷ್ಪರಿಣಾಮಗಳು ಬೀರುತ್ತವೆ. ಮನರಂಜನೆ, ಖುಷಿ, ಸಂತೋಷಕ್ಕಾಗಿ ಇದನ್ನು ಸೇವನೆ ಮಾಡಿದರೆ ಬಹಳ ಬೇಗನೇ ಜೀವ ಕೊನೆಯಾಗುತ್ತದೆ.
ಏನೆಲ್ಲಾ ಸಮಸ್ಯೆ ಆಗುತ್ತದೆ?
ಇನ್ನು, ಗಾಂಜಾದಲ್ಲಿನ THC ಎಂಬ ರಾಸಾಯನಿಕವು ಸೇವನೆ ಮಾಡಿದ ವ್ಯಕ್ತಿಯ ಶ್ವಾಸಕೋಶಗಳಿಂದ ನೇರ ರಕ್ತವನ್ನು ಸೇರುತ್ತದೆ. ಈ ರಕ್ತ ಮೆದುಳಿಗೆ ಹಾಗೂ ದೇಹದ ಭಾಗಗಳಿಗೆ ರವಾನೆಯಾಗಿ ಮೊದ ಮೊದಲು ಮಜಾ ನೀಡುತ್ತದೆ. ಆದರೆ ಬರು ಬರುತ್ತಾ ಶಕ್ತಿ ಕುಂದಿಸುತ್ತಾ ಹೋಗುತ್ತದೆ. ಉಸಿರಾಟದ ಮೇಲೆ ಗಂಭೀರವಾಗಿ ಎಫೆಕ್ಟ್ ಆಗುವ ಇದು ಕೆಮ್ಮು ಸೇರಿದಂತೆ ಶ್ವಾಸಕೋಶದ ಸೋಂಕುಗಳನ್ನು ಉಂಟು ಮಾಡುತ್ತದೆ. ಇನ್ನು ಬೇರೆಯವರಿಗಿಂತ ಗಾಂಜಾ ಸೇವನೆ ಮಾಡುವ ವ್ಯಕ್ತಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತವೆ. ಗಾಂಜಾ ಸೇವನೆ ಒಂದು ಕುಟುಂಬವನ್ನೇ ನಾಶ ಮಾಡಬಹುದು. ಗಾಂಜಾವು ಬೇರೆಯವರ ಮೇಲೆ ಅನುಮಾನ ಹೆಚ್ಚಿಸುತ್ತದೆ. ಭ್ರಮೆಗಳನ್ನು ಅಧಿಕಗೊಳಿಸಿ ಬೇರೆ ಕೆಲಸ ಮಾಡದಂತೆ ಮಾಡುತ್ತದೆ.
ಮುಂದಿನ ಜನರೇಷನ್ ಮೇಲೂ ಗಾಂಜಾ ತನ್ನ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಹುಟ್ಟುವ ಮಗುವಿನ ಮೇಲೆ ಅನುವಂಶಿಕವಾಗಿ ಬುದ್ಧಿಮಾಂದ್ಯ ಇತ್ಯಾದಿ ನ್ಯೂನತೆಗಳನ್ನು ಉಂಟು ಮಾಡುತ್ತದೆ. ದೀರ್ಘಾವಧಿ ಗಾಂಜಾ ಸೇವನೆಯಿಂದ ಗಂಟಲಲ್ಲಿ ಗೂರಲು, ನಿದ್ರಾಭಂಗ, ಚಿತ್ತೈಕಾಗ್ರತೆಗೆ ಧಕ್ಕೆ ಮುಂತಾದ ದುಷ್ಪರಿಣಾಮಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಮಾನಸಿಕ ಖಿನ್ನತೆಗೆ ಕಾರಣವಾಗಿ ಹಲವು ಅನಾರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ; ಭಾರತ ತಂಡದಲ್ಲಿ KL ರಾಹುಲ್ಗೆ ಹೊಸ ಜವಾಬ್ದಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ