newsfirstkannada.com

VIDEO: ಕಾಂಡೋಮ್​ ಮೇಲೆ ಜಗನ್​​-ಟಿಡಿಪಿ ಪಕ್ಷಗಳ ಚಿಹ್ನೆ; ಚುನಾವಣೆಗಾಗಿ ಕೀಳುಮಟ್ಟದ ಪ್ರಚಾರಕ್ಕೆ ಇಳಿಯಿತೇ?

Share :

Published February 22, 2024 at 12:42pm

Update February 22, 2024 at 12:53pm

    2024ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ವಿಡಿಯೋ ವೈರಲ್​

    ಕಾಂಡೋಮ್​ ಪ್ಯಾಕ್​ ಮೇಲೆ ಕಾಣಿಸಿಕೊಂಡ ಎರಡು ಪಕ್ಷಗಳ ಚಿಹ್ನೆ

    ಮತ ಪಡೆಯಲು ಕಾಂಡೋಮ್​ ಗಿಮಿಕ್​ಗೆ ಇಳಿಯಿತೇ ಪಕ್ಷಗಳು

ಚುನಾವಣೆ ಬಂತೆಂದರೆ ಸಾಕು ಗಿಫ್ಟ್ ಪಾಲಿಟಿಕ್ಸ್​ ಶುರುವಾಗುತ್ತೆ. ಜನರಿಗೆ ಹಲವು ಆಮಿಷಗಳನ್ನವೊಡ್ಡಿ ತಮ್ಮ ಪಕ್ಷಕ್ಕೆ ಮತ ಹಾಕುವಂತೆ ಓಲೈಸುವ ಕೆಲಸಗಳು ನಡೆಯುತ್ತವೆ. ಅದರ ಜೊತೆಗೆ ಜಾಹೀರಾತಿಗೇನು ಕಡಿಮೆಯಿಲ್ಲ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಚುನಾವಣಾ ಜಾಹೀರಾತು ನೀಡುವ ಪಕ್ಷಗಳು, ರಾಜಕಾರಣಿಗಳು ಇದ್ದಾರೆ. ಆದರೆ ಪ್ರಸ್ತುತ ಸಮಾಜದಲ್ಲಿ ಚುನಾವಣ ಗಿಮಿಕ್ಸ್​ ಎಲ್ಲಿಯವರೆಗೆ ತಲುಪಿದೆ ಎಂದರೆ ಕಾಂಡೋಮ್ ಪ್ಯಾಕ್​​ ಮಾರುವವರೆಗೆ ಅಂದ್ರೆ ನಂಬಲೇಬೇಕಾಗಿದೆ.

ಹೌದು. ಚುನಾವಣೆ ಸಮಯದಲ್ಲಿ ಕುಕ್ಕರ್​, ಸೀರೆ, ಗಡಿಯಾರ, ಬೆಳ್ಳಿ ಸಾಮಾಗ್ರಿ, ನೋಟು ಹಂಚಿಕೆ ಮಾಡಿರುವ ಸಂಗತಿಯನ್ನು ಕೇಳಿರಬಹುದು. ಆದರೆ ಲೋಕಸಭಾ 2024ರ ಹೊತ್ತಲ್ಲಿ ಕಾಂಡೋಮ್ ಪ್ಯಾಕ್​​ ಮೇಲೆ ಎರಡು ಪಕ್ಷಗಳ ಚಿಹ್ನೆಗಳು ಮೂಡಿಬಂದಿದ್ದು, ಅದನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿರುವ ಸಂಗತಿ ಇದೀಗ ಬೆಳಿಕಿಗೆ ಬಂದಿದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳು ಕೂಡ ವೈರಲ್​ ಆಗಿವೆ.

ಹೀಗೂ ಮಾಡ್ತಾರಾ ಚುನಾವಣೆ ಪ್ರಚಾರ?

ವೈಆರ್​ಎಸ್​​ ಕಾಂಗ್ರೆಸ್​ ಪಕ್ಷ ಮತ್ತು ವಿರೋಧ ಪಕ್ಷವಾದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಪಕ್ಷಗಳ ಚಿಹ್ನೆ ಕಾಂಡೋಮ್​ ಪ್ಯಾಕೆಟ್​ ಮೇಲೆ ಮೂಡಿ ಬಂದಿದೆ. ಅದನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಮೂಲಕ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪವು ಕೇಳಿಬಂದಿದೆ.

ಇದೆಲ್ಲಾ ಮುಂಬರುವ ಲೋಕಸಭಾ ಚುನಾವಣೆಗಾಗಿ ಎನ್ನಲಾಗುತ್ತಿದೆ. ಮನೆ ಮನೆಗೆ ತೆರಳಿ ಕಾಂಡೋಮ್​ ನೀಡುವ ಮೂಲಕ ಪಕ್ಷದ ಪ್ರಚಾರ ಮಾಡಲಾಗುತ್ತಿದೆ ಎಂಬ ದೂರುಗಳು ಕೂಡ ಕೇಳಿಬಂದಿವೆ.

ಸಾಮಾಜಿಕ ಜಾಲತಾಣದಲ್ಲಿ ಜಿದ್ದಾ-ಜಿದ್ದಿ

ಇದೇ ವಿಚಾರವಾಗಿ ಪಕ್ಷಗಳು ಜಗಳ ಕೂಡ ಮಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ವೈಎಸ್​ಆರ್​ಸಿಪಿ ಪಕ್ಷ ಎಕ್ಸ್​ನಲ್ಲಿ ‘‘ಟಿಡಿಪಿ ಪಕ್ಷ ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ’’ ಎಂದು ಹೇಳಿದೆ.

ಅತ್ತ ಜಗನ್​ ಮೋಹನ್​ ರೆಡ್ಡಿ ಪಕ್ಷ ‘‘ಇದು ಕಾಂಡೋಮ್​ಗಳೊಂದಿಗೆ ನಿಲ್ಲುತ್ತದೆಯೋ ಅಥವಾ ಸಾರ್ವಜನಿಕರಿಗೆ ವಯಾಗ್ರ ನೀಡಲು ಪ್ರಾರಂಭಿಸುತ್ತದೆಯೋ’’ ಎಂದು ಕೇಳಿದೆ. ಟಿಡಿಪಿ ಪಕ್ಷ ಕಾಂಡೋಮ್​ ಪ್ಯಾಕ್​ ಅನ್ನು YSRCP ಲಾಂಛನದೊಂದಿಗೆ ಪೋಸ್ಟ್​ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾಂಡೋಮ್​ ಮೇಲೆ ಜಗನ್​​-ಟಿಡಿಪಿ ಪಕ್ಷಗಳ ಚಿಹ್ನೆ; ಚುನಾವಣೆಗಾಗಿ ಕೀಳುಮಟ್ಟದ ಪ್ರಚಾರಕ್ಕೆ ಇಳಿಯಿತೇ?

https://newsfirstlive.com/wp-content/uploads/2024/02/condum-1.jpg

Load More