ಸಾವರ್ಕರ್ ವರ್ಸಸ್ ಅಂಬೇಡ್ಕರ್‌.. ಸದನದಲ್ಲಿ ಕಾಂಗ್ರೆಸ್, ಬಿಜೆಪಿ ರೋಚಕ ಕದನ; ಅಸಲಿಗೆ ಆಗಿದ್ದೇನು?

author-image
admin
Updated On
ಸಾವರ್ಕರ್ ವರ್ಸಸ್ ಅಂಬೇಡ್ಕರ್‌.. ಸದನದಲ್ಲಿ ಕಾಂಗ್ರೆಸ್, ಬಿಜೆಪಿ ರೋಚಕ ಕದನ; ಅಸಲಿಗೆ ಆಗಿದ್ದೇನು?
Advertisment
  • ಡಾ.ಬಿ.ಆರ್. ಅಂಬೇಡ್ಕರ್ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ಗದ್ದಲ
  • ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದ ಪತ್ರವನ್ನು ತೋರಿಸಿದ ಸಚಿವ ಪ್ರಿಯಾಂಕ್
  • ಆರ್‌ಎಸ್‌ಎಸ್‌ ಕುತಂತ್ರಿ ಎಂದ ಸಿಎಂ.. ಸದನದಲ್ಲಿ ಕೋಲಾಹಲ

ರಾಜ್ಯದಲ್ಲಿ ಸಿಎಂ ಬದಲಾಗ್ತಾರೋ? ಬಿಡ್ತಾರೋ? ಆದರೆ ಪವರ್ ಶೇರಿಂಗ್ ಪ್ರಹಸನಕ್ಕೆ ಮಾತ್ರ ತೆರೆ ಬೀಳ್ತಿಲ್ಲ. ಕಾಂಗ್ರೆಸ್ ಪಾಳಯ ಬಿಟ್ರೂ ಬಿಜೆಪಿ ಮಾತ್ರ ಎಲ್ಲೇ ಹೋದ್ರೂ ಕುರ್ಚಿ ಕದನವನ್ನೇ ಕೆದಕುತ್ತಿದೆ. ಸದನದಲ್ಲೂ ಸಿಎಂ ಪಟ್ಟದ ಚರ್ಚೆಯೇ ಏಟು-ಎದುರೇಟಿಗೆ ಕಾರಣವಾಗಿದೆ. ಅಂಬೇಡ್ಕರ್, ಸಾವರ್ಕರ್ ವಿಚಾರವೂ ಸದನದಲ್ಲಿ ಪ್ರತಿಧ್ವನಿಸಿದೆ. ಪರಸ್ಪರ ಧಿಕ್ಕಾರ, ಘೋಷಣೆಗಳಿಗೆ ಇವತ್ತಿನ ಸದನ ಸಾಕ್ಷಿಯಾಗಿದೆ.

ಸದನದಲ್ಲಿ ಗದ್ದಲ.. ಕೋಲಾಹಲ.. ಕುರ್ಚಿ ಕದನ.. ಕರಿಮಣಿ ಮಾಲೀಕ ಯಾರೆಂಬ ಪ್ರಹಸನ.. ಅಂಬೇಡ್ಕರ್, ಸಾವರ್ಕರ್ ಸಮರ.. ಇವತ್ತಿನ ಇಡೀ ದಿನದ ಅಧಿವೇಶನ ಬರೀ ಗದ್ದಲ.. ಕೋಲಾಹಲಕ್ಕೆ ಸಾಕ್ಷಿಯಾಗಿದೆ.

publive-image

ಅಧಿವೇಶನಲ್ಲಿ ‘ಮುಖ್ಯಮಂತ್ರಿ ಕುರ್ಚಿ’ ಕದನ
‘ಕರಿಮಣಿ ಮಾಲೀಕ’ ಯಾರು ಎಂದ ‘ಕಮಲ’
ರಾಜ್ಯ ಬಜೆಟ್‌ ಅಧಿವೇಶನದಲ್ಲಿ ಗ್ಯಾರಂಟಿ ಗದ್ದಲದ ಜೊತೆ ಸಿಎಂ ಕುರ್ಚಿ ಕದನವೂ ಕೋಲಾಹಲಕ್ಕೆ ಕಾರಣವಾಗಿತ್ತು. ಇಷ್ಟು ದಿನ ಸ್ವಪಕ್ಷೀಯರ ಮಧ್ಯೆ ಚರ್ಚೆಯಾಗ್ತಿದ್ದ ಅಧಿಕಾರ ಹಂಚಿಕೆ ಪ್ರಹಸನ ಅಧಿವೇಶನದಲ್ಲೂ ಸದ್ದು ಮಾಡಿತ್ತು. ಬಿಜೆಪಿ ನಾಯಕರು ಅಧಿಕಾರ ಕಿತ್ತಾಟವನ್ನೇ ಅಸ್ತ್ರ ಮಾಡಿಕೊಂಡು ಸಿಎಂ ಸಿದ್ದರಾಮಯ್ಯರ ಕಾಲು ಎಳೆದ್ರು. ಅದರಲ್ಲೂ ವಿಪಕ್ಷ ನಾಯಕ ಆರ್. ಅಶೋಕ್‌ ಕರಿಮಣಿ ಮಾಲೀಕ ಯಾರು ಎನ್ನುತ್ತಾ ಪಟ್ಟದ ಪೈಪೋಟಿ ಬಗ್ಗೆ ಸಿಎಂನ ಪ್ರಶ್ನೆ ಮಾಡಿದ್ರು.

publive-image

ಆರ್. ಅಶೋಕ್ ಎತ್ತಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ನಿಗಿ ನಿಗಿ ಕೆಂಡವಾಗಿದ್ರು. ನಿಮ್ಮಿಂದ ಇಂತಹ ಮಾತುಗಳನ್ನ ನಿರೀಕ್ಷಿಸಿರಲಿಲ್ಲ. ಇದು ಅಭಿರುಚಿಹೀನ ಮಾತುಗಳು ಅಂತ ಆರ್‌. ಅಶೋಕ್‌ಗೆ ಸಿಎಂ ಖಾರವಾಗಿ ಪ್ರತಿಕ್ರಿಯಿಸಿದ್ರು.

ಇದನ್ನೂ ಓದಿ: ತೆಲಂಗಾಣದಲ್ಲಿ ಗ್ಯಾರಂಟಿಗೆ ಹಣ ಹೊಂದಿಸಲು ಕಾಂಗ್ರೆಸ್‌ ಸರ್ಕಾರದ ಪರದಾಟ.. ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು? 

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ರು. ಇದೇ ವೇಳೆ ಡಾ.ಬಿ.ಆರ್. ಅಂಬೇಡ್ಕರ್ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಗದ್ದಲ ಮಿತಿ ಮೀರಿತ್ತು. ಇದೇ ವೇಳೆ ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದ ಪತ್ರವನ್ನ ಸಚಿವ ಪ್ರಿಯಾಂಕ್ ಓದಲು ಆರಂಭಿಸ್ತಿದ್ದಂತೆ ಸದನ ಗೊಂದಲದ ಗೂಡಾಗಿತ್ತು.

ಜನವರಿ 18, 1952 ರಂದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಪರಿಚಯದವರಿಗೆ ಪತ್ರ ಬರೆದರು. ವಿನಾಯಕ ದಾಮೋದರ್ ಸಾವರ್ಕರ್ ಅವರು ತಮ್ಮ ಚುನಾವಣಾ ಸೋಲಿನಲ್ಲಿ ಹೇಗೆ ಪಾತ್ರ ವಹಿಸಿದರು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತಮ್ಮ ಪತ್ರದಲ್ಲಿ, ಡಾ. ಅಂಬೇಡ್ಕರ್ ಅವರು ತಮ್ಮ ನಷ್ಟಕ್ಕೆ ಕಾರಣವಾದ ಅಂಶಗಳನ್ನು ವಿವರಿಸಿದರು, ಸಾವರ್ಕರ್ ಅವರ ಪ್ರಭಾವ ಮತ್ತು ಅವರ ವಿರುದ್ಧ ಕೆಲಸ ಮಾಡಿದ ರಾಜಕೀಯ ತಂತ್ರಗಳನ್ನು ಎತ್ತಿ ತೋರಿಸಿದರು. ಆ ಪತ್ರ ಇಲ್ಲಿದೆ. ಬಿಜೆಪಿ ಶಾಸಕರು ಯಾವಾಗ ರಾಜೀನಾಮೆ ನೀಡುತ್ತಾರೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.


">March 17, 2025

ಹೀಗೆ ಗಲಾಟೆ ಮಿತಿ ಮೀರಿದಾಗ ಸದನದಲ್ಲಿ ಭಾಗವಹಿಸುವುದು ಇಷ್ಟ ಇಲ್ಲವೆಂದ್ರೆ ಹೊರಗೆ ಹೋಗಿ. ಇಲ್ಲದಿದ್ರೆ ನಾನೇ ಎತ್ತಿ ಹೊರಗೆ ಬಿಸಾಡಬೇಕಾಗುತ್ತೆ ಅಂತ ಸ್ಪೀಕರ್ ಯು.ಟಿ. ಖಾದರ್ ಗುಡುಗಿದ್ರು. ನೀವ್ಯಾವ ಸೀಮೆ ಅಧ್ಯಕ್ಷ. ಎತ್ತಿ ಬಿಸಾಡ್ತೀನಿ ಅಂದ್ರೆ ಏನರ್ಥ ಅಂತ ಬಿಜೆಪಿ ಶಾಸಕ ಸ್ಪೀಕರ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ರು.

publive-image

ಆರ್‌ಎಸ್‌ಎಸ್‌ ಕುತಂತ್ರಿ ಎಂದ ಸಿಎಂ.. ಸದನದಲ್ಲಿ ಗದ್ದಲ
ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ ಆರ್‌ಎಸ್‌ಎಸ್‌ನವರು ಕುತಂತ್ರಿಗಳು? ಬಿಜೆಪಿಗರು ಆರ್‌ಎಸ್‌ಎಸ್ ಏಜೆಂಟ್ಸ್ ಅಂತ ಕಿಡಿಕಾರಿದ್ರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕರು ಜೈಶ್ರೀರಾಮ್ ಎನ್ನುತ್ತಾ ಆರ್‌ಎಸ್‌ಎಸ್ ಪರ ಘೋಷಣೆ ಕೂಗಿದ್ರು. ಈ ವೇಳೆ ಸದನದಲ್ಲಿ ಭಾರೀ ಹೈಡ್ರಾಮಾವೇ ನಡೆದೋಯ್ತು.

ಹೀಗೆ ಗಲಾಟೆ, ಗದ್ದಲ, ಕೋಲಾಹಲವೇ ಇವತ್ತಿನ ಸದನದಲ್ಲಿ ಮನೆ ಮಾಡಿತ್ತು. ಸಿಎಂ ಕುರ್ಚಿ.. ಕರಿಮಣಿ ಮಾಲೀಕ ಎಂಬ ಚರ್ಚೆಯೇ ಅರ್ಧ ಸದನವನ್ನ ತಿಂದು ಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment