newsfirstkannada.com

ಶಿವಮೊಗ್ಗ ಹಳೇ ಜೈಲಿನ ಆವರಣದ ಹೆಸರಿಗೆ ಜಟಾಪಟಿ; ಸಿಎಂ ಮಾತು ಅಲ್ಲಗೆಳೆದ ಬಿ.ವೈ.ರಾಘವೇಂದ್ರ

Share :

Published January 14, 2024 at 7:25am

  ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಜಟಾಪಟಿ ಶುರು

  ಸ್ವಾತಂತ್ರ್ಯ ಹೋರಾಟಗಾರರ ಬಂಧನಕ್ಕೆ ಸಾಕ್ಷಿಯಾಗಿದ್ದ ಜೈಲು

  ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಕೊರತೆ ಎಂದ ಬಿ.ವೈ.ರಾಘವೇಂದ್ರ

ಸ್ವಾತಂತ್ರ್ಯ ಹೋರಾಟಗಾರರ ಬಂಧನ ಮತ್ತು ಸೆರೆವಾಸಕ್ಕೆ ಸಾಕ್ಷಿಯಾಗಿರುವ ಶಿವಮೊಗ್ಗದ ಹಳೇ ಜೈಲಿನ ಆವರಣಕ್ಕೆ ಹೆಸರನ್ನಿಡುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಜಟಾಪಟಿ ಶುರುವಾಗಿದೆ.

ಹಳೆಯ ಜೈಲಿನ ಜಾಗವನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಂದ್ರಶೇಖರ್​ ಆಜಾದ್​ ಫ್ರೀಡಂ ಪಾರ್ಕ್​ ಎಂದು ಕರೆಯಲಾಗುತ್ತಿತ್ತು. ಆದರೆ ಇದೀಗ ಚಂದ್ರಶೇಖರ್​ ಆಜಾದ್​ ಫ್ರೀಡಂ ಪಾರ್ಕ್​ ಬದಲು ಶಿವಮೊಗ್ಗದವರೇ ಆದ ವಚನಕಾರ ಅಲ್ಲಮಪ್ರಭು ಫ್ರೀಡಂ ಪಾರ್ಕ್ ಹೆಸರಿಡಬೇಕೆಂಬ ಕೂಗು ಜೋರಾಗಿದೆ.

ಇನ್ನು ಈ ಜೈಲು ಸಿಎಂ ಆಗಿದ್ದಾಗ ಸ್ಥಳಾಂತರಗೊಂಡಿತು ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನ ಸಂಸದ ಬಿ.ವೈ.ರಾಘವೇಂದ್ರ ಅಲ್ಲಗಳೆದಿದ್ದಾರೆ. 2019ರಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆದಾಗ ಕಾರಾಗೃಹ ಇಲಾಖೆಯಿಂದ ಹಳೆ ಜೈಲಿನ ಜಾಗವನ್ನು ಸಾರ್ವಜನಿಕರ ಬಳಕೆಗೆ ನೀಡುವಂತೆ ಆದೇಶಿಸಿದ್ದರು. ಆದರೆ ಮಾಹಿತಿ ಕೊರತೆಯಿಂದ ಸಿದ್ದರಾಮಯ್ಯ ಆ ರೀತಿ ಹೇಳಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿವಮೊಗ್ಗ ಹಳೇ ಜೈಲಿನ ಆವರಣದ ಹೆಸರಿಗೆ ಜಟಾಪಟಿ; ಸಿಎಂ ಮಾತು ಅಲ್ಲಗೆಳೆದ ಬಿ.ವೈ.ರಾಘವೇಂದ್ರ

https://newsfirstlive.com/wp-content/uploads/2024/01/B-Y-raghavendra.jpg

Load More