newsfirstkannada.com

ದಳಪತಿ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಮಾಸ್ಟರ್​ ಪ್ಲಾನ್.. ಶೆಟ್ಟರ್ ಮುಂದೆ ಬಿಗ್ ಆಫರ್..!

Share :

Published January 24, 2024 at 7:08am

Update January 24, 2024 at 7:09am

    ಘರ್‌ವಾಪ್ಸಿ ಆಗ್ತಾರಾ ಮಾಜಿ ಸಿಎಂ ಜಗದೀಶ್ ಶೆಟ್ಟರ್‌?

    ದಳಪತಿ ಮೂಲಕ ಲಿಂಗಾಯತ ನಾಯಕನಿಗೆ ಬಿಜೆಪಿ ಗಾಳ!

    ಕಾಂಗ್ರೆಸ್​ನಲ್ಲಿ ಶೆಟ್ಟರ್, ಸವದಿಗಿಲ್ಲ ಉನ್ನತ ಸ್ಥಾನಮಾನ

ಲೋಕಸಭೆ ಸಮರ ಗೆಲ್ಲಲು ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ನಡೆಸ್ತಿವೆ. ಮತಗಳ ಲೆಕ್ಕಾಚಾರ ಹಾಕಿ ರಣತಂತ್ರಗಳನ್ನ ಹೆಣೆಯುತ್ತಿವೆ. ಇದರ ಭಾಗವಾಗಿ ಬಿಜೆಪಿ ಪಕ್ಷ ತೊರೆದ ನಾಯಕರಿಗೆ ಮತ್ತೆ ಗಾಳ ಹಾಕುತ್ತಿದೆ. ಕಮಲ ತೊರೆದು ಕೈ ಹಿಡಿದಿರೋ ಲಿಂಗಾಯತ ನಾಯಕನನ್ನ ವಾಪಸ್ ಕರೆತರಲು ದಳಪತಿ ಮೂಲಕ ದಾಳ ಉರುಲಿಸಿದೆ.

ಜಗದೀಶ್ ಶೆಟ್ಟರ್‌.. ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೇ ಬಿಜೆಪಿ ತೊರೆದ ನಾಯಕ. ಕೈ ಹಿಡಿದು ವಿಧಾನಸಭಾ ಅಖಾಡದಲ್ಲಿ ವೀರೋಚಿತ ಸೋಲು ಕಂಡ ಲಿಂಗಾಯತ ಲೀಡರ್‌. ಇದೀಗ ಕಾಂಗ್ರೆಸ್‌ ಪಾಳಯದ ವಿಧಾನ ಪರಿಷತ್ ಸದಸ್ಯ. ಆದ್ರೀಗ ಲೋಕಕದನ ಕಣದಲ್ಲಿ ಜಗದೀಶ್ ಶೆಟ್ಟರ್ ಮತ್ತೆ ಮರಳಿ ಗೂಡು ಸೇರುವ ಮಾತುಗಳು ರಾಜಕೀಯ ವಲಯದಲ್ಲಿ ಮಾರ್ಧನಿಸುತ್ತಿವೆ.

ಲೋಕಸಭಾ ಸಮರಕ್ಕೆ ಲಿಂಗಾಯತ ಮತಗಳ ಮರು ಕ್ರೋಢೀಕರಣಕ್ಕೆ ಬಿಜೆಪಿ ಕೈ ಹಾಕಿದೆ. ಈ ನಿಟ್ಟಿನಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ನ ವಾಪಸ್ ಪಕ್ಷಕ್ಕೆ ಕರೆ ತರಲು ಕೇಸರಿ ಹೈ ಕಮಾಂಡ್ ತಯಾರಿ ನಡೆಸಿದೆ. ಸದ್ಯ ಕಾಂಗ್ರೆಸ್‌ ಪಾಳಯದಲ್ಲಿರೋ ಶೆಟ್ಟರ್‌ನ ಘರ್‌ವಾಪ್ಸಿ ಮಾಡಲು ಬಿಜೆಪಿ ಹೈ ನಾಯಕರು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿಗೆ ಟಾಸ್ಕ್‌ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶೆಟ್ಟರ್ ಘರ್‌ವಾಪ್ಸಿ?

  • ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ಬಿಜೆಪಿ ಪಡೆ ಗಾಳ
  • ಹೆಚ್​ಡಿಕೆ ಮೂಲಕ ಗಾಳ ಹಾಕಿದ ಬಿಜೆಪಿ ಹೈಕಮಾಂಡ್
  • ಉತ್ತರ ಕರ್ನಾಟಕದಲ್ಲಿ ಬಿಜೆಪಿ ನಾಯಕರ ಘರ್ ವಾಪ್ಸಿ
  • ಉನ್ನತ ಸ್ಥಾನಮಾನ ನೀಡಿ ಪಕ್ಷಕ್ಕೆ ಕರೆತರಲು ರಣತಂತ್ರ
  • ಉತ್ತರ ಕರ್ನಾಟಕದ ಲಿಂಗಾಯತ ಮತಗಳ ಮೇಲೆ ಕಣ್ಣು
  • ವಿಧಾನಸಭೆ ಚುನಾವಣೆಯ ಹಿನ್ನಡೆ ಸರಿಪಡಿಸಲು ಪ್ಲಾನ್

ಘರ್‌ವಾಪ್ಸಿ ಪ್ಲಾನ್ ಏಕೆ?
ಕಾಂಗ್ರೆಸ್​ನಲ್ಲಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಗೆ ಯಾವುದೇ ಉನ್ನತ ಸ್ಥಾನಮಾನವಿಲ್ಲ. ಹೀಗಾಗಿ ಮಾಜಿ ಸಚಿವ ವಿ.ಸೋಮಣ್ಣರನ್ನ ಮನವೊಲಿಸಿದ ರೀತಿಯಲ್ಲೆ ಶೆಟ್ಟರ್ ಮನವೊಲಿಕೆಗೆ ಬಿಜೆಪಿ ಹೈಕಮಾಂಡ್ ಪ್ಲಾನ್‌ ರೂಪಿಸಿದೆ. ಅಲ್ಲದೇ ಉನ್ನತ ಸ್ಥಾನಮಾನ ನೀಡಿ ಪಕ್ಷಕ್ಕೆ ಕರೆತರಲು ಬಿಜೆಪಿ ರಣತಂತ್ರ ರೂಪಿಸಿದೆ. ಅದರಲ್ಲೂ ಉತ್ತರ ಕರ್ನಾಟಕದ ಲಿಂಗಾಯತ ನಾಯಕರ ಘರ್‌ವಾಪ್ಸಿ ಮಾಡಿಸಲು ದಳಪತಿ ಮತ್ತು ಬಿಜೆಪಿ ನಾಯಕರಿ ಹೈ ಕಮಾಂಡ್್ ಟಾಸ್ಕ್ ನೀಡಿದೆ ಎಂದು ತಿಳಿದುಬಂದಿದೆ. ಜೊತೆಗೆ ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಶೆಟ್ಟರ್‌ಗೆ ಲೋಕಸಭೆ ಟಿಕೆಟ್ ನೀಡುವುದು.. ಶೆಟ್ಟರ್ ಗೆದ್ರೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವ ಆಫರ್‌ನ ಕೊಡಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ.

ಒಟ್ಟಾರೆ, ಲಿಂಗಾಯತ ವೋಟ್‌ಬ್ಯಾಂಕ್‌ನ ಮತ್ತೆ ತಮ್ಮತ್ತ ಸೆಳೆಯಲು ಕೇಸರಿ ಪಡೆ ರಣತಂತ್ರ ರೂಪಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಆಗಿದ್ದ ತಪ್ಪನ್ನ ಸರಿಪಡಿಸಲು ಮುಂದಾಗಿದೆ. ಬಿಜೆಪಿಯ ಪ್ಲಾನ್‌ಗೆ ದಳಪತಿಯೂ ಕೈ ಜೋಡಿಸಿರೋ ಸುದ್ದಿ ಹಬ್ಬಿದೆ. ಆದ್ರೀಗ ಬಿಜೆಪಿಯ ಆಫರ್‌ನ ಶೆಟ್ಟರ್ ಒಪ್ತಾರಾ? ಲೋಕಸಭಾ ಚುನಾವಣೆ ವೇಳೆಗೆ ಮತ್ತೆ ಮರಳಿ ಗೂಡು ಸೇರ್ತಾರಾ? ಕಾಲವೇ ಉತ್ತರ ನೀಡಬೇಕಿದೆ.

ವಿಶೇಷ ವರದಿ: ಮಂಜುನಾಥ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಳಪತಿ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಮಾಸ್ಟರ್​ ಪ್ಲಾನ್.. ಶೆಟ್ಟರ್ ಮುಂದೆ ಬಿಗ್ ಆಫರ್..!

https://newsfirstlive.com/wp-content/uploads/2024/01/SHETTER-3.jpg

Load More