/newsfirstlive-kannada/media/post_attachments/wp-content/uploads/2024/10/SATISH-5.jpg)
ಬೆಂಗಳೂರು: ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮಹತ್ವದ ಆದೇಶ ನೀಡಿದೆ. ಶಾಸಕ ಸತೀಶ್ ಸೈಲ್ ಸೇರಿ ಎಲ್ಲ 7 ಜನರನ್ನು ಅಪರಾಧಿಗಳೆಂದು ಕೋರ್ಟ್ ತೀರ್ಪು ನೀಡಿತ್ತು.
ಇದನ್ನೂ ಓದಿ:10, 20 ಕೋಟಿ ಅಲ್ಲವೇ ಅಲ್ಲ.. ಬೇಲಿಕೇರಿ ಕೇಸ್ನಲ್ಲಿ ಕೋರ್ಟ್ ವಿಧಿಸಿದ ದಂಡ ಎಷ್ಟು ಗೊತ್ತೇ..?
ಇವತ್ತು ಶಿಕ್ಷೆಯ ಪ್ರಮಾಣವನ್ನು ಪ್ರಕಟ ಮಾಡಿದ್ದು, ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಭಾರೀ ಆಘಾತವಾಗಿದೆ. ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಭಾರೀ ದೊಡ್ಡ ಶಾಕ್ ಸಿಕ್ಕಿದೆ. ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದ್ದು, ಎಲ್ಲ ಅಪರಾಧಿಗಳಿಗೆ 7 ವರ್ಷ ಶಿಕ್ಷೆ ಮತ್ತು 44.54 ಕೋಟಿ ರೂಪಾಯಿ ದಂಡವನ್ನು ವಿಧಿಸಿ ಆದೇಶ ಪ್ರಕಟಿಸಿದ್ದಾರೆ.
ಮೊದಲನೇ ಕೇಸ್:
- ಎಲ್ಲಾ ಆರೋಪಿಗಳಿಗೆ 6 ಕೋಟಿ ದಂಡ
ಎರಡನೇ ಕೇಸ್:
- ಎಲ್ಲಾ ಆರೋಪಿಗಳಿಗೆ 50 ಸಾವಿರ ದಂಡ
- ವಂಚನೆ ಕೇಸ್ನಲ್ಲಿ ಸೈಲ್‌ಗೆ 9 ಕೋಟಿ 60 ಲಕ್ಷ ದಂಡ
ಮೂರನೇ ಕೇಸ್
- ಎಲ್ಲಾ ಆರೋಪಿಗಳಿಗೆ 20 ಸಾವಿರ ರೂ. ದಂಡ
- ವಂಚನೆ ಕೇಸ್ನಲ್ಲಿ ಸೈಲ್‌ಗೆ 9.36 ಕೋಟಿ ದಂಡ
ನಾಲ್ಕನೇ ಪ್ರಕರಣ:
- ಎಲ್ಲಾ ಆರೋಪಿಗಳಿಗೂ ₹9.54 ಕೋಟಿ ದಂಡ
ಐದನೇ ಕೇಸ್:
- ಸೈಲ್ ಸೇರಿ ಎಲ್ಲರಿಗೂ 30 ಸಾವಿರ ದಂಡ
- ಸೈಲ್‌ಗೆ 9.24 ಕೋಟಿ ರೂಪಾಯಿ ದಂಡ
ಆರನೇ ಕೇಸ್:
- ಎಲ್ಲಾ ಆರೋಪಿಗಳಿಗೂ 20 ಸಾವಿರ ದಂಡ
- ವಂಚನೆ ಆರೋಪಕ್ಕೆ ತಲಾ 90 ಸಾವಿರ ದಂಡ
ಇದನ್ನೂ ಓದಿ:BREAKING: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಕಠಿಣ ಶಿಕ್ಷೆ ಪ್ರಕಟ; ಎಷ್ಟು ವರ್ಷ ಜೈಲು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ