newsfirstkannada.com

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ -ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೊನೆಗೂ ಮೌನ ಮುರಿದ ಸವದಿ

Share :

29-05-2023

    ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ

    ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೊನೆಗೂ ಮೌನ ಮುರಿದ ಸವದಿ

    ಕಾಂಗ್ರೆಸ್​ ಹೈಕಮಾಂಡ್​ಗೆ ಟಾಂಗ್ ಕೊಟ್ಟ ಸವದಿ

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿರೋದಕ್ಕೆ ಪರೋಕ್ಷವಾಗಿ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಬೇಸರ ಹೊರ ಹಾಕಿದ್ದಾರೆ. ಚಿಕ್ಕೋಡಿಯಲ್ಲಿ ಮಾತನಾಡಿರುವ ಅವರು, ಸಚಿವ ಸ್ಥಾನ ಕೈ ತಪ್ಪಿದಕ್ಕೆ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇದು ಸಹಜವಾಗಿ ಇರುವುದು ಎಂದಿದ್ದಾರೆ.

ಸಿದ್ದರಾಮಯ್ಯ ಸಂಪುಟದಲ್ಲಿ ಮುಖ್ಯಮಂತ್ರಿಗಳ ಸೇರಿ ಈ ಬಾರಿ 34 ಮಂದಿ ಇದ್ದಾರೆ. ಈ ಬಾರಿ ಕಾಂಗ್ರೆಸ್​ನಲ್ಲಿ ಹಳಬರು ಆಯ್ಕೆ ಆಗಿದ್ದಾರೆ. ಅವರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ನಾವು ಈಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇವೆ. ಮನುಷ್ಯನಿಗೆ ರಾಜಕಾರಣದಲ್ಲಿ ದುರದೃಷ್ಟಿ ಹಾಗೂ ತಾಳ್ಮೆ ಬೇಕು ಎಂದರು.

ಇವು ಎರಡು ಇದ್ದರೆ ರಾಜಕಾರಣ ನಡೆಯುತ್ತದೆ. ರಾಜಕಾರಣದಲ್ಲಿ ನನಗೆ ನಿರೀಕ್ಷೆ ಇತ್ತು. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಸಚಿವರಾಗಬೇಕು, ಡಿಸಿಎಂ, ಸಿಎಂ ಆಗ್ಬೇಕು ಎಂದು ಆಸೆ ಇರುತ್ತೆ ಅನ್ನೋ ಮೂಲಕ ಕಾಂಗ್ರೆಸ್​ ಹೈಕಮಾಂಡ್​ಗೆ ಟಾಂಗ್ ಕೊಟ್ಟಿದ್ದಾರೆ. ಮಾತ್ರವಲ್ಲ ಸಚಿವ ಸ್ಥಾನ ತಪ್ಪಿದ ಶಾಸಕರಿಗೆ ಸೂಕ್ತ ಸ್ಥಾನಮಾನ ಎಂದ್ದಿದ ಕಾಂಗ್ರೆಸ್​ ನಾಯಕರಿಗೂ ತಿರುಗೇಟು ಕೊಟ್ಟಿದ್ದಾರೆ. ಜಡ್ಜ್ ಆದವರಿಗೆ ಪಟ್ಟೆವಾಲಾ ಆಗು ಅಂದ್ರೆ ಹೆಂಗೆ? ಅನ್ನೋ ಮೂಲಕ ನಿಗಮ ಮಂಡಳಿಯನ್ನು ತಿರಸ್ಕಾರ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ -ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೊನೆಗೂ ಮೌನ ಮುರಿದ ಸವದಿ

https://newsfirstlive.com/wp-content/uploads/2023/05/SAVADI-1.jpg

Load More