newsfirstkannada.com

ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?

Share :

Published May 8, 2024 at 9:25pm

    ದಕ್ಷಿಣ ಭಾರತದ ಜನರು ನೋಡಲು ಆಫ್ರಿಕಾದ ಜನರ ರೀತಿ ಕಾಣುತ್ತಾರೆ

    ಭಾರತೀಯರ ವರ್ಣದ ವಿಚಾರಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡ ನಾಯಕ

    ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಗರ ಖಂಡನೆ

ನವದೆಹಲಿ: ಸ್ಯಾಮ್ ಪಿತ್ರೋಡಾ.. ಕಳೆದ ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಕಾರಣದಲ್ಲಿ ಸದ್ದು ಮಾಡಿದ್ದರು. ಲೋಕಸಭಾ ಚುನಾವಣೆಯ ಭರಾಟೆಯಲ್ಲಿದ್ದ ಕೇಸರಿ ಕಲಿಗಳ ಕೈಗೆ ವಿವಾದದ ಅಸ್ತ್ರ ಕೊಟ್ಟ ಹೆಸರಿದು. ಪಿತ್ರಾರ್ಜಿತ ಆಸ್ತಿ ವಿಚಾರ ಪ್ರಸ್ತಾಪಿಸಿ ವಿವಾದದ ಸುಳಿಗೆ ಸಿಲುಕಿದ್ದ ರಾಹುಲ್ ಗಾಂಧಿ ಆಪ್ತ ಈ ಸ್ಯಾಮ್ ಪಿತ್ರೋಡಾ ಮತ್ತೊಂದು ವಿವಾದಾತ್ಮಕ ಹೇಳಿಕೆ ಮೂಲಕ ಕೇಸರಿ ಪಡೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತೀವ್ರ ಟೀಕೆಗೆ ಗುರಿಯಾದ ಮೇಲೆ ಸ್ಯಾಮ್‌ ಪಿತ್ರೋಡಾ ಅವರು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ಯಾಮ್‌ ಪಿತ್ರೋಡಾ ಅವರ ರಾಜೀನಾಮೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಕಾರತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಭಾರತೀಯ ಸಾಗರೋತ್ತರ ಕಾಂಗ್ರೆಸ್​ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಅಮೆರಿಕಾದ ಚಿಕಾಗೋದಲ್ಲಿದ್ದುಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಭಾರತೀಯರ ವರ್ಣದ ವಿಚಾರಕ್ಕೆ ಕೈಹಾಕಿ ಇದೀಗ ಕೈ ಸುಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಸ್ಯಾಮ್ ಪಿತ್ರೋಡ ಕೊಟ್ಟ ಹೇಳಿಕೆ ಏನು ಗೊತ್ತಾ.

ಇದನ್ನೂ ಓದಿ: ‘ಸತ್ತ ಮೇಲೆ ಅರ್ಧ ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ’- ಏನಿದು ಸ್ಯಾಮ್ ಪಿತ್ರೋಡಾ ಮತ್ತು ಕಾಂಗ್ರೆಸ್​​ ವಿವಾದ? 

ಹೇಳಿಕೆ 01
ಪೂರ್ವ ಭಾರತದ ಜನ ಚೀನಾದವರಂತೆ ಕಾಣುತ್ತಾರೆ

ಹೇಳಿಕೆ 02
ಪಶ್ಚಿಮ ಭಾರತದವರು ಅರಬ್ಬರಂತೆ ಕಾಣುತ್ತಾರೆ

ಹೇಳಿಕೆ 03
ದಕ್ಷಿಣದವರು ಆಫ್ರಿಕನ್ನರಂತೆಯೂ ಕಾಣುತ್ತಾರೆ

ಸ್ಯಾಮ್ ಪಿತ್ರೋಡ ಇದೇ ಹೇಳಿಕೆ ಕೇಸರಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿಂದೆ ಪಿತ್ರಾರ್ಜಿತ ಆಸ್ತಿ ವಿಚಾರ ಪ್ರಸ್ತಾಪಿಸಿ ಯಡವಟ್ಟು ಮಾಡಿಕೊಂಡಿದ್ದ ಪಿತ್ರೋಡಾ ಈ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

‘ಬಣ್ಣ ನೋಡಿ ಜನರನ್ನು ಅಳೆಯುವುದೇ ಕಾಂಗ್ರೆಸ್​ ಸಂಸ್ಕ್ರತಿ’!
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಗರಂ

ಕಾಂಗ್ರೆಸ್​ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೆಂಡಕಾರಿದ್ದಾರೆ. ತೆಲಂಗಾಣದ ಚುನಾವಣಾ ಸಮಾವೇಶದಲ್ಲಿ ಪಿತ್ರೋಡ ಹೇಳಿಕೆ ಕುರಿತು ವಾಗ್ದಾಳಿ ನಡೆಸಿದ ನಮೋ, ಬಣ್ಣ ನೋಡಿ ಜನರನ್ನು ಅಳೆಯುವುದೇ ಕಾಂಗ್ರೆಸ್​ ಸಂಸ್ಕ್ರತಿ ಅಂತ ಗರಂ ಆಗಿದ್ದಾರೆ. ಯುವರಾಜನೇ ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತೀನಿ. ಚರ್ಮದ ಬಣ್ಣದ ಆಧಾರದಲ್ಲಿ ನಮ್ಮ ದೇಶ ವಾಸಿಗಳನ್ನ ಅವಮಾನ ಮಾಡುವುದು ನಮ್ಮ ದೇಶದ ಜನ ಒಪ್ಪಲ್ಲ. ಮೋದಿ ಸಹ ಇದನ್ನ ಒಪ್ಪಲ್ಲ ಎಂದಿದ್ದಾರೆ.

ಸ್ಯಾಮ್ ಪಿತ್ರೋಡ ಹೇಳಿಗೆ ನೆಟ್ಟಿಗರು ಫುಲ್ ಗರಂ 

ಕಾಂಗ್ರೆಸ್​ ನಾಯಕ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.. ಅತ್ತ ಪಿತ್ರೋಡಾ ವಿರುದ್ಧ ಕೆಸರಿ ಟೀಂ ಕೆಂಡಕಾರುತ್ತಿದ್ರೆ ಇತ್ತ ನೆಟ್ಟಿಗರು ಪಿತ್ರೋಡ ಇಂತಹ ಹೇಳಿಕೆ ಮೂಲಕ ಕಾಂಗ್ರೆಸ್​ ಮುಕ್ತ ಭಾರತ ಮಾಡಲು ಹೊರಟಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಹುಲ್ ಗಾಂಧಿ ಆಪ್ತನ ವಿರುದ್ಧ ದೇಶಾದ್ಯಂತ ಆಕ್ರೋಶ.. ಕೊನೆಗೂ ಸ್ಯಾಮ್ ಪಿತ್ರೋಡಾ ತಲೆದಂಡ; ಹೇಳಿದ್ದೇನು?

https://newsfirstlive.com/wp-content/uploads/2024/04/Sam-Pitrod_Rahul-Gandhi.jpg

Load More