newsfirstkannada.com

ಪಾಕ್​ ಪರ ಘೋಷಣೆ ವಿವಾದ; ಬಿಜೆಪಿ ನಾಯಕರ ವಿರುದ್ಧವೇ ಕಾಂಗ್ರೆಸ್​ ಪೊಲೀಸ್​ ದೂರು!

Share :

Published February 28, 2024 at 9:19pm

    ತಾರಕಕ್ಕೇರಿದ ಪಾಕ್​ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ವಿವಾದ

    ಬಿಜೆಪಿ ವಿರುದ್ಧ ದೂರು ನೀಡಿದ ಯೂತ್​ ಕಾಂಗ್ರೆಸ್​ ಅಧ್ಯಕ್ಷ ನಲಪಾಡ್​​​

    ಕೂಡಲೇ ಕ್ರಮಕೈಗೊಳ್ಳಿ ಎಂದು ಕಮಿಷನರ್​​ಗೆ ನಲಪಾಡ್​ ಒತ್ತಾಯ!

ಬೆಂಗಳೂರು: ಪಾಕ್‌ ಪರ ಘೋಷಣೆ ಕೂಗಿದ್ದಾರೆ ಎನ್ನಲಾದ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿದೆ. ವಿಡಿಯೋವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಿ ಸತ್ಯಾಸತ್ಯತೆ ಪರಿಶೀಲನೆಗೆ ಕೈ ಹಾಕಿದೆ. ಒಂದು ವೇಳೆ ಪಾಕ್​ ಪರ ಘೋಷಣೆ ಕೂಗಿದ್ದೂ ಸಾಬೀತಾದ್ರೆ ಕಠಿಣ ಕ್ರಮ ಎಂದು ಸಿಎಂ ಸಿದ್ದರಾಮಯ್ಯ ವಾರ್ನಿಂಗ್​ ಕೊಟ್ಟಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಗೆಲುವು ಸಾಧಿಸಿದ್ದ ಕಾಂಗ್ರೆಸ್​ನ ನಾಸೀರ್​ ಹುಸೇನ್​ ಸಂಭ್ರಮಾಚರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದೇಶದ್ರೋಹಿ ಘೋಷಣೆ ಕೂಗಿದ್ದಾನೆ ಎಂದು ಹೇಳಲಾಗುತ್ತಿದೆ. ವಿಡಿಯೋ ಒಂದರಲ್ಲಿ ಪಾಕಿಸ್ತಾನ್​ ಜಿಂದಾಬಾದ್​ ಅನ್ನೋ ಘೋಷಣೆಗಳು ಕೇಳಿ ಬಂದಿದೆ ಎಂದು ವರದಿಯಾಗಿದೆ. ಹೀಗಾಗಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೆಂಡಕಾರಿದ್ದಾರೆ. ಈ ಮಧ್ಯೆ ಬಿಜೆಪಿ ನಾಯಕರ ವಿರುದ್ಧ ಯೂಥ್​ ಕಾಂಗ್ರೆಸ್​ ಪ್ರೆಸಿಡೆಂಟ್​​​ ಮೊಹಮ್ಮದ್​ ನಲಪಾಡ್​​ ದೂರು ನೀಡಿದ್ದಾರೆ.

ಕಮಿಷನರ್​ಗೆ ದೂರು ನೀಡಿದ ಬಳಿಕ ಮಾತಾಡಿದ ಮೊಹಮ್ಮದ್​ ನಲಪಾಡ್​​, ಬಿಜೆಪಿ ನಾಯಕರು ಪ್ರಚೋದಾನಕಾರಿ ಹೇಳಿಕೆ ನೀಡಿ ಸಮಾಜವನ್ನು ಒಡೆಯಲು ಮುಂದಾಗಿದ್ದಾರೆ. ಸತ್ಯ ಹೊರ ಬರೋ ಮುನ್ನವೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಹೀಗಾಗಿ ಕೂಡಲೇ ಬಿಜೆಪಿ ನಾಯಕರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿರುವುದಾಗಿ ಹೇಳಿದರು.

ರಾಜೀವ್​ ಚಂದ್ರಶೇಖರ್​​, ಆರ್​. ಅಶೋಕ್​​, ಅಶ್ವತ್ಥ್​​ ನಾರಾಯಣ್​​, ವಿಜಯೇಂದ್ರ ವಿರುದ್ಧ ದೂರು ನೀಡಿದ್ದೇವೆ. ನಾಸೀರ್​ ಹುಸೇನ್​ ಸಾಬ್​ ಜಿಂದಾಬಾದ್​ ಅನ್ನೋದನ್ನು ತಿರುಚಲಾಗಿದೆ. ಕೋಮು ಗಲಭೆ ಹಚ್ಚಲು ಮುಂದಾಗಿದ್ದಾರೆ. ನಾವೆಲ್ಲರೂ ಭಾರತೀಯರು, ಕನ್ನಡಿಗರು. ಒಂದು ಸಮಾಜವನ್ನು ಟಾರ್ಗೆಟ್​ ಮಾಡಬಾರದು. ಕಾಂಗ್ರೆಸ್​​ ಮೂರು ಸೀಟು ಗೆದ್ದಿದ್ದಕ್ಕೆ ಬಿಜೆಪಿಗೆ ಉರಿ. ಹೀಗಾಗಿ ಈ ವಿವಾದ ಸೃಷ್ಟಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪಾಕ್​ ಪರ ಘೋಷಣೆ ವಿವಾದ; ಬಿಜೆಪಿ ನಾಯಕರ ವಿರುದ್ಧವೇ ಕಾಂಗ್ರೆಸ್​ ಪೊಲೀಸ್​ ದೂರು!

https://newsfirstlive.com/wp-content/uploads/2024/02/Ashok_Nalapad.jpg

Load More