/newsfirstlive-kannada/media/post_attachments/wp-content/uploads/2024/11/Accident.jpg)
ಮಂಗಳೂರು: ಕರಾವಳಿಯಲ್ಲಿ ಹಿಟ್ ಅಂಡ್ ರನ್ ಪ್ರಕರಣವೊಂದು ನಡೆದಿದೆ. ಕಾಂಗ್ರೆಸ್ ಮುಖಂಡನ ಪುತ್ರನೊಬ್ಬ ಅಡ್ಡಾದಿಡ್ಡಿ ಓಡಿಸಿದ ಥಾರ್ ಜೀಪ್‌ಗೆ ಅಮಾಯಕ ಜೀವನೊಂದು ಬಲಿಯಾಗಿದೆ. ಅಪಘಾತ ಮಾಡಿದ ಆರೋಪಿ ಬೇಲ್ ಮೇಲೆ ಬಿಡುಗಡೆಯಾಗಿದ್ದು, ಮನೆಗೆ ಆಧಾರವಾಗಿದ್ದ ಮಗನ ಕಳ್ಕೊಂಡು ಕುಟುಂಬ ಕಣ್ಣೀರು ಹಾಕ್ತಿದೆ. ಮಗ ಮಾಡಿದ ತಪ್ಪಿಗೆ ತಂದೆ ಮೃತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದಾರೆ.
ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್.. ಬೇಲ್ ಮೇಲೆ ರಿಲೀಸ್!
ಆರೋಪಿ ಹೆಸರು ಯುವಕ ಪ್ರಜ್ವಲ್ ಶೆಟ್ಟಿ. ಉಡುಪಿಯ ಕಾಂಗ್ರೆಸ್ ಮುಖಂಡ, ಬೆಳಪು ದೇವಿಪ್ರಸಾದ್ ಶೆಟ್ಟಿ ಮಗ. ತಂದೆ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ. ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ಇವ್ನು ಗುತ್ತಿಗೆದಾರನಾಗಿದ್ದ. ಅಷ್ಟೇ ಅಲ್ಲದೇ ಯೂತ್ ಕಾಂಗ್ರೆಸ್ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನ ಮಾಡ್ತಿದ್ದವ್ನು ಅಮಾಯಕನ ಸಾವಿಗೆ ಕಾರಣವಾಗಿದ್ದಾನೆ. ನವೆಂಬರ್ 11ರಂದು ಮುಂಜಾನೆ 5 ಗಂಟೆ ಸುಮಾರಿಗೆ ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ಹಿಟ್ ಅಂಡ್ ರನ್ ಮಾಡಿ ಬೈಕ್ ಸವಾರ 39 ವರ್ಷದ ಮೊಹಮ್ಮದ್ ಹುಸೈನ್‌ಗೆ ಗುದ್ದಿ ಎಸ್ಕೇಪ್ ಆಗಿದ್ದ. ಘಟನೆ ನಡೆದು ಎರಡು ದಿನದ ಬಳಿಕ ಸವಾರ ಮೃತಪಟ್ಟಿದ್ದಾನೆ.
ಅಪಘಾತ ನಡೆದಿದ್ದು ಹೇಗೆ?
ಥಾರ್ ಜೀಪ್‌ನಲ್ಲಿ ಹೋಗ್ತಿದ್ದ ಪ್ರಜ್ವಲ್ ಶೆಟ್ಟಿ ಎದುರುಗಡೆ ಬರ್ತಿದ್ದ ಮೊಹಮ್ಮದ್ ಹುಸೈನ್ ಬೈಕ್ ಡಿಕ್ಕಿ ಹೊಡೆದಿದ್ದ. ಸಿಸಿಟಿವಿ ದೃಶ್ಯಾವಳಿಗಳೇ ಅಪಘಾತದ ಭೀಕರತೆಗೆ ಸಾಕ್ಷಿಯಾಗಿತ್ತು. ಅಪಘಾತ ನಡೆಯುತ್ತಿದ್ದ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಅವರನ್ನು ಶಿರ್ವ ಪೊಲೀಸ್ರು ಅರೆಸ್ಟ್ ಮಾಡಿದ್ರು. ಆದ್ರೆ, ಪೊಲೀಸ್ ಠಾಣೆಯಿಂದ ಬೇಲ್ ಮೇಲೆ ಪ್ರಜ್ವಲ್ ಶೆಟ್ಟಿ ಹೊರಬಂದಿದ್ದಾನೆ. ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಸಬೂಬು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಕರೆದಾಗ ವಿಚಾರಣೆಗೆ ಬರ್ಬೇಕು ಎಂದು ಪೊಲೀಸ್ರು ಸೂಚನೆ ಕೊಟ್ಟಿದ್ದಾರೆ.
ಅಪಘಾತ ಮಾಡಿದವ್ರು ಹೊರಗಿದ್ರೆ ಮನೆಗಾಗಿ ದುಡಿಯುತ್ತಿದ್ದ ಮಗನ ಕಳ್ಕೊಂಡು ಮನೆಯವ್ರಿಗೆ ದಿಕ್ಕೆ ತೋಚದಂತಾಗಿದೆ. ಕೂಡಲೇ ನನ್ನ ಮಗನ ಆಸ್ಪತ್ರೆಗೆ ಕರ್ಕೊಂಡು ಹೋಗಿದ್ರೆ ಬದುಕ್ತಿದ್ದ ಎಂದು ಮೊಹಮ್ಮದ್ ಹುಸೈನ್ ತಂದೆ ಕಣ್ಣೀರು ಹಾಕಿದ್ರು.
ಮೃತನ ಮನೆಗೆ ತೆರಳಿ ಕುಟುಂಬಸ್ಥರಿಗೆ ದೇವಿಪ್ರಸಾದ್ ಶೆಟ್ಟಿ ಸಾಂತ್ವನ
ಇನ್ನು, ಮೃತನ ಕುಟುಂಬಕ್ಕೆ ದೇವಿಪ್ರಸಾದ್ ಶೆಟ್ಟಿ ಸಹಾಯ ಹಸ್ತ ಚಾಚಿದ್ದು, ಬೆಳಪುವಿನ ಮನೆಗೆ ತೆರಳಿದ ಸೂಕ್ತ ಪರಿಹಾರ ಭರವಸೆ ನೀಡಿದ್ದಾರೆ. ಎಷ್ಟೇ ಪರಿಹಾರ ಕೊಟ್ರು ಸಾಂತ್ವನ ಹೇಳಿದ್ರೂ ಸತ್ತಿರೋ ವ್ಯಕ್ತಿಯಂತೂ ವಾಪಸ್ ಬರಲ್ಲ. ಯಾರದ್ದೋ ತಪ್ಪಿಗೆ ಮನೆಗೆ ಬೆಳಕಾಗಿದ್ದ ಮಗ ಕಣ್ಮರೆಯಾಗಿದ್ದು ಮಾತ್ರ ದುರಂತ.
ಇದನ್ನೂ ಓದಿ: ಮಾಕ್ ಆಕ್ಷನ್‌ನಲ್ಲಿ ಆರ್‌ಸಿಬಿಗೆ ಬಂಪರ್: 18 ಕೋಟಿ ನೀಡಿ KL ರಾಹುಲ್ ಖರೀದಿಸಿದ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ