newsfirstkannada.com

ಭೋವಿ ಹಗರಣಗಳ ತನಿಖೆ ಚುರುಕು.. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳ ಬೇಟೆಯಾಡಲು ನಿಂತ ಕಾಂಗ್ರೆಸ್

Share :

Published August 14, 2024 at 7:21am

Update August 14, 2024 at 7:22am

    ಭೋವಿ ಅಭಿವೃದ್ದಿ ನಿಗಮದಲ್ಲಿ ಅವ್ಯವಹಾರದ ಸದ್ದು

    10 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡ ಆರೋಪ

    ನಿಗಮದ ಅಧೀಕ್ಷಕ ಸುಬ್ಬಪ್ಪ ಲೆಕ್ಕಪತ್ರ ಕಡತ, ನಗದುಪುಸ್ತಕ ಕಳವು

ವಾಲ್ಮೀಕಿ‌ ನಿಗಮ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ಈ ಬೆನ್ನಲ್ಲೇ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಯನ್ನ ಕಾಂಗ್ರೆಸ್ ಸರ್ಕಾರ ಚುರುಕುಗೊಳಿಸಿದೆ. ಇದರ ಮೊದಲ ಭಾಗವಾಗಿ ಭೋವಿ ನಿಗಮದ ಕಚೇರಿಯಲ್ಲಿ ತಲಾಶ್ ನಡೆದಿದೆ.​

ಹಗರಣ ವರ್ಸಸ್ ಹಗರಣ ಸದ್ಯದ ರಾಜಕಾರಣದಲ್ಲಿ ಚರ್ಚೆಯಲ್ಲಿರೋದು ಇದೆ. ರಾಜ್ಯ ಸರ್ಕಾರದಲ್ಲಿ ಹಗರಣಗಳ ಮೇಲೆ ಹಗರಣ ನಡೀತಿದೆ ಅಂತಾ ಕಮಲಪಡೆ-ತೆನೆಬಳಗ ಆರೋಪಿಸ್ತಿವೆ. ಈ ಬೆನ್ನಲ್ಲೇ ಬಿಜೆಪಿ ಸರ್ಕಾರದ ಅವಧಿಯ ಹಗರಣಗಳ ತನಿಖೆ ಮಾಡೋದಾಗಿ ಸರ್ಕಾರವೇ ಸಮರಕ್ಕಿಳಿದಿದೆ. ಇದರ ಭಾಗವಾಗಿ ಭೋವಿ ಬೇಟೆ ಶುರುವಾದಂತಿದೆ.

ನಿಗಮದ ಕೇಂದ್ರ ಕಚೇರಿ ಮೇಲೆ ಸಿಐಡಿ ತಂಡದ ರೇಡ್

2021-22ರ ಅವಧಿಯಲ್ಲಿ ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲನೀಡುವ ಯೋಜನೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿತ್ತು ಅಂತಾ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿದ್ರು‌. ಸದ್ಯ ಇದೇ ಪ್ರಕರಣವನ್ನ ಸಿಐಡಿಗೆ ವಹಿಸಿದ್ದ ಸರ್ಕಾರ ವಿಶೇಷ ತನಿಖಾ ತಂಡವನ್ನ ರಚಿಸಿತ್ತು. ಸಿಐಡಿ ಡಿವೈಎಸ್ಪಿ ಕುಲಕರ್ಣಿ ನೇತೃತ್ವದ 2 ತಂಡ ವಿಶ್ವೇಶ್ವರಯ್ಯ ಟವರ್​ನಲ್ಲಿನ ಭೋವಿ ಅಭಿವೃದ್ಧಿ ನಿಗಮದ ಮೇಲೆ ದಾಳಿ ನಡೆಸಿದೆ. ಸತತ ಮೂರು ಗಂಟೆಗಳ ಕಾಲ ನಿಗಮದ ಕಚೇರಿಯಲ್ಲಿ ಶೋಧಕಾರ್ಯ ನಡೆಸಿದ ತನಿಖಾತಂಡ ಕೆಲ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಗಾಂಜಾ ಸೇದ್ತಿದ್ದ, ತನ್ನದೇ ಮನೆಯಲ್ಲೇ ಕಳ್ಳತನ ಮಾಡ್ತಿದ್ದ! ದುನಿಯಾ ವಿಜಯ್​ ಜೊತೆ ಸತ್ಯ ಬಿಚ್ಚಿಟ್ಟ 16 ವರ್ಷದ ಬಾಲಕ

ಸುಬ್ಬಪ್ಪನನ್ನ ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳಿಂದ ವಿಚಾರಣೆ

ಭೋವಿ ನಿಗಮದಲ್ಲಿ, ಭೋವಿ ಸಮುದಾಯದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ 10 ಕೋಟಿಗೂ ಅಧಿಕ ಹಣ ದುರ್ಬಳಕೆ ಮಾಡಿಕೊಂಡಿರೋ ಆರೋಪವಿದೆ. ಅಕ್ರಮ ಹಣ ವರ್ಗಾವಣೆ ಮುಚ್ಚಿಹಾಕಲು ನಿಗಮದ ಅಧೀಕ್ಷಕ ಸುಬ್ಬಪ್ಪ ನಿಗಮಕ್ಕೆ ಸಂಬಂಧಿಸಿದ ಲೆಕ್ಕಪತ್ರ ಕಡತ, ನಗದು ಪುಸ್ತಕ, ಯೋಜನಾ ಕಡತ, ಬ್ಯಾಂಕ್ ಚೆಕ್ ಸೇರಿ 200 ಕ್ಕೂ ಹೆಚ್ಚು ಕಡತಗಳನ್ನ ಕಳವು ಮಾಡಿದ್ದ. ಸದ್ಯ ಆತನನ್ನು ಸಿಐಡಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: 150 ಕೋಟಿ ದಾಟಲಿರೋ ಭಾರತದ ಜನಸಂಖ್ಯೆ; ಮದುವೆ ಆಗಲು ಗಂಡಿಗೆ ಹೆಣ್ಣೇ ಸಿಗಲ್ಲ ಎಂದರೆ ನಂಬಲೇಬೇಕು!

ಭೋವಿ ನಿಗಮದ ಅಕ್ರಮ ಸಂಬಂಧ ಬೆಂಗಳೂರು, ಕಲಬುರಗಿಯಲ್ಲಿ ದೂರುಗಳು ದಾಖಲಾಗಿದ್ವು. ಸದ್ಯ ಇಡೀ ಪ್ರಕರಣದ ತನಿಖೆ ಸಿಐಡಿಗೆ ವರ್ಗಾವಣೆಯಾಗಿದೆ. ಈ ಬೆನ್ನಲ್ಲೇ ತನಿಖಾ ಬೇಟೆಯೂ ಶುರುವಾಗಿದ್ದು, ಯಾವೆಲ್ಲಾ ಸ್ಪೋಟಕ ವಿಚಾರಗಳು ವಿಚಾರಣೆಯಿಂದ ಹೊರಬರಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೋವಿ ಹಗರಣಗಳ ತನಿಖೆ ಚುರುಕು.. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳ ಬೇಟೆಯಾಡಲು ನಿಂತ ಕಾಂಗ್ರೆಸ್

https://newsfirstlive.com/wp-content/uploads/2024/08/Bhovi-1.jpg

Load More