VIDEO: ಟೈಟಾನಿಕ್ ರೀತಿಯಲ್ಲೇ ಮತ್ತೊಂದು ಹಡಗು ದುರಂತ; 78 ಮಂದಿ ದಾರುಣ ಸಾವು

author-image
Veena Gangani
Updated On
VIDEO: ಟೈಟಾನಿಕ್ ರೀತಿಯಲ್ಲೇ ಮತ್ತೊಂದು ಹಡಗು ದುರಂತ; 78 ಮಂದಿ ದಾರುಣ ಸಾವು
Advertisment
  • ಹಡಗು ದುರಂತದಲ್ಲಿ ಬರೋಬ್ಬರಿ 78 ಮಂದಿ ದಾರುಣ ಸಾವು
  • ನೋಡುತ್ತಿದ್ದಂತೆ ಮಗುಚಿ ಬಿದ್ದ 278 ಪ್ರಯಾಣಿಕರಿದ್ದ ದೋಣಿ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಗೋಮಾ ಕೀವು: ನೋಡ ನೋಡುತ್ತಿದ್ದಂತೆ ಹಡಗು ಒಂದು ಮಗುಚಿ ಬಿದ್ದ ಘಟನೆ ಪೂರ್ವ ಕಾಂಗೋದ ಕಿವು ಸರೋವರದಲ್ಲಿ ನಡೆದಿದೆ. ಈ ದುರಂತದಲ್ಲಿ ಬರೋಬ್ಬರಿ 78 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್‌ ಮಾಂಜಾ!

publive-image

ಪೂರ್ವ ಕಾಂಗೋದ ಕಿವು ಸರೋವರದಲ್ಲಿ ಸುಮಾರು 278 ಪ್ರಯಾಣಿಕರಿದ್ದ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ 78 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಮಾಹಿತಿ ನೀಡಿದ್ದಾರೆ. ಇನ್ನೂ ಈ ಸಾವಿನ ಸಂಖ್ಯೆ ಇನ್ನೂ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ದಕ್ಷಿಣ ಕಿವು ಪ್ರಾಂತ್ಯದ ಗವರ್ನರ್ ಜೀನ್-ಜಾಕ್ವೆಸ್ ಪುರುಸಿ ತಿಳಿಸಿದ್ದಾರೆ.

publive-image

278 ಪ್ರಯಾಣಿಕರಿಂದ ತುಂಬಿದ್ದ ದೋಣಿಯು ನೋಡ ನೋಡುತ್ತಲೇ ಟೈಟಾನಿಕ್ ಬೋಟ್ ರೀತಿಯಲ್ಲೇ ಮಗುಚಿ ಬಿದ್ದಿದೆ. ಇದು ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಪ್ರಯಾಣ ಮಾಡುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಈ ಘಟನೆ ನಡೆದಿದ್ದು ಗೋಮಾ ಕಾಂಗೋದಲ್ಲಿ ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಗೋವಾದಲ್ಲಿ ಈ ದುರಂತ ನಡೆದಿದೆ ಎಂದು ವೈರಲ್​ ಮಾಡುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ ಎಂದು ಗೋವಾ ಪೊಲೀಸರು ಸ್ಪಷ್ಟಪಡಿಸಿದ್ದು, ವಿಡಿಯೋ ಕಾಂಗೋದಿಂದ ಬಂದಿದೆ.

ಇದನ್ನೂ ಓದಿ: BBK11 ಇಂದು ಕಿಚ್ಚನ ಮೊದಲ ಮಾತುಕತೆ; ಈ ಸ್ಪರ್ಧಿಗಳಿಗೆ ಪುಕಪುಕ..! ವಿಡಿಯೋ

ಇನ್ನೂ, ದೋಣಿ ಮುಳುಗಿದ ಸುದ್ದಿ ತಿಳಿದ ಕೂಡಲೇ ತಕ್ಷಣವೇ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿ ಸುಮಾರು 10 ಮಂದಿಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಇನ್ನು ಮುಳುಗಿದ ದೋಣಿಯಿಂದ ಕನಿಷ್ಠ 50 ಶವಗಳನ್ನು ಹೊರತೆಗೆಯಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment