newsfirstkannada.com

ಹನುಮಾನ್ ಚಾಲೀಸಾ ದಂಗಲ್.. ತೇಜಸ್ವಿ ಸೂರ್ಯ, ಬಿಜೆಪಿ ವಿರುದ್ಧ ದೂರು ದಾಖಲು

Share :

Published March 19, 2024 at 3:52pm

Update March 19, 2024 at 3:53pm

    ಕೇಸರಿ ಧ್ವಜ & ಹನುಮಾನ್ ಚಾಲೀಸಾ ಪಠಣೆ ಮೂಲಕ ಹೋರಾಟ

    ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ & ಬಿಜೆಪಿ ನಾಯಕರ ಮೇಲೆ ದೂರು

    ಲೋಕಸಭಾ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆ ಆರೋಪ

ಬೆಂಗಳೂರು: ಮೊಬೈಲ್ ಶಾಪ್‌ನಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ದಾಳಿ ಮಾಡಿದ ಕೇಸ್​ಗೆ ಸಂಬಂಧಿಸಿದಂತೆ ಚುನಾವಣೆ ವೇಳೆ ಧಾರ್ಮಿಕ ಭಾವನೆ ಕೆರಳಿಸುತ್ತಿರುವ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ ದೂರು ನೀಡಿದೆ.

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್​ನ ಲೀಗಲ್ ಟೀಂನ ಸೂರ್ಯ ಮುಕುಂದ ರಾಜ್​ರಿಂದ ಇ- ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾವನ್ನು ಮುಕೇಶ್ ಎನ್ನುವರು ಹಾಕಿದ್ದರು. ಆದರೆ ಅನ್ಯ ಕೋಮಿನವರು ಬಂದು ಯುವಕನ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ಇದನ್ನು ವಿರೋಧಿಸಿ ಇಂದು ಪ್ರತಿಭಟನೆ ಮಾಡಲಾಗುತ್ತಿದೆ. ಕೇಸರಿ ಧ್ವಜ ಮತ್ತು ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಱಲಿ ಮಾಡಲಾಗುತ್ತಿದೆ. ಹಲ್ಲೆ ಮಾಡಿರುವುದನ್ನು ಖಂಡಿಸಿರುವ ಬಿಜೆಪಿ ಇದು ಕೋಮು ದ್ವೇಷ ಬಿತ್ತಲಾಗುತ್ತಿದೆ ಎಂದು ಆರೋಪಿಸಿದೆ.

ಇದನ್ನು ಓದಿ: ನಗರತ್ ಪೇಟೆ ಗಲ್ಲಿ, ಗಲ್ಲಿಯಲ್ಲೂ ಕೇಸರಿ ಘರ್ಜನೆ.. ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಖಾಕಿ ವಶ

ಸದ್ಯ ಕಾಂಗ್ರೆಸ್​ನ ಲೀಗಲ್ ಟೀಂನ ಸೂರ್ಯ ಮುಕುಂದ ರಾಜ್ ಅವರು ಸಂಸದ ತೇಜಸ್ವಿ ಸೂರ್ಯ, ರವಿ ಸುಬ್ರಮಣ್ಯ & ಇತರರ ಮೇಲೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಪ್ರತಿಭಟನೆ ಮಾಡಲಾಗುತ್ತಿದೆ. ಇದು ನೀತಿ ಸಂಹಿತೆ ಉಲ್ಲಂಘಿಸಿದಂತೆ ಆಗುತ್ತಿದೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹನುಮಾನ್ ಚಾಲೀಸಾ ದಂಗಲ್.. ತೇಜಸ್ವಿ ಸೂರ್ಯ, ಬಿಜೆಪಿ ವಿರುದ್ಧ ದೂರು ದಾಖಲು

https://newsfirstlive.com/wp-content/uploads/2023/07/Tejaswi-Surya.jpg

Load More