newsfirstkannada.com

ರಾಮಮಂದಿರ ವಿಚಾರದಲ್ಲಿ ತನ್ನದೇ ಪಕ್ಷದ ನಿಲುವಿಗೆ ಸಿಡಿದೆದ್ದ ಹಿರಿಯ ಶಾಸಕ; ಕಾಂಗ್ರೆಸ್​ಗೆ ಗುಡ್​ಬೈ

Share :

Published January 20, 2024 at 10:21am

    ದೇಶದ ಜನ ಸಂತೋಷದಲ್ಲಿದ್ರೆ, ನನ್ನ ಪಕ್ಷ ಅಪ್​​ಸೆಟ್ ಆಗಿದೆ

    25 ವರ್ಷಗಳ ಸಂಬಂಧ ಕಟ್ ಎಂದ ಕಾಂಗ್ರೆಸ್​ ನಾಯಕ

    ಮೂರು ಬಾರಿ ಶಾಸಕರಾಗಿ ಕಾಂಗ್ರೆಸ್​ನಲ್ಲಿ ಕೆಲಸ ಮಾಡಿದ್ದರು

ಗುಜರಾತ್​ನ ವಿಜಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಕಾಂಗ್ರೆಸ್​ನ ಹಿರಿಯ ನಾಯಕ ಸಿ.ಜೆ.ಚವ್ದ ಪಕ್ಷಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ಗುಡ್​ಬೈ ಹೇಳಿರುವ ಅವರು ಬಿಜೆಪಿ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜೀನಾಮೆಗೆ ಕಾರಣ..?
ರಾಜೀನಾಮೆ ಪತ್ರದಲ್ಲಿ ಕಾರಣ ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ಧೋರಣೆಯಿಂದ ಬೇಸರಗೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಗಾಂಧಿನಗರದಲ್ಲಿರುವ ಸ್ಪೀಕರ್ ಶಂಕರ್ ಚೌಧರಿ ನಿವಾಸಕ್ಕೆ ಭೇಟಿ ನೀಡಿ ರಾಜೀನಾಮೆ ನೀಡಿದ್ದಾರೆ.

ಬಳಿಕ ಮಾತನಾಡಿರುವ ಅವರು ನಾನು ಕಾಂಗ್ರೆಸ್​ಗೆ ರಾಜೀನಾಮೆ ನೀಡುತ್ತಿದ್ದೇನೆ. ನಾನು ಕಾಂಗ್ರೆಸ್​ನಲ್ಲಿ ಬರೋಬ್ಬರಿ 25 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ದೇಶದಲ್ಲಿ ರಾಮಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಯಲ್ಲಿ ಜನ ತುಂಬಾ ಸಂತೋಷದಲ್ಲಿದ್ದಾರೆ. ದೇಶದ ಜನರು ಖುಷಿ ಖುಷಿಯಿಂದ ಇರುವಾಗ ಕಾಂಗ್ರೆಸ್ ನಡೆ ಅಚ್ಚರಿ ಮೂಡಿಸಿದೆ. ದೇಶದ ಜನರ ಸಂತೋಷದಲ್ಲಿ ಭಾಗಿಯಾಗುವ ಬದಲು ಮುನಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ. 182 ಗುಜರಾತ್ ವಿಧಾನಸಭೆ ಕ್ಷೇತ್ರದಲ್ಲಿ ಅವರ ರಾಜೀನಾಮೆಯಿಂದಾಗಿ ಕಾಂಗ್ರೆಸ್ ಇದೀಗ 15 ಸ್ಥಾನಕ್ಕೆ ಕುಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಮಂದಿರ ವಿಚಾರದಲ್ಲಿ ತನ್ನದೇ ಪಕ್ಷದ ನಿಲುವಿಗೆ ಸಿಡಿದೆದ್ದ ಹಿರಿಯ ಶಾಸಕ; ಕಾಂಗ್ರೆಸ್​ಗೆ ಗುಡ್​ಬೈ

https://newsfirstlive.com/wp-content/uploads/2024/01/RAM-MANDIR-4.jpg

Load More