Advertisment

ಮಾಜಿ ಸಚಿವರ ಜೊತೆ ಸೆಕ್ಸ್‌ ಚಾಟ್‌, ಹನಿಟ್ರ್ಯಾಪ್ ಆರೋಪ; ಕಾಂಗ್ರೆಸ್ ನಾಯಕಿ ಮಂಜುಳಾ ಬಂಧನ; ಯಾರಿವರು?

author-image
admin
Updated On
ಮಾಜಿ ಸಚಿವರ ಜೊತೆ ಸೆಕ್ಸ್‌ ಚಾಟ್‌, ಹನಿಟ್ರ್ಯಾಪ್ ಆರೋಪ; ಕಾಂಗ್ರೆಸ್ ನಾಯಕಿ ಮಂಜುಳಾ ಬಂಧನ; ಯಾರಿವರು?
Advertisment
  • ಮಾಜಿ ಸಚಿವರಿಗೆ ಹನಿಟ್ರ್ಯಾಪ್‌ ಮಾಡಿದ ಆರೋಪದಲ್ಲಿ ಬಂಧನ
  • 20 ಲಕ್ಷ ಹಣ ಪಡೆಯಲು ಬೆಂಗಳೂರಿಗೆ ಬಂದಾಗ ಸಿಕ್ಕಿಬಿದ್ದ ಯುವತಿ
  • ಯುವತಿ ಮೇಲೆ ಹನಿಟ್ರ್ಯಾಪ್ ಮತ್ತು ಬ್ಲಾಕ್ ಮೇಲ್ ಮಾಡಿದ ದೂರು

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇವತ್ತು ಮಹತ್ವದ ಬೆಳವಣಿಗೆ ನಡೆದಿದೆ. ಮಾಜಿ ಸಚಿವರಿಗೆ ಹನಿಟ್ರ್ಯಾಪ್‌ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕಿಯನ್ನು ಬಂಧಿಸಲಾಗಿದೆ.

Advertisment

ಮೊದಲಿಗೆ ವಾಟ್ಸ್‌ ಆಪ್‌ನಲ್ಲಿ ಸೆಕ್ಸ್ ಚಾಟ್ ಮಾಡಿ ನಂತರ ಖಾಸಗಿ ಕ್ಷಣಗಳನ್ನ ವಿಡಿಯೋ ಚಿತ್ರೀಕರಿಸಿರೋ ಆರೋಪ ಕೇಳಿ ಬಂದಿದೆ. ಸಿಸಿಬಿಗೆ ಹನಿಟ್ರ್ಯಾಪ್ ಮತ್ತು 20 ಲಕ್ಷ ರೂಪಾಯಿಗೆ ಬ್ಲಾಕ್ ಮೇಲ್ ಮಾಡಿದ ದೂರು ನೀಡಲಾಗಿತ್ತು.

ಇದನ್ನೂ ಓದಿ: BREAKING: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಕಠಿಣ ಶಿಕ್ಷೆ ಪ್ರಕಟ; ಎಷ್ಟು ವರ್ಷ ಜೈಲು? 

ಆರೋಪಿ ಯುವತಿ 20 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದು, ಹಣ ಪಡೆಯಲು ಬೆಂಗಳೂರಿಗೆ ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Advertisment

ಯಾರು ಕೀ‘ಲೇಡಿ’?
ಹನಿಟ್ರ್ಯಾಪ್‌ ಕೇಸ್‌ನಲ್ಲಿ ಬಂಧಿತ ಆರೋಪಿ ಮಂಜುಳಾ ಅವರು ಕಲಬುರ್ಗಿ ಮೂಲದವರು. ಮಂಜುಳಾ, ಕಲಬುರಗಿ ನಲಪಾಡ್ ಬ್ರಿಗೇಡ್‌ ಅಧ್ಯಕ್ಷೆಯಾಗಿದ್ದರು ಎನ್ನಲಾಗಿದೆ. ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ ಪ್ರಕರಣದಲ್ಲಿ ಮಂಜುಳಾ ಅವರು ಸಿಸಿಬಿ ಪೊಲೀಸರ ಕೈಗೆ ಲಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment