newsfirstkannada.com

×

ರಾಮಮಂದಿರ ಸಮಾರಂಭ: ಆಹ್ವಾನ ತಿರಸ್ಕರಿಸಿದ್ದ ಕಾಂಗ್ರೆಸ್​.. ‘ಕೈ’ ಶಾಸಕರಿಂದ ಈಗ ರಾಮಜಪ; ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯ

Share :

Published January 17, 2024 at 6:19am

Update January 17, 2024 at 6:20am

    ಪ್ರಾಣ ಪ್ರತಿಷ್ಠಾಪನೆಗೆ ಹಾಜರಾಗಲ್ಲ, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ

    ದೇಶದ ಹುಚ್ಚಾಸ್ಪತ್ರೆಗಳು ರಾಜಕಾರಣಿಗಳಿಗೆ ಸಾಲಲ್ಲ ಎಂದ ಈಶ್ವರಪ್ಪ

    ವಿಜಯನಗರ, ಗೋವಿಂದರಾಜನಗರದಲ್ಲಿ ರಾಮನ ದೊಡ್ಡ ಕಟೌಟ್ಸ್​

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಹಾಜರಾಗಲ್ಲ ಅಂತ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ. ಆದ್ರೆ ಕಾಂಗ್ರೆಸ್​​ ಪಕ್ಷದ ಹಲವು ನಾಯಕರು ಮಾಡ್ತಿರುವ ರಾಮಜಪ ಬೆಳಕಿಗೆ ಬರ್ತಿದೆ. ಬೆಂಗಳೂರಿನ ವಿಜಯನಗರ ಶಾಸಕ ಕೃಷ್ಣಪ್ಪ, ಪುತ್ರ ಪ್ರಿಯಾಕೃಷ್ಣ ಕ್ಷೇತ್ರದಲ್ಲಿ ರಾಮನ ಕಟೌಟ್​​ಗಳು ತಲೆ ಎತ್ತಿವೆ. ದಶರಥನಂದನನಿಗೆ ಅದ್ಧೂರಿ ಸ್ವಾಗತ ಕೋರುವ ಕಟೌಟ್​​ಗಳು ರಾರಾಜಿಸುತ್ತಿದ್ದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್​​​​ನಲ್ಲಿ ಪರ-ವಿರೋಧದ ನಡೆ!

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ ಇನ್ನು 5 ದಿನಗಳು ಬಾಕಿ ಇದೆ.. ನಾವು ಬಾಲರಾಮನ ಪ್ರಾಣಪ್ರತಿಷ್ಟಾಪನೆಗೆ ಬರೋದಿಲ್ಲ ಅಂತ ಒಂದ್ಕಡೆ ಹೈಕಮಾಂಡ್ ಹೇಳ್ತಿದೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಕೂಡ ಮೊದಲು ಯಡವಟ್ಟು ಹೇಳಿಕೆ ನೀಡಿ ಬಳಿಕ ನಾನೂ ಕೂಡ ಅಯೋಧ್ಯೆಗೆ ಹೋಗ್ತೀನಿ ಅಂತ ಯೂಟರ್ನ್ ಹೊಡೆದಿದ್ದರು. ಈ ಬೆನ್ನಲ್ಲೇ ಶಾಸಕ ಎಂ.ಕೃಷ್ಣಪ್ಪ ಹಾಗೂ ಪುತ್ರ ಪ್ರಿಯಾಕೃಷ್ಣ ಕೂಡ ರಾಮಜಪ ಮಾಡ್ತಿರೋದು ಭಾರಿ ಅಚ್ಚರಿಗೆ ಕಾರಣ ಆಗಿದೆ. ವಿಜಯನಗರ ಹಾಗೂ ಗೋವಿಂದರಾಜ ಕ್ಷೇತ್ರಗಳ ಎಲ್ಲ ಕಡೆ ಶ್ರೀರಾಮನ ಕಟೌಟ್​​ಗಳು ರಾರಾಜಿಸುತ್ತಿವೆ. ಮಂದಿರದಿಂದ ದೂರ ಉಳಿದಿರೋ ಹಸ್ತಪಡೆಯಲ್ಲೇ ವಿಭಿನ್ನ ಅಭಿಪ್ರಾಯ ವ್ಯಕ್ತ ಆಗ್ತಿದೆ.

ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಕೆ.ಎಸ್​ ಈಶ್ವರಪ್ಪ ಟಾಂಗ್​!

ಸಿಎಂ ಸಿದ್ದರಾಮಯ್ಯ ಕುರಿತು ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಉಲ್ಲೇಖಿಸಿ ಬಿಜೆಪಿಯವರಿಗೆ ತಲೆಕೆಟ್ಟಿರಬೇಕು ಅಂತ ಕಿಡಿಕಾರಿದ್ದ ಸಚಿವ ಮಧು ಬಂಗಾರಪ್ಪಗೆ ಮಾಜಿ ಡಿಸಿಎಂ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಪ್ರತಿಷ್ಠೆಯ ರಾಜಕೀಯ ಬದಿಗಿಟ್ಟು ರಾಮನ ಹೆಸರಲ್ಲಿ ನಾವೆಲ್ಲ ಒಂದಾಗೋಣ ಅಂತ ಕರೆ ನೀಡಿದ್ದಾರೆ.

ಪುರಾಣಗಳಲ್ಲಿ ಹೇಳಿರುವಂತೆ ವಿಷ್ಣುವಿನ ಏಳನೇ ಅವತಾರ ಶ್ರೀರಾಮ ದೈವೀಕ ಚೇತನ. ಅಸಂಖ್ಯ ಭಕ್ತರ ಭಕ್ತಿಯ ಪ್ರತೀಕ. ಹೀಗಾಗಿ ರಾಮನ ವಿಚಾರದಲ್ಲಿ ರಾಜಕೀಯ ಮಾಡಬಾರದು ಅನ್ನೋದು ದೇಶದ ಬಹುಜನರ ಅಭಿಪ್ರಾಯ. ಹೀಗಿದ್ದರೂ ಕಾಂಗ್ರೆಸ್​​ ನಾಯಕರು ದ್ವಂದ್ವ ನಿಲುವು ತಳೆದಿರೋದು ಭಾರಿ ಗೊಂದಲಕ್ಕೆ ಕಾರಣ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರ ಸಮಾರಂಭ: ಆಹ್ವಾನ ತಿರಸ್ಕರಿಸಿದ್ದ ಕಾಂಗ್ರೆಸ್​.. ‘ಕೈ’ ಶಾಸಕರಿಂದ ಈಗ ರಾಮಜಪ; ಪಕ್ಷದಲ್ಲಿ ವಿಭಿನ್ನ ಅಭಿಪ್ರಾಯ

https://newsfirstlive.com/wp-content/uploads/2024/01/Ram-Mandir-3.jpg

Load More