/newsfirstlive-kannada/media/post_attachments/wp-content/uploads/2025/03/DALIT-LEADER-MEETING.jpg)
ಬಿಟ್ರೆ ಚಾನ್ಸ್​ ಸಿಗಲ್ಲ.. ಅವಕಾಶ ಪದೇ ಪದೆ ಹುಡುಕ್ಕೊಂಡು ಬರಲ್ಲ.. ರಾಜ್ಯದಲ್ಲಿ ತಲೆ ಎಣಿಕೆ ನಡೆದ್ರೆ ನಾವೇ ಹೆಚ್ಚು.. ಆದ್ರೂ ವಸೂಲಿಬಾಜಿ ಮುಂದೇ ನಮಗೆ ಸೋಲಿನ ರುಚಿ ಸಿಗ್ತಿದೆ.. ರುಚಿ ಅಂದ್ರೆ ನೆನಪಾಯ್ತು.. ಆವತ್ತು ಕರೆದಿದ್ದ ಡಿನ್ನರ್​​ ಮೀಟಿಂಗ್​​ಗೆ ಕೊಕ್ಕೆ ಬಿದ್ದಿತ್ತು.. ಸ್ವಲ್ಪ ಆತ್ಮಾಭಿಮಾನಕ್ಕೂ ಧಕ್ಕೆ ಆಗಿತ್ತು.. ಆದ್ರೆ, ನಿನ್ನೆ ಡಿನ್ನರ್​​ ಪಾರ್ಟಿ, ಊಟದ ನೆಪ ಯಾವುದು ಇಲ್ಲ.. ಎಲ್ಲರಿಗೂ ಸಿಂಗಲ್​, ಸಿಂಗಲ್​ ಕಾಲ್​.. ಮಹದೇವಪ್ಪ ಮನೆಯಲ್ಲಿ ಸಭೆ ನಡೆದೇ ಬಿಟ್ಟಿದೆ..
ನೀವು ಮಾಡಬಹುದು, ನಾವ್​ ಮಾಡಬಾರ್ದಾ? ಹಾಗಂತ ನಮ್ಗೆ ಮಾಡಕ್ಕಾಗಲ್ವಾ? ನಮಗೆ ಜಸ್ಟ್​ ತಿನ್ನೋಕು ಬಿಡ್ಲಿಲ್ಲ.. ರಾತ್ರಿ ಬೆಳದಿಂಗಳ ಊಟಕ್ಕೆ ಆರೆಂಜ್​​ ಮಾಡಿದ್ವಿ.. ಅಷ್ಟಕ್ಕೆ ಡೆಲ್ಲಿಗೆ ಹೋಗಿ ಇಲ್ಲದ್ದನ್ನೆಲ್ಲ ಹೇಳಿ ಊಟ ಕ್ಯಾನ್ಸಲ್​ ಮಾಡಿದ್ರಿ.. ಮೊನ್ನೆ ಪಂಚ ವರ್ಷಾಚರಣೆ ಅಂತ ದೊಡ್ಡದಾಗಿ ಊಟ ಹಾಕಿಸಿದ್ರಿ.. ಅದೇನದು ಹಂಗಾದ್ರೆ? ಮೋಸ್ಟ್​ಲೀ ದಲಿತ ಮಿನಿಸ್ಟರ್​​ಗಳ ಮನದಲ್ಲಿ ಎದ್ದ ರೋಷಾಗ್ನಿ ಮಾತುಗಳಿವು.
/newsfirstlive-kannada/media/post_attachments/wp-content/uploads/2025/03/DALIT-LEADER-MEETING-2.jpg)
ಆಗ್ಲೇ ಹೇಳಿದ್ವಲ್ಲ ರೋಷಾಗ್ನಿ. ಅದೇ ಅಸಮಾಧಾನ ಮೊನ್ನೆ ಡಿಕೆಶಿ ಡಿನ್ನರ್​​ಗೆ ಆಬ್ಸೆಂಟ್​​ ಆಗ್ಸಿತ್ತು. ಇವತ್ತು ಮಿನಿಸ್ಟರ್​ ಮಹದೇವಪ್ಪ ಮನೆಯಲ್ಲಿ ಫ್ರೆಶ್​​ ಆಗಿ ಕುಕ್ಕ ಆಗಿತ್ತು.. ಹಾಗಂತ ಇದು ಡಿನ್ನರ್​​​ ಪಾರ್ಟಿಯಲ್ಲ. ಡಿನ್ನರ್​​ ಪಾರ್ಟಿ ರೀತಿ.. ಕಷ್ಟ-ಸುಖದ ಹೆಸರಲ್ಲಿ ಸಭೆ ಸೇರಿದ ದಲಿತ ನಾಯಕರು ಹತ್ತಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.. ಈ ಸಭೆಯ ನೇತೃತ್ವ ಗೃಹ ಸಚಿವ ಪರಮೇಶ್ವರ್ ವಹಿಸಿದ್ರು.
ಇದನ್ನೂ ಓದಿ: ಸಾವರ್ಕರ್ ವರ್ಸಸ್ ಅಂಬೇಡ್ಕರ್.. ಸದನದಲ್ಲಿ ಕಾಂಗ್ರೆಸ್, ಬಿಜೆಪಿ ರೋಚಕ ಕದನ; ಅಸಲಿಗೆ ಆಗಿದ್ದೇನು?
ಮಹಾದೇವಪ್ಪ ನಿವಾಸದ ಸಭೆಗೆ ಸಚಿವ ಸತೀಶ್ ಜಾರಕಿಹೊಳಿ ಕಾಲ್ನಡಿಗೆಯಲ್ಲಿ ಬಂದಿದ್ದು ವಿಶೇಷ.. ಸಭೆಯಲ್ಲಿ ಏನೆಲ್ಲಾ ಚರ್ಚೆ ಆಯ್ತು ಅನ್ನೋದನ್ನ ನೋಡೋದಕ್ಕೂ ಮೊದಲು, ಸಭೆಗೆ ಯಾರೆಲ್ಲಾ ಬಂದಿದ್ರು ಅನ್ನೋದರ ಲಿಸ್ಟ್ ಇಲ್ಲಿದೆ.
/newsfirstlive-kannada/media/post_attachments/wp-content/uploads/2025/03/DALIT-LEADER-MEETING-1.jpg)
ಗೃಹ ಸಚಿವ ಡಾ.ಜಿ.ಪರಮೇಶ್ವರ್, PWD ಮಿನಿಸ್ಟರ್​​ ಸತೀಶ್​ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಹೆಚ್​.ಸಿ.ಮಹದೇವಪ್ಪ, ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಹಕಾರ ಸಚಿವ ರಾಜಣ್ಣ, ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಶಿವರಾಜ್ ತಂಗಡಗಿ, ಅಬಕಾರಿ ಮಿನಿಸ್ಟರ್​​ ಆರ್.ಬಿ. ತಿಮ್ಮಾಪುರ ಇಷ್ಟು ಸಚಿವರು ಈ ಸಭೆಯಲ್ಲಿದ್ರು.. ಇನ್ನು, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಆನೇಕಲ್ ಶಾಸಕ ಬಿ. ಶಿವಣ್ಣ, ಪುಲಕೇಶಿ ನಗರ ಶಾಸಕ ಎ.ಸಿ.ಶ್ರೀನಿವಾಸ್, ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ್​ ಅಬ್ಬಯ್ಯ, ನಂಜನಗೂಡು ಶಾಸಕ ದರ್ಶನ್​ ಧ್ರುವನಾರಾಯಣ್ ಈ ಸಭೆಗೆ ಹಾಜರಿ ಹಾಕಿದ್ರು.
ಇದನ್ನೂ ಓದಿ:ತೆಲಂಗಾಣದಲ್ಲಿ ಗ್ಯಾರಂಟಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರದ ಪರದಾಟ.. ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?
ಇನ್ನು, ಸಭೆಯಲ್ಲಿ ರಾಜಕಾರಣದ ಬಗ್ಗೆಯೂ ಚರ್ಚೆ ಆಗಿದೆ.. ಸ್ಥಳೀಯ ಸಂಸ್ಥೆ ಚುನಾವಣೆ ಜೊತೆಗೆ ಜಾತಿ ಗಣತಿ ವರದಿ ಜಾರಿ ಮತ್ತು ಒಳ ಮೀಸಲಾತಿ ಬಗ್ಗೆ ಮಾತುಕತೆ ಆಗಿದೆ..
ರಾಜ್ಯದಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ನಮ್ಮದು. ನಾವು ಕಿತ್ತಾಡಿಕೊಂಡೇ ಇದ್ದೇವೆ. ನಮ್ಮ ಲಾಭವನ್ನ ಬೇರೆಯವರು ಪಡೆಯುತ್ತಿದ್ದಾರೆ. ನಾವೆಲ್ಲ ಒಗ್ಗಟ್ಟಾಗದ ಹೊರತು ಪ್ರಯೋಜನವಿಲ್ಲ. ಎಲ್ಲರು ಒಟ್ಟಾದರೆ ಅವಕಾಶ ಹೆಚ್ಚು ಸಿಗಲಿದೆ. ನಾವೇನು ದಬ್ಬಾಳಿಕೆ ಮಾಡಬೇಕಿಲ್ಲ. ನಮ್ಮ ನ್ಯಾಯ ಕೇಳೋದ್ರಲ್ಲಿ ತಪ್ಪಿಲ್ಲ. ನಮಗೂ ಹೆಚ್ಚಿನ ರಾಜಕೀಯ ಸ್ಥಾನಮಾನ ಬೇಕು. ನಾವು ಈಗ ಶಕ್ತಿ ತುಂಬಿದರೆ ಮುಂದೆ ಫಲ ಸಿಗಲಿದೆ. ನಾವೆಲ್ಲರೂ ಒಟ್ಟಾಗಿಯೇ ನಿಲ್ಲಬೇಕು. ನಮಗೆ ಸಲ್ಲಬೇಕಾಗಿರೋದನ್ನ ಪಡೆಯಬೇಕು.
ಒಟ್ಟಾರೆ, ಒಂದಾಗಿದ್ದರೆ ಎಲ್ಲಾ, ಚಿಂತೆಗೆ ಜಾಗ ಇಲ್ಲ.. ಕಷ್ಟ ನಷ್ಟ ಎಲ್ಲ.. ಹಾಲು ಸಕ್ಕರೆ ಬೆಲ್ಲ ಅಂತ ಒಗ್ಗಟ್ಟಿನ ಮಂತ್ರ ಪಠಣ ಆಗಿದೆ.. ನಾವು ಹರಿದು ಹಂಚಿ ಬಾಲಂಗೋಚಿ ಆದ್ರೆ ರಾಜಕೀಯ ಸ್ಥಾನಮಾನ ದೂರದ ಬೆಟ್ಟವಾಗಲಿದೆ ಅಂತ ಬೋದಿವೃಕ್ಷದ ಕೆಳಗೆ ಆದ ಬುದ್ಧನ ಜ್ಞಾನವನ್ನ ಮಹದೇವಪ್ಪ ಮನೆಯಲ್ಲಿ ಬೋಧಿಸಲಾಗಿದೆ ಅನ್ನೋದು ಸಿಕ್ಕಿರುವ ಮಾಹಿತಿ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us