/newsfirstlive-kannada/media/post_attachments/wp-content/uploads/2024/08/VINESH-POGHAT-3.jpg)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಿಂದ ವಿನೇಶ್ ಫೋಗಟ್ ಅನರ್ಹಗೊಂಡಿದ್ದಾರೆ. ಇದರಿಂದ ಬೇಸರಗೊಂಡಿರುವ ಅವರು ಕುಸ್ತಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇನ್ಮುಂದೆ ಅವರು ಯಾವುದೇ ಕುಸ್ತಿ ಸ್ಪರ್ಧೆಯಲ್ಲಿ ಭಾಗಿಯಾಗುವುದಿಲ್ಲ.
ಈ ಒಂದು ಘಟನೆಯಿಂದ ನೊಂದು ದಿಢೀರ್ ನಿವೃತ್ತಿ ಘೋಷಣೆ ಬೆನ್ನಲ್ಲೇ ಇಡೀ ಭಾರತ ಅವರ ಬಳಿ ಮನವಿ ಮಾಡಿಕೊಳ್ತಿದೆ. ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯಿರಿ. 2008ರಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಉತ್ತರ ನೀಡಿ ಎಂಬ ಮನವಿಗಳು ಹೆಚ್ಚಾಗಿವೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್.. ಈ ವ್ಯವಸ್ಥೆಯಿಂದ ಹುಡುಗಿ ಬೇಸತ್ತಿದ್ದಾಳೆ. ಈ ಹುಡುಗಿ ಜಗಳದಿಂದ ಬೆಸತ್ತಿದ್ದಾಳೆ. ಕ್ಷಮಿಸಿ ವಿನೇಶ್ ಎಂದು ಟ್ವೀಟ್ ಮಾಡಿದ್ದಾರೆ.
इस सिस्टम से पक गई है ये लड़की
लड़ते-लड़ते थक गई है ये लड़की...#SorryVinesh! https://t.co/PkAGIqv1HWpic.twitter.com/59N38rT3Lx— Shashi Tharoor (@ShashiTharoor) August 8, 2024
ಏನ್ ಹೇಳಿದ್ದಾರೆ ಫೋಗಟ್..?
ಅಮ್ಮಾ, ನನ್ನಿಂದ ಕುಸ್ತಿ ಗೆದ್ದಿದೆ! ನಾನು ಸೋತಿದ್ದೇನೆ. ಕ್ಷಮಿಸಿ.. ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಭಗ್ನವಾಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ.
माँ कुश्ती मेरे से जीत गई मैं हार गई माफ़ करना आपका सपना मेरी हिम्मत सब टूट चुके इससे ज़्यादा ताक़त नहीं रही अब।
अलविदा कुश्ती 2001-2024 🙏
आप सबकी हमेशा ऋणी रहूँगी माफी 🙏🙏— Vinesh Phogat (@Phogat_Vinesh) August 7, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ