ಸಮೋಸಾದಲ್ಲಿ ಕಾಂಡೋಮ್​, ಕಲ್ಲು, ಗುಟ್ಕಾ ಪತ್ತೆ: ಐವರನ್ನು ಅರೆಸ್ಟ್​ ಮಾಡಿದ ಪೊಲೀಸರು

author-image
AS Harshith
Updated On
ಸಮೋಸಾದಲ್ಲಿ ಕಾಂಡೋಮ್​, ಕಲ್ಲು, ಗುಟ್ಕಾ ಪತ್ತೆ: ಐವರನ್ನು ಅರೆಸ್ಟ್​ ಮಾಡಿದ ಪೊಲೀಸರು
Advertisment
  • ಆಟೋಮೊಬೈಲ್​ ಕಂಪನಿಯಲ್ಲಿ ಬೆಳಕಿಗೆ ಬಂದ ಆಘಾತಕಾರಿ ಘಟನೆ
  • ನೌಕಕರಿಗೆ ಸಮೋಸಾ ಸೇವಿಸುವಾಗ ಸಿಕ್ತು ಕಾಂಡೋಮ್​, ಕಲ್ಲುಗಳು
  • ಉದ್ಯಮಿಯೊಬ್ಬರು ಸೇಡು ತೀರಿಸಲು ಇಂಥಾ ನೀಚ ಪ್ಲಾನ್​ ಹೆಣೆದಿದ್ದರೇ?

ಪುಣೆಯ ಪಿಂಪ್ರಿ ಆಟೋಮೊಬೈಲ್​ ಕಂಪನಿಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಂಪನಿ ನೌಕರರಿಗೆ ನೀಡಲಾದ ಸಮೋಸಾದಲ್ಲಿ ಕಾಂಡೋಮ್​, ಕಲ್ಲುಗಳು, ತಂಬಾಕು ಪತ್ತೆಯಾಗಿವೆ ಎಂದು ಆರೋಪ ಕೇಳಿಬಂದಿದೆ. ಈ ಕುರಿತಾಗಿ ಪ್ರಕರಣ ಕೂಡ ದಾಖಲಾಗಿದೆ.

ಕಲ್ಲು, ಗುಟ್ಕಾ, ಕಾಂಡೋಮ್

ಮಾರ್ಚ್​ 27ರಂದು ಈ ಘಟನೆ ಬೆಳಕಿಗೆ ಬಂದಿದೆ. ನೌಕರರು ಸೇವಿಸಲು ನೀಡಿದ ಸಮೋಸಾದಲ್ಲಿ ಕಲ್ಲುಗಳು, ಗುಟ್ಕಾ, ಕಾಂಡೋಮ್​ಗಳು ಮತ್ತೆಯಾದಂತೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಐವರ ಮೇಲೆ ಪ್ರಕರಣ ದಾಖಲು

ಕಂಪನಿಯಲ್ಲಿ ಕೆಲಸ ಮಾಡುವ ನೌಕಕರಿಗೆ ಸಮೋಸ ಒದಗಿಸಲು ಬೇರೊಂದು ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ ಉಪಗುತ್ತಿಗೆ ನೀಡಲಾದ ಇಬ್ಬರು ಕಾರ್ಮಿಕರು ಮತ್ತು ಈ ಹಿಂದೆ ಕಲಬೆರಕೆ ವಿಚಾರದಿಂದ ಹೊರಹಾಕಲಾದ ಸಂಸ್ಥೆಯ ಮೂವರು ಸೇರಿ ಒಟ್ಟು ಐವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೇಡು ತೀರಿಸಲು ಈ ಪ್ಲಾನ್​

ಮಾಹಿತಿ ಪ್ರಕಾರ, ಆಟೋಮೊಬೈಲ್​ ಕಂಪನಿ ಒಪ್ಪಂದವನ್ನು ಕೊನೆಗೊಳಿಸಿದ ನಂತರ ಸೇಡು ತೀರಿಸಿಕೊಳ್ಳಲು ಉದ್ಯಮಿಯೊಬ್ಬರು ಈ ಕೃತ್ಯವನ್ನೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪೊಲೀಸರು ಏನಂದ್ರು?

ಪೊಲೀಸರ ಪ್ರಕಾರ, ಮೂವರು ಪಾಲುದಾರರು ಈ ಕೃತ್ಯವನ್ನು ಯೋಚಿಸಿ ಮಾಡಿದ್ದಾರೆ. ಸಮೋಸಾ ಒದಗಿಸುವ ಒಪ್ಪಂದ ಮಾಡಿಕೊಂಡ ಸಂಸ್ಥೆಗೆ ಮಾನಹಾನಿಯನ್ನು ಮಾಡಲು ಬೇರಿಬ್ಬರು ಕಾರ್ಮಿಕರನ್ನು ಪ್ಲಾನ್​ನಲ್ಲಿ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಲಿಮಿಟೆಡ್​ ಎಂಬ ಕಂಪನಿಯ ಕ್ಯಾಂಟೀನ್​ಗೆ ಕ್ಯಾಟಲಿಸ್ಟ್​ ಸರ್ವೀರ್ಸ್​ ಸೊಲ್ಯೂಷನ್ಸ್​ ಪ್ರೈ.ಲಿ ತಿಂಡಿ ಒದಗಿಸುವ ಕೆಲಸ ಮಾಡುತ್ತಿತ್ತು. ಆದರೆ ಅವರನ್ನು ಬದಲಾಯಿಸಿ ಮನೋಹರ್​ ಎಂಟರ್​​ಪ್ರೈಸ್​ ಎಂಬ ಕಂಪನಿಗೆ ಉಪಗುತ್ತಿಗೆ ನೀಡಲಾಯಿತು.

ಇದನ್ನೂ ಓದಿ: ವರ್ತೂರು ಕೆರೆಯಲ್ಲಾದ ಕಹಿ ಘಟನೆಯನ್ನ ನೆನಪಿಸುತ್ತೆ ಈ ಕಾಕ್​​ಟೈಲ್​​.. ಆ ಘಟನೆ ಬಗ್ಗೆ ಕೇಳಿದ್ರೆ ಬೇಸರವಾಗುತ್ತೆ

ಸಮೋಸಾ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ವಿಚಾರಣೆ ನಡೆಸಿದ್ದು, ಫಿರೋಜ್​ ಶೇಖ್​ ಮತ್ತು ವಿಕ್ಕಿ ಶೇಕ್​ ಎಂಬ ಕೆಲಸಗಾರರು ಕಾಂಡೋಮ್​, ಗುಟ್ಕಾ, ಕಲ್ಲುಗಳನ್ನು ತುಂಬಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಅರೆಸ್ಟ್​ ಆದ ಐವರ ವಿರುದ್ಧ ಐಪಿಸಿ ಸೆಕ್ಷನ್​ 328 ಮತ್ತು 120ಬಿ ಅಡಿಯಲ್ಲಿ ಕೆಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment