/newsfirstlive-kannada/media/post_attachments/wp-content/uploads/2024/11/RAHUL_GANDHI.jpg)
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಗ್ಯಾರಂಟಿಗಳ ಭರಾಟೆ ಮಧ್ಯೆಯೂ ಬಿಜೆಪಿ ನೇತೃತ್ವದ ಮಹಾಯುತಿ ಗದ್ದುಗೆ ಏರುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಮಹಾರಾಷ್ಟ್ರದಲ್ಲಿ ನಿರೀಕ್ಷೆಯೇ ಮಾಡದಂತ ಹೀನಾಯ ಸೋಲು ಹಸ್ತಪಡೆಗೆ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಈ ಬೆನ್ನಲ್ಲೇ ಕಾಂಗ್ರೆಸ್​ ಪಕ್ಷ ಸೋಲಿನ ಕಾರಣದ ಬೆನ್ನತ್ತಿದೆ. ವಿಶೇಷ ಅಂದ್ರೆ ಸೋಲಿಗೆ ರಾಹುಲ್ ಗಾಂಧಿ ಟಾರ್ಗೆಟ್ ಆಗುತ್ತಿದ್ದಾರೆ.
ಒಂದು ಕಡೆ ಮಹಾ ಗದ್ದುಗೆ ಏರೋ ಕಾಂಗ್ರೆಸ್​ ಕನಸು ಭಗ್ನವಾಗಿತ್ತು. ಮತ್ತೊಂದು ಕಡೆ ತಾನೂ ಊಹೆನೇ ಮಾಡದಷ್ಟು ಹೀನಾಯವಾಗಿ ಸೋತಿದ್ದು ಹಸ್ತಪಡೆಯ ನಿದ್ದೆಯನ್ನೇ ಕಸಿದುಕೊಂಡಿತ್ತು. ಈಗ ಕಾಂಗ್ರೆಸ್​ ಪಕ್ಷ ಸೋಲಿನ ಚಿಂತನ ಮಂಥನ ಮಾಡುತ್ತಿದ್ದು, ಮಹಾಸೋಲು ರಾಹುಲ್​ ಗಾಂಧಿ ಕಡೆ ಬೊಟ್ಟು ಮಾಡುತ್ತಿದೆ.
/newsfirstlive-kannada/media/post_attachments/wp-content/uploads/2024/10/MODI-RAHUL-GANDHI.jpg)
‘ಮಹಾ’ರಾಷ್ಟ್ರ ಸೋಲಿಗೆ ರಾಹುಲ್​ ಗಾಂಧಿ ಕಾರಣನಾ?
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಹೀನಾಯ ಸೋಲಿಗೆ ಕಾರಣ ಬೇರೆ ಯಾರು ಅಲ್ಲ ರಾಹುಲ್​ ಗಾಂಧಿಯಂತೆ.. ಹೀಗಂತ ಖುದ್ದು ಕಾಂಗ್ರೆಸ್​ ನಾಯಕರೇ ಈ ಮಾತನ್ನ ಹೇಳಿದ್ದಾರಂತೆ. ಸೋಲಿನ ಪರಾಮರ್ಶೆಯಲ್ಲಿ ಕಾಂಗ್ರೆಸ್​ ನಾಯಕರು, ರಾಹುಲ್​ ಗಾಂಧಿ ಮಾಡಿದ 4-5 ತಪ್ಪುಗಳು ಕಾಂಗ್ರೆಸ್​ಗೆ ಸೋಲನ್ನ ತಂದು ಕೊಟ್ಟಿದೆ ಎಂದು ಹೇಳಿದ್ದಾರಂತೆ. ಆ ನಾಲ್ಕೈದು ತಪ್ಪುಗಳು ಯಾವುದು ಗೊತ್ತಾ?.
1. ವೀರ್ ಸಾರ್ವಕರ್ ಬಗ್ಗೆ ಟೀಕೆ
- ವೀರ್ ಸಾರ್ವಕರ್ ಮೇಲೆ ರಾಹುಲ್ ಗಾಂಧಿ ನಿರಂತರ ದಾಳಿ
- ರಾಹುಲ್ ಗಾಂಧಿ ಟೀಕೆಯನ್ನ ಸಹಿಸದ ಮಹಾರಾಷ್ಟ್ರದ ಜನ
- ಸಾರ್ವಕರ್ ಮೇಲೆ ಟೀಕೆ ಬೇಡ ಎಂದಿದ್ದ ಉದ್ದವ್, ಶರದ್
- ನಾಯಕರ ಮಾತು ಕೇಳದೇ, ರಾಹುಲ್ ಗಾಂಧಿ ಟೀಕೆ
2. ಮೀಸಲಾತಿ ಅಂತ್ಯದ ಬಗ್ಗೆ ಹೇಳಿಕೆ
- ಮೀಸಲಾತಿ ಅಂತ್ಯಗೊಳಿಸುವುದಾಗಿ ಹೇಳಿದ್ದ ರಾಹುಲ್​
- ಮಹಾರಾಷ್ಟ್ರದ ನಾಯಕರಿಂದ ರಾಹುಲ್ ಹೇಳಿಕೆ ಸಮರ್ಥನೆ
- ಮೀಸಲಾತಿ ಲಾಭ, ಸೌಲಭ್ಯ ಪಡೆಯುವ ವರ್ಗಗಳಿಗೆ ಬೇಸರ
- ಎಸ್​ಸಿ, ಎಸ್​ಟಿ, ಓಬಿಸಿ ಸಮುದಾಯಗಳಿಂದ ವಿರುದ್ಧ ಮತ
3. ಅಂಬಾನಿ-ಅದಾನಿ ಬಗ್ಗೆ ಟೀಕೆ
- ಅಂಬಾನಿ, ಅದಾನಿ ಜೊತೆ ಮೋದಿ ಇದ್ದಾರೆ ಎಂದು ಟೀಕೆ
- ಕ್ರೋನಿ ಕ್ಯಾಪಿಟಲಿಸಂ ವಿರುದ್ಧ ರಾಹುಲ್ ಗಾಂಧಿ ಪ್ರಚಾರ
- ಮಹಾರಾಷ್ಟ್ರದಲ್ಲಿ ಅಂಬಾನಿಯಿಂದ ಉದ್ಯೋಗ ಸೃಷ್ಟಿ
- ಅಂಬಾನಿ ವಿರುದ್ಧದ ಟೀಕೆಯನ್ನ ಒಪ್ಪದ ಮಹಾರಾಷ್ಟ್ರಿಗರು
- ಎಡಪಕ್ಷದ ಪ್ರಭಾವಕ್ಕೆ ಒಳಗಾದಂತೆ ರಾಹುಲ್ ಗಾಂಧಿ ಪ್ರಚಾರ
ಇದನ್ನೂ ಓದಿ: Fengal; ತಮಿಳುನಾಡಿಗೆ ಅಪ್ಪಳಿಸಿದ ಭಯಾನಕ ಸೈಕ್ಲೋನ್ ಫೆಂಗಲ್.. ಬೆಂಗಳೂರಲ್ಲೂ ಮಳೆ
/newsfirstlive-kannada/media/post_attachments/wp-content/uploads/2024/06/RAHUL_GANDHI_MODI.jpg)
4. ಸಂವಿಧಾನದ ಬಗ್ಗೆ ಮಾತು
- ಸಂವಿಧಾನ ಅಪಾಯದಲ್ಲಿದೆ ಎಂದು ನಿರಂತರ ಪ್ರಚಾರ
- ಟೀಮ್​ ಸಲಹೆ ಕೇಳದೆ ರಾಹುಲ್​ ಗಾಂಧಿಯಿಂದ ಪ್ರಚಾರ
ಈ ಎಲ್ಲಾ ಕಾರಣಗಳು ಕಾಂಗ್ರೆಸ್​ ಸೋಲಿಗೆ ಕಾರಣ ಅಂತ ಮಹಾರಾಷ್ಟ್ರ ನಾಯಕರು ಹೇಳ್ತಿದ್ರೆ, ಇದರ ಜೊತೆಗೆ ಮಹಾ ವಿಕಾಸ್ ಅಘಾಡಿ ನಾಯಕರಲ್ಲಿ ಸಿಎಂ ಸ್ಥಾನಕ್ಕಾಗಿ ಕಿತ್ತಾಟ, ಒಗ್ಗಟ್ಟಿನ ಕೊರತೆಯೂ ಕಾರಣವಾಗಿದೆ ಎನ್ನಲಾಗುತ್ತಿದೆ. ಇನ್ನೂ, ಮೈತ್ರಿಯ ಒಂದು ಪಕ್ಷ, ಮತ್ತೊಂದು ಪಕ್ಷದ ಅಭ್ಯರ್ಥಿಗೆ ವೋಟ್ ವರ್ಗಾವಣೆ ಮಾಡುವಲ್ಲಿಯೂ ವಿಫಲವಾಗಿದೆ ಅಂತಲೂ ಹೇಳಲಾಗುತ್ತಿದೆ. ಮಹಾರಾಷ್ಟ್ರಲ್ಲಿ ಕಾಂಗ್ರೆಸ್​ ಮಹಾಯುತಿಯ ಬಿರುಗಾಳಿಗೆ ಸಿಲುಕಿ ಧೂಳಿಪಟವಾಗಿರೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us