/newsfirstlive-kannada/media/post_attachments/wp-content/uploads/2025/07/DK-SIDDU-SURJE.jpg)
ಹೈಕಮಾಂಡ್ ರಾಯಭಾರಿ ಸುರ್ಜೇವಾಲಾ ಶಾಸಕರು, ಸಚಿವರ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸಿ, ಅಹವಾಲು ಸ್ವೀಕರಿಸಿ, ಸಮಸ್ಯೆ ಇತ್ಯರ್ಥ ಮಾಡುವ ಕೆಲಸ ಮಾಡಿದ್ದಾರೆ. ಮೊದಲು ಶಾಸಕರ ಸಮಸ್ಯೆಯನ್ನು ಆಲಿಸಿ.. ಎರಡು ದಿನಗಳಿಂದ ಸಚಿವರಿಗೆ ಕ್ಲಾಸ್ ತೆಗೆದುಕೊಂಡಿದ್ದ ರಾಜ್ಯ ಕೈ ಉಸ್ತುವಾರಿ ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಇದನ್ನೂ ಓದಿ: ‘ಲಕ್ಷ್ಮೀ ಬಾರಮ್ಮ’ ಖ್ಯಾತಿಯ ಹರ್ಷಿತಾ ಅದ್ಧೂರಿ ಸೀಮಂತ.. ತುಂಬು ಗರ್ಭಿಣಿಯ ಬ್ಯೂಟಿಫುಲ್ ಫೋಟೋಸ್ ನೋಡಿ
ಖಾಸಗಿ ಹೋಟೆಲ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಜೊತೆ ಸುದೀರ್ಘ ಮಾತುಕತೆ ನಡೆಸಿದ್ರು. ಈ ವೇಳೆ, ಸಚಿವರು, ಶಾಸಕರ ಜೊತೆಗಿನ ಮೀಟಿಂಗ್ನಲ್ಲಾದ ಚರ್ಚೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ನಾಯಕತ್ವ ಗೊಂದಲ ಬಗೆಹರಿಸುವಂತೆ ಸಚಿವರು ಒಕ್ಕೊರಲ ಮನವಿ ಮಾಡಿದ್ದು, ಈ ಬಗ್ಗೆ ಸಿಎಂ, ಡಿಸಿಎಂಗೆ ಹೈಕಮಾಂಡ್ ರಾಯಭಾರಿ.. ಪಕ್ಷ ಮತ್ತು ಸರ್ಕಾರಕ್ಕಾಗಿ ಜೋಡೆತ್ತಿನಂತೆ ಕೆಲಸ ಮಾಡಲು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕೊಟ್ಟ ಸಲಹೆ ಏನು..?
ಸಚಿವರು, ಶಾಸಕರ ಜೊತೆ ಸಭೆ ಆಗಿದ್ದು, ಸದ್ಯ ಎಲ್ಲ ಗೊಂದಲವನ್ನು ಬಗೆಹರಿಸಲಾಗಿದೆ. ಕಳೆದ ವಾರ ಬ್ಯುಸಿ ಆಗಿದ್ದ ಕಾರಣ ತಾವಿಬ್ಬರೂ ದೆಹಲಿಗೆ ಬಂದರೂ ಭೇಟಿ ಆಗಲು ಸಾಧ್ಯವಾಗಿಲ್ಲ. ನಾಯಕತ್ವ ವಿಚಾರದಲ್ಲಿ ಗೊಂದಲ ಮೂಡದಂತೆ ಇಬ್ಬರು ಎಚ್ಚರ ವಹಿಸಿ. ಸದ್ಯ ಬಿಹಾರ ಚುನಾವಣೆಯಲ್ಲಿ ಬ್ಯುಸಿ ಇರೋ ಕಾರಣ, ಯಾವುದೇ ಬದಲಾವಣೆ ಸದ್ಯಕ್ಕಿಲ್ಲ. ತಾವಿಬ್ಬರೂ ಪಕ್ಷ ಮತ್ತು ಸರ್ಕಾರದ ಇಮೇಜ್ ಹೆಚ್ಚಿಸುವ ಕಡೆ ಗಮನ ನೀಡಿ. ಬಿಹಾರ ಎಲೆಕ್ಷನ್ನಲ್ಲೂ ಕರ್ನಾಟಕ ಮಾಡೆಲ್ ಬಗ್ಗೆ ಪ್ರಸ್ತಾಪ ಮಾಡ್ತೇವೆ. ಈ ನಿಟ್ಟಿನಲ್ಲಿ ನಮಗೆ ಮುಜುಗರ ಉಂಟಾಗದಂತೆ ಇಬ್ಬರೂ ಕೆಲಸ ಮಾಡಿ. ನಿಗಮ ಮಂಡಳಿ ಪಟ್ಟಿ ರೆಡಿ ಮಾಡಿ ಕೊಡಿ, ಶೀಘ್ರ ನೇಮಕ ಮಾಡೋಣ. ವಿಧಾನ ಪರಿಷತ್ ಪಟ್ಟಿ ರೆಡಿ ಇದ್ದು ಆದಷ್ಟು ಬೇಗ ಘೋಷಣೆ ಮಾಡ್ತೇವೆ. ಶಾಸಕರ ಅಸಮಾಧಾನ ಸರ್ಕಾರದ ಮೇಲೆ ಪರಿಣಾಮ ಬೀರುತ್ತೆ, ಎಚ್ಚರ ಎಂದು ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲಾ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿಗೆ ಬುದ್ಧಿ ಮಾತು ಹೇಳಿದ್ದಾರೆ.
ನಾಯಕತ್ವ ಗದ್ದಲ.. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಸಿಎಂ
ದೆಹಲಿ ಯಾತ್ರೆ ವೇಳೆ ಸಿಎಂ ಸಿದ್ದರಾಮಯ್ಯ, ಐದು ವರ್ಷ ನಾನೇ ಸಿಎಂ ಎಂದು.. ಅಧಿಕಾರ ಹಂಚಿಕೆ ಗದ್ದಲಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ರು. ಆದ್ರೀಗ ಹೈಕಮಾಂಡ್ ತೀರ್ಮಾನಕ್ಕೆ ನಾನು, ಡಿಸಿಎಂ ಇಬ್ಬರೂ ಬದ್ಧ ಎಂದು ಹೇಳುವ ಮೂಲಕ ನಾಯಕತ್ವ ಗೊಂದಲದಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಿಲೀಸ್ಗಾಗಿ ದೇವರಲ್ಲಿ ವಿಶೇಷ ಹರಕೆ ಹೊತ್ತ HD ರೇವಣ್ಣ.. ಏನದು..?
ರಾಜ್ಯದಲ್ಲಿ ಮೂರು ದಿನಗಳಿಂದ ಠಿಕಾಣಿ ಹೂಡಿದ್ದ ಉಸ್ತುವಾರಿ ಸುರ್ಜೇವಾಲಾ, ಸಚಿವರ ಅಭಿಪ್ರಾಯ ಸಂಗ್ರಹಿಸಿಕೊಂಡು ದೆಹಲಿಗೆ ತೆರಳಿದ್ದಾರೆ. ಇದರ ಬೆನ್ನಲ್ಲೇ ಕುತೂಹಲ ಹೆಚ್ಚಾಗಿದ್ದು, ವಿಧಾನ ಪರಿಷತ್ಗೆ ಪಟ್ಟಿ ಪ್ರಕಟಿಸುತ್ತಾರಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ