newsfirstkannada.com

VIDEO: ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಗಳಗಳನೆ ಅತ್ತ ವೀಣಾ ಕಾಶಪ್ಪನವರ್

Share :

Published March 20, 2024 at 1:58pm

  ಪಂಚಮಸಾಲಿ & ಸಮುದಾಯ ಹೋರಾಟಗಳಲ್ಲಿ ಮುಂದಿದ್ದವಳು ನಾನು

  ಬಾಗಲಕೋಟೆ ಜಿಲ್ಲೆ ಜನರಿಗೆ ಸಂಯುಕ್ತಾ ಪಾಟೀಲ್ ಯಾರು ಅಂತ ಗೊತ್ತಿಲ್ಲ

  ಕಷ್ಟದ ಸಮಯದಲ್ಲಿ, ಸೋಲುವ ಸಮಯದಲ್ಲಿ ನಾನು ಸ್ಪರ್ಧಿಸಿದ್ದೆ ಆದರೆ ಈಗ

ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರ ಟಿಕೆಟ್ ಫೈಟ್ ಈಗ ಜೋರಾಗಿದೆ. ಬಾಗಲಕೋಟೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತ ಶಿವಾನಂದ ಪಾಟೀಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಕಣ್ಣೀರು ಹಾಕಿದ್ದಾರೆ.

ಕಾಂಗ್ರೆಸ್ ಟಿಕೆಟ್ ಕೈ ತಪ್ಪುವ ಆತಂಕದಲ್ಲಿ ವೀಣಾ ಕಾಶಪ್ಪನವರ್ ತಮ್ಮ ಪತಿ ವಿಜಯಾನಂದ ಕಾಶಪ್ಪನವರ್ ಜೊತೆ ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಖರ್ಗೆ ಅವರನ್ನು ಭೇಟಿ ಮಾಡಿದ ಬಳಿಕ ನ್ಯೂಸ್‌ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ ವೀಣಾ ಕಾಶಪ್ಪನವರ್ ಬೇಸರ ವ್ಯಕ್ತಪಡಿಸಿದರು. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.

ನ್ಯೂಸ್ ಫಸ್ಟ್‌ ಚಾನೆಲ್‌ಗೆ ತಮ್ಮ ಬೇಸರ ಹಂಚಿಕೊಂಡ ವೀಣಾ ಕಾಶಪ್ಪನವರ್, ಬಾಗಲಕೋಟೆ ಜಿಲ್ಲೆಯ ಜನರಿಗೆ ಸಂಯುಕ್ತಾ ಪಾಟೀಲ್ ಯಾರು ಅನ್ನೋದೇ ಗೊತ್ತಿಲ್ಲ. ಪಂಚಮಸಾಲಿ & ಸಮುದಾಯ ಹೋರಾಟಗಳಲ್ಲಿ ಮುಂದಿದ್ದವಳು ನಾನು. ಉದ್ದೇಶಪೂರ್ವಕವಾಗಿ ನನಗೆ ಟಿಕೆಟ್ ಮಿಸ್ ಮಾಡಿದ್ದು ಯಾಕೆ ಗೊತ್ತಿಲ್ಲ ಎಂದು ಗಳಗಳನೇ ಅತ್ತರು.

ಪ್ರತಿ ಶಾಸಕರ ಚುನಾವಣಾ ಪ್ರಚಾರದಲ್ಲಿ ನಾನು ಸಂಪೂರ್ಣವಾಗಿ ಭಾಗಿಯಾಗಿದ್ದೇನೆ. ಕಳೆದ ಬಾರಿ ಸ್ಪರ್ಧೆಗೆ ಯಾರು ಮುಂದೆ ಬರಲಿಲ್ಲ. ಕಳೆದ ಬಾರಿ ನಮ್ಮ ಶಾಸಕರು ಇರಲಿಲ್ಲ. ಕಷ್ಟದ ಸಮಯದಲ್ಲಿ, ಸೋಲುವ ಸಮಯದಲ್ಲಿ ನಾನು ಸ್ಪರ್ಧಿಸಿದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ ಐದು ಮಂದಿ ನಮ್ಮ ಶಾಸಕರಿದ್ದಾರೆ. ಈಗ ನನಗೆ ಅವಕಾಶ ನೀಡಲು ನಿರಾಕರಿಸುತ್ತಿದ್ದಾರೆ. ಪಕ್ಷಕ್ಕೆ ಕೆಲಸ ಮಾಡಿದವರನ್ನು ಪರಿಗಣಿಸುತ್ತಿಲ್ಲ. ಸಂಜೆವರೆಗೂ ಕಾಯುತ್ತೇನೆ, ಪಟ್ಟಿ ಬಿಡುಗಡೆ ಬಳಿಕ ಮಾತಾನಾಡುತ್ತೇನೆ ಎಂದು ವೀಣಾ ಕಾಶಪ್ಪನವರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಮಲ್ಲಿಕಾರ್ಜುನ ಖರ್ಗೆ ಮನೆ ಮುಂದೆ ಗಳಗಳನೆ ಅತ್ತ ವೀಣಾ ಕಾಶಪ್ಪನವರ್

https://newsfirstlive.com/wp-content/uploads/2024/03/Veena-Kashappanavar.jpg

Load More