newsfirstkannada.com

ಕೈಕಾಲು ಕಟ್ಟಿ, ಮರಕ್ಕೆ ನೇತು ಹಾಕಿ ಚಿತ್ರಹಿಂಸೆ.. ಗ್ಯಾರಂಟಿ ಸಮಾವೇಶದ ದಿನವೇ ಕೈ ಕಾರ್ಯಕರ್ತನ ಭೀಕರ ಹತ್ಯೆ

Share :

Published March 12, 2024 at 1:51pm

  ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದಪುಡಿ ಎರಚಿರುವ ಶಂಕೆ

  ಕೈಕಾಲು ಕಟ್ಟಿ, ಮರಕ್ಕೆ ನೇಣು ಹಾಕಿ ಕಾಂಗ್ರೆಸ್​ ಕಾರ್ಯಕರ್ತನ ಕೊಲೆ

  ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಪ್ರಮುಖನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ

ಗದಗ: ಕಾಂಗ್ರೆಸ್ ಕಾರ್ಯಕರ್ತನ ಕೈಕಾಲು ಕಟ್ಟಿ ಮರಕ್ಕೆ ನೇಣು ಹಾಕಿ ಚಿತ್ರಹಿಂಸೆ ನೀಡಿ ಕೊನೆಗೆ ಭೀಕರ ಹತ್ಯೆ ನಡೆಸಿದ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ.

ಡೋಣಿ ಗ್ರಾಮದ ಶರಣಪ್ಪ ಸಂದೀಗೌಡರ್ ಕೊಲೆಯಾದ ವ್ಯಕ್ತಿ. ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ, ಮರಕ್ಕೆ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶರಣಪ್ಪ ಸಂದೀಗೌಡರ್ ಡೋಣಿ ಗ್ರಾಮದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಪ್ರಮುಖನಾಗಿ ಕಾರ್ಯನಿರ್ವಹಿಸುತ್ತಿದ್ದ. ಇಂದು ಡಂಬಳ ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಇನ್ನೊಂದೆಡೆ ಕೈ ಕಾರ್ಯಕರ್ತನ ಭೀಕರ ಹತ್ಯೆ ನಡೆದಿದೆ.

ಕೊಲೆಯ ಸ್ವರೂಪ‌ ನೋಡಿ ಡೋಣಿ ಡಾಂಬಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೈಕಾಲು ಕಟ್ಟಿ, ಮರಕ್ಕೆ ನೇತು ಹಾಕಿ ಚಿತ್ರಹಿಂಸೆ.. ಗ್ಯಾರಂಟಿ ಸಮಾವೇಶದ ದಿನವೇ ಕೈ ಕಾರ್ಯಕರ್ತನ ಭೀಕರ ಹತ್ಯೆ

https://newsfirstlive.com/wp-content/uploads/2024/03/gadag-4.jpg

Load More