/newsfirstlive-kannada/media/post_attachments/wp-content/uploads/2024/08/SUDDU_BSY.jpg)
ರಾಜ್ಯ ಸರ್ಕಾರದ ವಿರುದ್ಧ ಅದರಲ್ಲೂ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ದೋಸ್ತಿಗಳು ಮಾಡುತ್ತಿರುವ ಪಾದಯಾತ್ರೆ ಭರ್ಜರಿಯಾಗಿ ಸಾಗಿದೆ. ಕಾಂಗ್ರೆಸ್ ನಾಯಕರ ಯಾವುದೇ ರಣತಂತ್ರಗಳಿಗೂ ಮಣಿಯದೇ ಮೈತ್ರಿ ಪಡೆಗಳು ಒಗ್ಗಟ್ಟಾಗಿ ಹೆಜ್ಜೆ ಹಾಕುತ್ತಿದ್ದು, ಮೈಸೂರು ಚಲೋ 3ನೇ ದಿನಕ್ಕೆ ಕಾಲಿಟ್ಟಿದೆ. 2ನೇ ದಿನದ ಪಾದಯಾತ್ರೆಯಲ್ಲಿ ದಳಪತಿಯೇ ಅಖಾಡಕ್ಕಿಳಿದು ಮೈಸೂರು ಚಲೋಗೆ ಬಲ ತುಂಬಿದ್ರು. ಇತ್ತ ಕಮಲ-ದಳದ ಪಾದಯಾತ್ರೆ ಮೈಲೇಜ್ ಪಡೆದುಕೊಳ್ತಿದ್ದಂತೆ ಅತ್ತ ಕಾಂಗ್ರೆಸ್ ಹೈಕಮಾಂಡ್ ರಂಗ ಪ್ರವೇಶ ಮಾಡಿದೆ.
ಇದನ್ನೂ ಓದಿ: ಅಯ್ಯೋ ದುರಂತ!.. 18 ಫ್ಯಾಮಿಲಿ ಕಾಪಾಡಿದ್ದ ರಿಯಲ್ ಹೀರೋ.. ಕಾರು ಸಮೇತ ಕಣ್ಮುಂದೆಯೇ ಕೊಚ್ಚಿ ಹೋದ
ಬಿಜೆಪಿ ಕಾಲದ ಹಗರಣ ಕೆದಕಲು ಕೈ ಹಾಕಿದ ‘ಹಸ್ತ’ ನಾಯಕರು
ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಠಕ್ಕರ್ ಕೊಡಲು ಕಾಂಗ್ರೆಸ್ ಜನಾಂದೋಲನ ಹೋರಾಟ ಮಾಡ್ತಿದೆ. ಪಾದಯಾತ್ರೆ ಮುಂದೆ ಸಾಗುತ್ತಲೇ ಇದೆ. ಇದು ಕಾಂಗ್ರೆಸ್ ಹೈಕಮಾಂಡ್ನ ನಿದ್ದೆಗೆಡಿಸಿದೆ. ಹೀಗಾಗಿ ಬಿಜೆಪಿ ಅವಧಿಯ 3 ಹಳೇ ಹಗರಣಗಳ ಬಗ್ಗೆ ಮತ್ತೆ ಕೆದಕಲು ದೆಹಲಿ ನಾಯಕರು ಕೈ ಹಾಕಿದ್ದಾರೆ. ಹೈಕಮಾಂಡ್ ನಾಯಕರ ಸೂಚನೆ ಮೇರೆಗೆ ರಾಜ್ಯಕ್ಕೆ ಆಗಮಿಸಿದ ಕೆ.ಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ರಾಜ್ಯ ನಾಯಕರ ಜೊತೆ ಸಭೆ ನಡೆಸಿ, ಬಿಜೆಪಿ ಕಾಲದ ಹಗರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಬಿಜೆಪಿ ಹಗರಣ..‘ಕೈ’ ಟಾರ್ಗೆಟ್!
- ಬಿಟ್ ಕಾಯಿನ್, ಕೊರೊನಾ, ಪಿಎಸ್ಐ ಅಕ್ರಮ ನೇಮಕಾತಿ
- ಈ ಮೂರು ಸೇರಿ ಹಲವು ಹಗರಣಗಳ ತನಿಖೆ ಏನಾಯಿತು?
- ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಡಾ.ಕೆ ಸುಧಾಕರ್
- ಅಶ್ವತ್ಥ್ ನಾರಾಯಣ್, ಅಶೋಕ್ ವಿರುದ್ಧ ಆರೋಪಗಳಿವೆ
- ಆರೋಪ ಸಾಬೀತಾಗಲು ದಾಖಲೆಗಳಿದ್ರೂ ಯಾಕೆ ಬಂಧಿಸಿಲ್ಲ?
- ಬಿಜೆಪಿ ಅಕ್ರಮ ಬಗ್ಗೆ ಯಾಕೆ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿಲ್ಲ?
- ಅವುಗಳ ತನಿಖೆ ಎಲ್ಲಿಯವರೆಗೆ ಬಂದಿದೆ.. ವರದಿ ತರಿಸಿಕೊಳ್ಳಿ
- ನೀವು ಕ್ರಮ ತೆಗೆದುಕೊಂಡಿದ್ರೆ ಬಿಜೆಪಿ ಪಾದಯಾತ್ರೆ ಮಾಡ್ತಿರಲಿಲ್ಲ
- ನಿಮ್ಮ ಉದಾಸೀನತೆಯೇ ಬಿಜೆಪಿಗರಿಗೆ ಆಹಾರವಾಗಿ ಸಿಕ್ಕಿದೆ
- ಸಿಎಂ, ಡಿಸಿಎಂ ಮಾತ್ರ ಮಾತನಾಡೋದಲ್ಲ, ಸಚಿವರು ಮಾತಾಡಿ
- ಬಿಜೆಪಿ, ಜೆಡಿಎಸ್ ಕಾಲದ ಹಗರಣದ ಬಗ್ಗೆ ಸಚಿವರು ಮಾತನಾಡಿ
- ಅಡ್ಜಸ್ಟಮೆಂಟ್ ರಾಜಕಾರಣ ಬಿಟ್ಟು ಜೋರಾಗಿ ಮಾತನಾಡಬೇಕು
ಇವತ್ತು ಕಾಂಗ್ರೆಸ್ ಇದರ ವಿರುದ್ಧ ಹೋರಾಡಬೇಕೆಂದು ನಿರ್ಧರಿಸಿದೆ. ಇದು ಬಿಜೆಪಿ, ಜೆಡಿಎಸ್ನ ಷಡ್ಯಂತ್ರ. ಆ ಸತ್ಯ ಕರ್ನಾಟಕದ ಜನರಿಗೆ ತಿಳಿಸಬೇಕು. ಕರ್ನಾಟಕದ ಜನರಿಗೆ ಸದ್ಯ ಸತ್ಯವನ್ನ ಹೇಳಬೇಕಿದೆ. ಅದಕ್ಕಾಗಿ ಸಚಿವರಿಗೆ ಹೇಳಿದ್ದೇವೆ. ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರಗಳಿಗೆ ಹೋಗಿ. ಮತ್ತೆ ಕರ್ನಾಟಕದ ಜನರಿಗೆ ಅಕ್ರಮಗಳ ಬಗ್ಗೆ ವಿವರಿಸಿ. ಗ್ಯಾರಂಟಿಗಳ ಮೂಲಕ ಜನರಿಗೆ ಎಷ್ಟು ನೀಡುತ್ತಿದ್ದೇವೆ. ಗ್ಯಾರಂಟಿಗಳನ್ನು ಮುಗಿಸಲು ಬಿಜೆಪಿ ಯಾವ ರೀತಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎನ್ನುವುದನ್ನ.
ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ಇದೇ ವೇಳೆ ರಾಜ್ಯಪಾಲರ ನಡೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ ವೇಣುಗೋಪಾಲ್, ಬಿಜೆಪಿ–ಜೆಡಿಎಸ್ ಪಕ್ಷಗಳ ಪಿತೂರಿಗೆ ನಾವು ಜಗ್ಗುವುದಿಲ್ಲ. ಸಿಎಂ ಸಿದ್ದರಾಮಯ್ಯ ಸರ್ಕಾರದ ಜನಪ್ರಿಯತೆಯನ್ನು ಸಹಿಸದೆ ಸರ್ಕಾರ ಅಸ್ಥಿರಗೊಳಿಸುವ ಹುನ್ನಾರ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ರು.
ಇದನ್ನೂ ಓದಿ: ಜಿಮ್ ವಸ್ತುಗಳ ಸೇಲ್ಸ್ಮ್ಯಾನ್ ಮೃತದೇಹ ಪತ್ತೆ.. ಪ್ರಕರಣ ಬೆನ್ನ ಹತ್ತಿದ್ದ ಪೊಲೀಸರಿಗೆ ಶಾಕ್ ಮೇಲೆ ಶಾಕ್!
ಅವರು ಕರ್ನಾಟಕದ ಬಡವರ ಪರವಾಗಿ ನಿಂತಿರುವ ವ್ಯಕ್ತಿಯನ್ನು ಮುಗಿಸಲು ಬಯಸ್ತಿದ್ದಾರೆ. ಆ ಉದ್ದೇಶ ನಮಗೆ ಗೊತ್ತಿದೆ. ಕಾನೂನುಬದ್ಧವಾಗಿ ಏನಾದರೂ ಇದ್ದರೆ. ಕಾನೂನು ತನ್ನದೇ ಆದ ವೆಚ್ಚ ಭರಿಸುತ್ತದೆ. ನಾವು ಹೆದರಲ್ಲ.. ಏನಾದ್ರೂ ಇದ್ರೆ ಅವರು ಕಾನೂನು ಬದ್ಧವಾಗಿಯೇ ಹೋಗಲಿ. ಆದರೆ ಪ್ರತಿದಿನ ಅವರ ಭಾವನೆ ಹೇಗಿದೆ ಅಂದರೆ ಸಿದ್ದರಾಮಯ್ಯ, ಸಿದ್ದರಾಮಯ್ಯ, ಸಿದ್ದರಾಮಯ್ಯ ಭ್ರಷ್ಟಾಚಾರಿ ಅಂತ. ಇದ್ರಲ್ಲೇ ಕ್ಲೀಯರ್ ಆಗಿ ಗೊತ್ತಾಗ್ತಿದೆ ಅವರ ಉದ್ದೇಶ ಏನು ಅನ್ನೋದು. ಅವರು ಗ್ಯಾರಂಟಿ ಸ್ಕೀಮ್ ಅನ್ನ ಟಾರ್ಗೆಟ್ ಮಾಡ್ತಿದ್ದಾರೆ. ಅವರು ಸಿದ್ದರಾಮಯ್ಯ ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ. ಅವರು ರಾಜ್ಯದ ಗೌರವಾನ್ವಿತ್ವ ಮುಖ್ಯಮಂತ್ರಿ ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು.
ಕೆ.ಸಿ.ವೇಣುಗೋಪಾಲ್, ಎಐಸಿಸಿ ಪ್ರಧಾನ ಕಾರ್ಯದರ್ಶಿ
ವಾಲ್ಮೀಕಿ, ಮುಡಾ ಹಗರಣಗಳನ್ನೇ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಮೈಸೂರು ಯುದ್ಧ ಸಾರಿರುವ ಕಮಲ-ದಳ ಪಡೆಗೆ ಠಕ್ಕರ್ ಕೊಡಲು, ಕಾಂಗ್ರೆಸ್ ಹೈಕಮಾಂಡ್ ಕೂಡ ಮುಂದಾಗಿದೆ. ಬಿಜೆಪಿ-ಜೆಡಿಎಸ್ ಅವಧಿ ಹಗರಣಗಳನ್ನೇ ಟಾರ್ಗೆಟ್ ಮಾಡಿದ್ದು, ದೆಹಲಿ ಮಟ್ಟದಲ್ಲಿ ಬಿಜೆಪಿಗೆ ಮುಖಭಂಗ ಮಾಡಲು ಹೈಕಮಾಂಡ್ ರಣತಂತ್ರ ರೂಪಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ