ಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಭಯಾನಕ ಸತ್ಯ ಬಿಚ್ಚಿಟ್ಟ ಹಂತಕ; ಹೇಳಿದ್ದೇನು?

author-image
admin
Updated On
ಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಕೇಸ್‌ಗೆ ಬಿಗ್ ಟ್ವಿಸ್ಟ್‌.. ಭಯಾನಕ ಸತ್ಯ ಬಿಚ್ಚಿಟ್ಟ ಹಂತಕ; ಹೇಳಿದ್ದೇನು?
Advertisment
  • ಸೂಟ್‌ಕೇಸ್‌ನಲ್ಲಿ ಮೃತದೇಹವನ್ನು ಪ್ಯಾಕ್ ಮಾಡಿ ಎಸೆದಿದ್ದ
  • ಸೂಟ್‌ಕೇಸ್‌ ಬೆನ್ನತ್ತಿದ ಪೊಲೀಸರಿಂದ ಆರೋಪಿ ಬಂಧನ
  • ರೋಹಟಕ್‌ನ ತನ್ನ ಮನೆಯಲ್ಲೇ ಹಿಮಾನಿ ನಾರ್ವಲ್ ಹತ್ಯೆ!

ಹರಿಯಾಣದ ಕಾಂಗ್ರೆಸ್ ನಾಯಕಿ ಹಿಮಾನಿ ನಾರ್ವಲ್ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೂಟ್‌ಕೇಸ್‌ನಲ್ಲಿ ಮೃತದೇಹವನ್ನು ಪ್ಯಾಕ್ ಮಾಡಿ ಎಸೆದಿದ್ದ ಪಾಪಿ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಹಿಮಾನಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಪ್ತೆ ಹಿಮಾನಿ ನಾರ್ವಲ್ ಮೃತದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದ್ದು ಇಡೀ ದೇಶದಲ್ಲಿ ಸಂಚಲನ ಮೂಡಿಸಿತ್ತು. ಹಿಮಾನಿ ತಾಯಿ, ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು.

ಹತ್ಯೆ ನಡೆದ 2 ದಿನದಲ್ಲಿ ಸೂಟ್‌ಕೇಸ್‌ ಬೆನ್ನತ್ತಿದ ಪೊಲೀಸರು ದೆಹಲಿಯಲ್ಲಿ ಆರೋಪಿಯ ಸುಳಿವು ಪತ್ತೆ ಹಚ್ಚಿದ್ದರು. ಬಂಧಿಸಿದ ಬಳಿಕ ಆರೋಪಿ ಸಚಿನ್ ಪೊಲೀಸರ ವಿಚಾರಣೆಯ ವೇಳೆ ಹತ್ಯೆಯ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.

publive-image

ನಾನು- ಹಿಮಾನಿ ನಡುವೆ ದೈಹಿಕ ಸಂಬಂಧ ಇತ್ತು. ಬಳಿಕ ಸಮಸ್ಯೆ ಉದ್ಭವಿಸಿದ್ದರಿಂದ ಹತ್ಯೆ ಮಾಡಿದ್ದಾಗಿ ಆರೋಪಿ ಸಚಿನ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಹಿಮಾನಿ ನಾರ್ವಲ್ ಹತ್ಯೆಯ ನಿಗೂಢ ಕಾರಣ ಕೊನೆಗೂ ಬಹಿರಂಗವಾಗಿದೆ.

ಅಸಲಿಗೆ ಆಗಿದ್ದೇನು?
ಹರಿಯಾಣದ ಬಹಾದ್ದೂರ್ ಘಡ ಜಿಲ್ಲೆಯ ಸಚಿನ್ ಹಾಗೂ ಹಿಮಾನಿ ನಾರ್ವಲ್ ಮಧ್ಯೆ ಸಂಬಂಧ ಇತ್ತು. ಹಿಮಾನಿ ನಾರ್ವಲ್ ಆರೋಪಿ ಸಚಿನ್‌ನಿಂದ ಹಣ ವಸೂಲಿ ಮಾಡಿದ್ದರಂತೆ. ಹಣಕ್ಕಾಗಿ ಮತ್ತೆ ಮತ್ತೆ ಸಚಿನ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು. ದೊಡ್ಡ ಮೊತ್ತ ಹಣಕ್ಕಾಗಿ ಸಚಿನ್ ಬಳಿ ಬೇಡಿಕೆ ಇಟ್ಟಿದ್ದಾಳಂತೆ.

ಹಣದ ಸುಲಿಗೆಗೆ ಬೇಸತ್ತ ಸಚಿನ್, ರೋಹಟಕ್‌ನ ತನ್ನ ಮನೆಯಲ್ಲೇ ಹಿಮಾನಿ ನಾರ್ವಲ್ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಶವವನ್ನು ಸೂಟ್ ಕೇಸ್‌ನಲ್ಲಿ ತುಂಬಿ ಬಸ್ ಸ್ಟಾಂಡ್ ಬಳಿ ಇಟ್ಟು ಹೋಗಿದ್ದ.

ಇದನ್ನೂ ಓದಿ: ಬಾಯಿಗೆ ಕಚ್ಚಿ ಪ್ರಾಣ ತೆಗೆದ ಪ್ರಳಯಾಂತಕ ಮೀನು.. ಯುವಕನ ದಾರುಣ ಅಂತ್ಯ; ಆಗಿದ್ದೇನು? 

ಹಿಮಾನಿ ನಾರ್ವಲ್ ತಾಯಿ ಕಾಂಗ್ರೆಸ್ ಪಕ್ಷದಲ್ಲೇ ಯಾರೋ ನನ್ನ ಮಗಳನ್ನು ಹತ್ಯೆ ಮಾಡಿರಬೇಕು ಎಂದು ಹೇಳಿಕೆ ನೀಡಿದ್ದರು. ಆದರೆ ಲವ್ ಅಫೇರ್, ಹಣಕ್ಕಾಗಿ ನಡೆದ ಬ್ಲಾಕ್ ಮೇಲ್‌ನಿಂದ ಹತ್ಯೆ ನಡೆದಿರುವುದು ಆರೋಪಿಯ ತಪ್ಪೊಪ್ಪಿಗೆಯಿಂದ ಬಯಲಾಗಿದೆ. ಹಿಮಾನಿಯ ಕುಟುಂಬಸ್ಥರು ಆಕೆಯ ಕೊಲೆಗಾರರನ್ನು ಬಂಧಿಸುವವರೆಗೆ ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿತ್ತು. ಶಂಕಿತನನ್ನು ಬಂಧಿಸಿದ ನಂತರ, ಹಿಮಾನಿಯ ಕುಟುಂಬವು ಮರಣದಂಡನೆಗೆ ಒತ್ತಾಯಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment