ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ

author-image
Ganesh
Updated On
ಇಂದು ಹೈಕಮಾಂಡ್ ಜೊತೆ CM ಸಿದ್ದು 4 ವಿಚಾರ ಚರ್ಚೆ -ರಾಯರೆಡ್ಡಿಗೆ ವಾರ್ನಿಂಗ್ ಕೊಟ್ಟ ಸುರ್ಜೇವಾಲ
Advertisment
  • ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ದೆಹಲಿಗೆ‌ ಪ್ರಯಾಣ
  • ಮಧ್ಯಾಹ್ನ 1.55ಕ್ಕೆ ದೆಹಲಿಗೆ, ಸಂಜೆ 4ಕ್ಕೆ ರಾಜನಾಥ್ ಸಿಂಗ್ ಭೇಟಿ
  • ನಾಯಕತ್ವ ಯಾಕ್ರೀ ಬದಲಿಸಬೇಕು.. ಸಿದ್ದು ಪರ ದೇಶಪಾಂಡೆ ಬ್ಯಾಟ್

ಸೆಪ್ಟೆಂಬರ್ ಕ್ರಾಂತಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹಲ್​ಚಲ್ ಸೃಷ್ಟಿಸಿದೆ. ಹೊಸ ವರ್ಷಕ್ಕೆ ಕೈ ನಾಯಕರು ಕಾಯ್ತಿದ್ದಾರೋ ಇಲ್ವೋ ಕ್ರಾಂತಿಗೋಸ್ಕರ ಎದುರು ನೋಡ್ತಿದ್ದಾರೆ. ಸಿಎಂ ಕುರ್ಚಿ ವಿಚಾರ ಹಸ್ತದಲ್ಲಿ ಬಿರುಗಾಳಿ ಎಬ್ಬಿಸಿರುವಾಗ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಇಂದು ಸಿಎಂ ಕೂಡ ದೆಹಲಿ ವಿಮಾನವೇರಲಿದ್ದು ಕುತೂಹಲ ಕೆರಳಿಸಿದೆ.
ಇಂದು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ಭೇಟಿಯಾಗಿ ಕೆಪಿಸಿಸಿ ಹುದ್ದೆ ಸೇರಿದಂತೆ ಇನ್ನೀತರ ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..!

ಇಂದು ಸಿಎಂ ದೆಹಲಿ ಪ್ರವಾಸ

  • ಇಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ದೆಹಲಿಗೆ‌ ಪ್ರಯಾಣ
  •  ಮಧ್ಯಾಹ್ನ 1.55ಕ್ಕೆ ದೆಹಲಿಗೆ, ಸಂಜೆ 4ಕ್ಕೆ ರಾಜನಾಥ್ ಸಿಂಗ್ ಭೇಟಿ
  •  ಮೈಸೂರು ದಸರಾದಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆ ಬಗ್ಗೆ ಚರ್ಚೆ
  •  ದೆಹಲಿಯಲ್ಲೇ ವಾಸ್ತವ್ಯ, ಹೈಕಮಾಂಡ್ ಭೇಟಿ ಮಾಡಿ ರಾಜ್ಯದ ಸ್ಥಿತಿಗತಿ ಚರ್ಚೆ
  • ಪರಿಷತ್ ಸ್ಥಾನ, ನಿಗಮ-ಮಂಡಳಿ, ಕೆಪಿಸಿಸಿ ಪದಾಧಿಕಾರಿಗಳ ನೇಮಕ
  • ಹಲ‌ವು ವಿಚಾರಗಳ ಬಗ್ಗೆ ಹೈಕಮಾಂಡ್ ಜೊತೆ ಸಿದ್ದರಾಮಯ್ಯ ಚರ್ಚೆ

20ಕ್ಕೂ ಹೆಚ್ಚು ಶಾಸಕರ ಜೊತೆ ಸುರ್ಜೇವಾಲಾ ಸಭೆ

ಇಂದು ಕೂಡ ಕಾಂಗ್ರೆಸ್‌ನಲ್ಲಿ ಶಾಸಕರನ್ನ ಸಮಾಧಾನ ಮಾಡುವ ಕಾರ್ಯ ಮುಂದುವರೆಯಲಿದೆ. ಎರಡು ದಿನಗಳಿಂದ ರಾಜ್ಯ ಕೈ ಉಸ್ತುವಾರಿ ಸುರ್ಜೇವಾಲಾ ಕಾಂಗ್ರೆಸ್ ಶಾಸಕರ ಒಳಬೇಗುದಿ ತಣಿಸುವ ಕೆಲಸ ಮಾಡ್ತಿದ್ದಾರೆ. ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಗೆ ಸೈಲೆಂಟ್ ಆಗಿರುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಶಾಸಕರ ಜೊತೆ ಸಭೆ ನಡೆಸಿರುವ ಸುರ್ಜೇವಾಲಾ ಇಂದು ಕೂಡ 20ಕ್ಕೂ ಹೆಚ್ಚು ಶಾಸಕರ ಜೊತೆ ಒನ್‌ ಟು ಒನ್ ಮಾತುಕತೆ ನಡೆಸಲಿದ್ದಾರೆ.

ನಾಯಕತ್ವ ಯಾಕ್ರೀ ಬದಲಿಸಬೇಕು.. ಸಿದ್ದು ಪರ ದೇಶಪಾಂಡೆ ಬ್ಯಾಟ್

ಇನ್ನು ಸಿಎಂ ಬದಲಾವಣೆ ವಿಚಾರವಾಗಿ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಗೋಲ್ ಹೊಡೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನ 5 ವರ್ಷಕ್ಕೆ ಆಯ್ಕೆ ಮಾಡಿರೋದು. ಸಿಎಂ ನೇತೃತ್ವದಲ್ಲಿ ಒಳ್ಳೆಯ ಆಡಳಿತ ಜನರಿಗೆ ಸಿಕ್ತಿದೆ ಅಂತ ಸಿದ್ದು ಪರ ಮಾತಾಡಿ ವಿರೋಧಿಗಳಿಗೆ ಗುದ್ದು ಕೊಟ್ಟಿದ್ದಾರೆ. ಒಟ್ಟಾರೆ ಕಾಂಗ್ರೆಸ್​ ಪಾಳಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್ ಸೃಷ್ಟಿಸಿದೆ. ಈ ನಡುವೆ ಸಿಎಂ-ಡಿಸಿಎಂ ದೆಹಲಿ ಪ್ರವಾಸದಲ್ಲಿದ್ದಾರೆ. ಸದ್ಯ ಸುರ್ಜೇವಾಲಾ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ.

ಇದನ್ನೂ ಓದಿ: ಇವತ್ತು ಭಾರತ್ ಬಂದ್​​.. ಕಾರ್ಮಿಕ ಸಂಘಟನೆಗಳ ಡಿಮ್ಯಾಂಡ್ ಏನೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment