Advertisment

ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ

author-image
admin
Updated On
ವಿಷ್ಣುವರ್ಧನ್ ಹುಟ್ಟಿದ ದಿನ ಮಗು ಜನನ.. ಕವಿತಾ ಗೌಡ, ಚಂದನ್‌ಗೆ ಶುಭಾಶಯಗಳ ಮಹಾಪೂರ
Advertisment
  • ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಎಂದ ಸ್ಟಾರ್ ಜೋಡಿ!
  • ಮುದ್ದು ಮಗನ ಕಾಲನ್ನು ಸ್ಪರ್ಶಿಸಿ ಸಂತಸ ಹಂಚಿಕೊಂಡ ಚಂದನ್
  • ಕವಿತಾ ಗೌಡ, ಚಂದನ್ ಕುಮಾರ್ ಜೋಡಿ ಇವತ್ತು ಸಖತ್ ಸ್ಪೆಷಲ್‌!

ಲಕ್ಷ್ಮಿ ಬಾರಮ್ಮ ಸೀರಿಯಲ್ ಖ್ಯಾತಿಯ ನಟಿ ಕವಿತಾ ಗೌಡ, ಚಂದನ್ ಕುಮಾರ್ ಮನೆಗೆ ಮುದ್ದಾದ ಮಗುವಿನ ಆಗಮನವಾಗಿದೆ. ಕವಿತಾ ಗೌಡ ಅವರು ಗಂಡು ಮಗುವಿನ ಜನ್ಮ ನೀಡಿದ್ದಾರೆ. ತಂದೆಯಾದ ಖುಷಿಯಲ್ಲಿ ಚಂದನ್ ಕುಮಾರ್ ಮಗನ ಮೊದಲ ವಿಡಿಯೋ ಹಂಚಿಕೊಂಡಿದ್ದಾರೆ. ಕವಿತಾ ಗೌಡ, ಚಂದನ್ ಕುಮಾರ್ ಮನೆಯಲ್ಲಿ ಸಂಭ್ರಮ ದುಪ್ಪಟ್ಟಾಗಿದೆ.

Advertisment

ಇದನ್ನೂ ಓದಿ: ಲಕ್ಷ್ಮೀ ಬಾರಮ್ಮ ಸೀರಿಯಲ್​ ನಟಿ ಕವಿತಾ ಗೌಡ ಹೊಸ ಫೋಟೋಶೂಟ್​; ತುಂಬು ಗರ್ಭಿಣಿಗೆ ಫ್ಯಾನ್ಸ್​ ಶುಭ ಹಾರೈಕೆ 

ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಎಂದು ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಮಗನ ಕಾಲನ್ನು ಸ್ಪರ್ಶಿಸಿರುವ ಫೋಟೋ ಹಾಗೂ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಅವರು ಪೋಸ್ಟ್ ಮಾಡಿರೋ ಈ ವಿಡಿಯೋ ಶುಭಾಶಯಗಳ ಸುರಿಮಳೆ ಹರಿದು ಬಂದಿದೆ. ಕಂಗ್ರಾಟ್ಸ್‌ ಹೇಳಿತ್ತಿರುವ ಅಭಿಮಾನಿಗಳು ತುಂಬು ಹೃದಯದಿಂದ ಶುಭ ಹಾರೈಸುತ್ತಿದ್ದಾರೆ. ಅಭಿಮಾನಿಗಳ ಶುಭಾಶಯಗಳಿಗೆ ಚಂದನ್ ಕುಮಾರ್ ಕೂಡ ಎಲ್ಲರಿಗೂ ಹೃದಯಪೂರ್ವಕವಾದ ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisment

ಇದನ್ನೂ ಓದಿ: ಗರ್ಭಿಣಿ ಪತ್ನಿಗಾಗಿ ಏನೆಲ್ಲಾ ಮಾಡ್ತಾರೆ ಚಂದನ್​ ಗೌಡ; ಕವಿತಾ ಗೌಡ ಆಸೆ ಈಡೇರಿಸಿದ್ರು ನೋಡಿ​ 

ಇನ್ನು ಇವತ್ತು ಮತ್ತೊಂದು ವಿಶೇಷವಿದೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಹುಟ್ಟಿದ ದಿನ ಇವತ್ತೇ. ಇಂದೇ ಕವಿತಾ ಗೌಡ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ವಿಷ್ಣುವರ್ಧನ್ ಅಭಿಮಾನಿಗಳು, ನೆಟ್ಟಿಗರು ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಜೋಡಿಗೆ ಸೂಪರ್. ತುಂಬಾ ಖುಷಿಯಾಯ್ತು ಎಂದು ಶುಭ ಕೋರಿದ್ದಾರೆ. ಪುಟ್ಟ ಗಣಪನೇ ಧರೆಗಿಳಿದು ಬಂದ. ವೆಲ್‌ಕಮ್‌ ಟು ಮುದ್ದು ಗಣೇಶ ಎಂದು ಪ್ರೀತಿಯಿಂದ ಕಮೆಂಟ್‌ ಮಾಡುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment