Advertisment

Breaking: ಬದಲಾಯ್ತು ಪ್ಲಾನ್​.. ದಿಢೀರ್​ ಕರೆದ ಸಚಿವ ಸಂಪುಟ ಸಭೆ ರದ್ದು.. ಮುಂದಿನ ನಿರ್ಧಾರ ಏನು?

author-image
Gopal Kulkarni
Updated On
ಸರ್ಕಾರದ ಕೈ ಸೇರಿದ ಜಾತಿ ಗಣತಿ.. ‘ಅದು ಜಾತಿ ಗಣತಿ ಅಲ್ಲ, ಕೇವಲ ವರದಿ’ ಎಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ..!
Advertisment
  • ಸಂಜೆ ಸಿಎಂ ಕರೆದಿದ್ದ ಸಚಿವ ಸಂಪುಟ ಸಭೆ ಏಕಾಏಕಿ ರದ್ದುಗೊಳಿಸಲಾಗಿದೆ
  • ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ಒಪ್ಪಿಗೆ ನೀಡಿದ ಬೆನ್ನಲ್ಲೆ ಸಭೆ ಕರೆಯಲಾಗಿತ್ತು
  • ಇಂದು ಸಂಜೆ 5.30ಕ್ಕೆ ಸಚಿವ ಸಂಪುಟ ಸಭೆ ಕರೆದಿದ್ದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಂಜೆ 5.30ಕ್ಕೆ ಕರೆದಿದ್ದ ದಿಢೀರ್ ಸಚಿವ ಸಂಪುಟ ಸಭೆಯನ್ನ ಕಾಂಗ್ರೆಸ್ ಸರ್ಕಾರ ಅಷ್ಟೇ ದಿಢೀರ್ ಆಗಿ ರದ್ದುಗೊಳಿಸಿದೆ. ಡಿಸಿಎಂ ನೇತೃತ್ವದಲ್ಲಿ ಇಂದು ಎಲ್ಲ ಸಚಿವರು 12.30ಕ್ಕೆ ರಾಜ್ಯಪಾಲರ ಭೇಟಿಗೆ ಹೋಗಿಲಿದ್ದಾರೆ. ರಾಜ್ಯಪಾಲರ ಜೊತೆ ಚರ್ಚೆ ನಡೆಸಲಿದ್ದು ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ.

Advertisment

ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ಉಸ್ತುವಾರಿ ಸುರ್ಜೇವಾಲ ಕರೆ ಮಾಡಿ ನಾವು ನಿಮ್ಮೊಂದಿಗಿದ್ದೇವೆ ಧೈರ್ಯವಾಗಿರಿ ಎಂದು ಭರವಸೆ ನೀಡಿದ್ದಾರೆ. ಹೈಕಮಾಂಡ್ ಅಂಗಳದಿಂದ ಕರೆ ಬಂದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ತನ್ನ ಸಚಿವ ಸಂಪುಟ ಸಭೆಯನ್ನು ರದ್ದುಗೊಳಿಸಿದೆ.

ಇದನ್ನೂ ಓದಿ:ಸಿಎಂಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಎಂದ ಕನ್ಹಯ್ಯ.. ಸಿದ್ದರಾಮಯ್ಯರವರಿಂದ ಬಂದ ತುರ್ತು ಕರೆ ಬಗ್ಗೆ ಹೇಗಿತ್ತು ಅಂದ್ರೆ

ಸಂಜೆ 5.30ಕ್ಕೆ ಸಚಿವ ಸಂಪುಟ ಸಭೆ ಕರೆದಿದ್ದ ಸಿಎಂ

ಇಂದು ಬೆಳ್ ಬೆಳಗ್ಗೆನೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ರಾಜ್ಯಪಾಲ ಥಾವರ್​ ಚೆಂದ್​ ಗೆಹ್ಲೋಟ್​ ಮುಡಾ ಹಗರಣದ ಪ್ರಕರಣದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೆ ಹಲವು ರಾಜಕೀಯ ಚಟುವಟಿಕೆಗಳು ಏಕಾಏಕಿ ಗರಿಗೆದರಿವೆ.

Advertisment

ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಸಚಿವ ಸಂಪುಟ ಸಭೆಯನ್ನು ಕರೆದಿದ್ದರು. ಸಚಿವ ಸಂಪುಟ ಸಭೆಯಲ್ಲಿ ಪ್ರಾಸಿಕ್ಯೂಷನ್ ವಿಚಾರವಾಗಿ ಪಕ್ಷ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇತ್ತು. ಆದ್ರೆ ಏಕಾಏಕಿ ಸಚಿವ ಸಂಪುಟ ಸಭೆ ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಅಚ್ಚರಿಯ ನಡೆಯನ್ನಿಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment