/newsfirstlive-kannada/media/post_attachments/wp-content/uploads/2025/06/shubhanshu-shukla-9.jpg)
ನವದೆಹಲಿ: 41 ವರ್ಷದ ಬಳಿಕ ಮತ್ತೆ ಭಾರತ ಬಾಹ್ಯಾಕಾಶದಲ್ಲಿ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಮಂಗಳಯಾನ, ಚಂದ್ರಯಾನ, ಸೂರ್ಯಯಾನ. ಯಾರೂ ಇಳಿಯದ ಚಂದಿರನ ದಕ್ಷಿಣ ದಿಕ್ಕಿನಲ್ಲಿ ಇಳಿದು ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿತ್ತು. ಈಗ ಮತ್ತೊಂದು ರೀತಿಯಲ್ಲಿ ಭಾರತ ಸಾಧನೆ ಮಾಡಲು ಮುಂದಾಗಿದೆ. ಸುನಿತಾ ವಿಲಿಯಮ್ಸ್​, ಕಲ್ಪನಾ ಚಾವ್ಲಾ ಬೆನ್ನಲ್ಲೇ ಮತ್ತೊಬ್ಬ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಆಗಸದಲ್ಲಿ ಹೊಸ ದಾಖಲೆ ಬರೆಯಲು ಸಿದ್ಧವಾಗಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಹೊಸ ದಾಖಲೆ ಬರೆಯಲಿದೆ ಭಾರತ
ಆ್ಯಕ್ಸಿಯಮ್ ನೌಕೆಯಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ಶುಭಾಂಶು ಶುಕ್ಲಾ
ಬಾಹ್ಯಾಕಾಶ ಕ್ಷೇತ್ರದಲ್ಲಿ ಯಾರೂ ಮಾಡಿರದ ಹಲವು ದಾಖಲೆಗಳನ್ನ ಭಾರತ ತನ್ನ ಹೆಸರಲ್ಲಿ ಬರೆಸಿದೆ. ದೊಡ್ಡ, ದೊಡ್ಡ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಮಾಡಿ ವಿಶ್ವವನ್ನೇ ನಿಬ್ಬೆರಗುಗೊಳಿಸಿದೆ. ಹೀಗಿರುವಾಗ ಭಾರತ ಇಂದು ಮತ್ತೊಂದು ಇತಿಹಾಸ ನಿರ್ಮಿಸಲಿದೆ.
/newsfirstlive-kannada/media/post_attachments/wp-content/uploads/2025/06/shubhanshu-shukla-4.jpg)
ಗಗನಯಾತ್ರಿ ಶುಭಾಂಶು ಶುಕ್ಲಾ ಭಾರತೀಯ ಕಾಲಮಾನದಂತೆ ಇಂದು ಸಂಜೆ 5.22ಕ್ಕೆ ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ಪ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ತೆರಳಲಿದ್ದಾರೆ. ಪಾಲ್ಕನ್ 9 ನಲ್ಲಿ ಡ್ರ್ಯಾಗನ್ ಸ್ಪೇಸ್ ಕ್ರಾಪ್ಟ್ ರಾಕೆಟ್​ನಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಪಯಣಿಸಲಿದ್ದಾರೆ. 41 ವರ್ಷಗಳ ಬಳಿಕ ಮತ್ತೆ ಭಾರತೀಯರು ಅಂತರಿಕ್ಷ ಯಾತ್ರೆ ಕೈಗೊಳ್ಳುವ ಜೊತೆಗೆ ಮೊದಲ ಬಾರಿ ಭಾರತೀಯರು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಡುತ್ತಿದ್ದಾರೆ.
ಇದನ್ನೂ ಓದಿ: BREAKING: ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ದಿಢೀರ್ ಮುಂದೂಡಿಕೆ
/newsfirstlive-kannada/media/post_attachments/wp-content/uploads/2025/06/shubhanshu-shukla.jpg)
ಬಾಹ್ಯಾಕಾಶದಲ್ಲಿ ಭಾರತಕ್ಕೆ ಶುಭಗಳಿಗೆ
ಅಮೆರಿಕದ ಆ್ಯಕ್ಸಿಯಾಮ್ ನೌಕೆಯಲ್ಲಿ ನಾಲ್ವರು ಯಾತ್ರಿಗಳು ಇಂದು ಪ್ರಯಾಣ ಕೈಗೊಳ್ಳಲಿದ್ದಾರೆ. ಭಾರತದ ಶುಭಾಂಶು ಶುಕ್ಲಾ ಹಾಗೂ ಅಮೆರಿಕದ ಪೆಗ್ಗಿ ವಿಟ್ಸನ್ ಪೈಲಟ್ ಆಗಿರಲಿದ್ದಾರೆ. ಪೋಲೆಂಡ್‌ನ ವಿಜ್ಞಾನಿ ಹಾಗೂ ಇಂಜಿನಿಯರ್ ಸ್ಲವೋಝ್ ಉಝ್‌ನಾಸ್ಕಿ, ಹಂಗೇರಿಯ ಇಂಜಿನಿಯರ್ ಟಿಬರ್ ಕಪು ISSಗೆ ತೆರಳುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/shubhanshu-shukla-1.jpg)
ಶುಕ್ಲಾ ತಮ್ಮೊಂದಿಗೆ ISSಗೆ ಹೆಸರುಬೇಳೆ ಹಲ್ವಾ, ಕ್ಯಾರೆಟ್ ಹಲ್ವಾ, ಮಾವಿನ ಹಣ್ಣು ಮತ್ತು ಅನ್ನವನ್ನು ಕೊಂಡೊಯ್ಯಲಿದ್ದಾರೆ. ಈ ನೌಕೆಯನ್ನು ಹೊತ್ತು ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಡ್ರ್ಯಾಗನ್ ನೌಕೆ ಇಂದು ಸಂಜೆ 5.22ಕ್ಕೆ ಬಾಹ್ಯಾಕಾಶಕ್ಕೆ ಜಿಗಿಯಲಿದೆ. ನಾಲ್ವರು ಗಗನಯಾತ್ರಿಗಳನ್ನು ಹೊತ್ತ ನೌಕೆ ಸಂಜೆ ಹೊರಟರೂ ಅದು ISS ತಲುಪಲು 28 ಗಂಟೆ ಬೇಕು. ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತಿದ ಬಳಿಕ ನೌಕೆ ISS ತಲುಪಲಿದೆ.
/newsfirstlive-kannada/media/post_attachments/wp-content/uploads/2025/06/shubhanshu-shukla-6.jpg)
ಆಕ್ಸಿಮ್-4 ರಾಕೆಟ್ ಉಡಾವಣೆಗೆ ಇನ್ನೂ ಕೆಲವೇ ಗಂಟೆಗಳು ಬಾಕಿ ಇದ್ದು, ಶುಭಾಂಶು ಶುಕ್ಲಾ ಸ್ಪೇಸ್ ಎಕ್ಸ್ ಪ್ಲೈಟ್ ಸೂಟ್ ನಲ್ಲಿ ಫೈನಲ್ ಡ್ರೆಸ್ ರಿಹರ್ಸಲ್ ನಡೆಸಿದ್ದಾರೆ. ನಾಸಾ ಜೊತೆಗೂಡಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾನ ಮಾಡ್ತದ್ದಾರೆ. ಅಂದುಕೊಂಡಂಗೆ ಆಗಿದ್ರೆ ನಿನ್ನೆಯೇ ರಾಕೆಟ್ ಉಡಾವಣೆ ಆಗಬೇಕಿತ್ತು ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಇಂದು ರಾಕೆಟ್ ಉಡಾವಣೆಯಾಗಲಿದೆ.
/newsfirstlive-kannada/media/post_attachments/wp-content/uploads/2025/06/shubhanshu-shukla-2.jpg)
ಭಾರತ ಸರ್ಕಾರ ಈ ಯಾನಕ್ಕೆ ಅಂದಾಜು 500 ಕೋಟಿ ರೂಪಾಯಿ ವ್ಯಯಿಸಿದೆ ಎನ್ನಲಾಗಿದೆ. ಈ 14 ದಿನಗಳ ಮಿಷನ್‌ನಲ್ಲಿ ಶುಭಾಂಶು 7 ವೈಜ್ಞಾನಿಕ ಪ್ರಯೋಗ ನಡೆಸಲಿದ್ದು ಭಾರತದ ಗಗನಯಾನ ಯೋಜನೆಯ ಹೊಸ ಮೈಲಿಗಲ್ಲಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us