ಯೋಗೇಶ್ವರ್ ವಿರುದ್ಧ ಟಿಕೆಟ್​ ಪ್ಲಸ್​ ₹30 ಕೋಟಿ ಕೇಳಿದ ಆರೋಪ- ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ..!

author-image
Bheemappa
Updated On
ನಿಖಿಲ್​ಗೆ ಬರಬೇಕಾಗಿದ್ದ ವೋಟು ಟರ್ನ್​ ಆಗಿದ್ದು ಎಲ್ಲಿ? ಮೈತ್ರಿಯೇ ಮುಳುವಾಯ್ತಾ ಕುಮಾರಣ್ಣನ ಪುತ್ರನಿಗೆ ?
Advertisment
  • ಉಪಚುನಾವಣೆ ಫಲಿತಾಂಶ ರಿಲೀಸ್ ಆಗೋದು ಯಾವಾಗ?
  • ತಮ್ಮ ಹಕ್ಕು ಚಲಾಯಿಸಿದ 5 ಲಕ್ಷ 78 ಸಾವಿರ 221 ಮತದಾರರು
  • ಕ್ಷೇತ್ರದಲ್ಲಿ ಕಾಂಗ್ರೆಸ್​-ಮೈತ್ರಿ ಮಧ್ಯೆ ಬಿಗ್ ಫೈಟ್​, ಗೆಲ್ಲುವುದ್ಯಾರು?

ಮೂರು ಕ್ಷೇತ್ರಗಳು ಒಂದು​ ರೀತಿ ಕುರುಕ್ಷೇತ್ರವೇ ಆಗಿದ್ದವು. ಅದ್ರಲ್ಲೂ ಚನ್ನಪಟ್ಟಣ ಕ್ಷೇತ್ರದಲ್ಲಿ ಮಾತ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಹೆಚ್​ಡಿ ಕುಮಾರಸ್ವಾಮಿ ನಡುವಿನ ನೇರ ಸಮರವಾಗಿತ್ತು. ಇನ್ನೇನು ನವೆಂಬರ್ 23ಕ್ಕೆ ಫಲಿತಾಂಶ ಬರೋದಿದೆ. ಆದ್ರೆ ಅದಕ್ಕೂ ಮೊದಲೇ ಕಾಂಗ್ರೆಸ್​​ ಸೆಲೆಬ್ರೇಷನ್​ನಲ್ಲಿ ತೇಲಿದೆ.

3 ಕ್ಷೇತ್ರಗಳ ಉಪ ಕದನ ಅಂತ್ಯ ಕಂಡಿದೆ. 5 ಲಕ್ಷ 78 ಸಾವಿರ 221 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. 3 ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ನಡೀತಿದ್ದು, ಯಾರು ಗೆಲ್ತಾರೆ? ಯಾರು ಸೋಲ್ತಾರೆ ಅನ್ನೋ ಬಾಜಿ ಕಟ್ಟಲಾಗುತ್ತಿದೆ.

ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ 500 ಸ್ವಿಗ್ಗಿ ಡೆಲಿವರಿ ಬಾಯ್ಸ್​​ ಈಗ ಕೋಟ್ಯಾಧಿಪತಿಗಳು.. ಅದು ಹೇಗೆ?

publive-image

ಸೆಲೆಬ್ರೇಷನ್​ ಪಾರ್ಟಿ ಮಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್​​​!

ಚನ್ನಪಟ್ಟಣದಲ್ಲಿ ಶಾಂತಿಯುತವಾಗಿ ಮತದಾನ ಮುಕ್ತಾಯವಾಗಿದೆ. ಚುನಾವಣೆ ಅಂತ್ಯ ಆಗುತ್ತಿದ್ದಂತೆ ಕೈ ನಾಯಕರು ರಿಲ್ಯಾಕ್ಸ್​ಗೆ​ ಜಾರಿದ್ದಾರೆ. ಇತ್ತ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್​​ನಲ್ಲಿ ಎಲೆಕ್ಷನ್​​ ಗೆದ್ದ ಸಂಭ್ರಮ ಮನೆ ಮಾಡಿದೆ. ಸಿ.ಪಿ ಯೋಗೇಶ್ವರ್​ಗೆ ಕೇಕ್ ತಿನ್ನಿಸಿ ಜೈಕಾರ ಕೂಗಲಾಗಿದೆ. ಇನ್ನೊಂದು ಕಡೆ ಮಾಜಿ ಸಂಸದ ಸುರೇಶ್​, ಎಂಎಲ್​ಸಿ ಪುಟ್ಟಣ್ಣ, ಶರತ್​ ಬಚ್ಚೇಗೌಡ ಸೆಲೆಬ್ರೇಷನ್​​ ಪಾರ್ಟಿ ಮಾಡಿದ್ದಾರೆ.

ಟಿಕೆಟ್​ ಪ್ಲಸ್​ 30 ಕೋಟಿ ಕೇಳಿದ್ರಂತೆ ಯೋಗೇಶ್ವರ್​​!

ಉಪ ಚುನಾವಣೆ ಮುಗಿದ ಬಳಿಕ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಹೇಳಿಕೆ ಭಾರೀ ಸಂಚಲನ ಮೂಡಿಸುತ್ತಿದೆ. ನಮ್ಮ ಪಕ್ಷಕ್ಕೆ ಯೋಗೇಶ್ವರ್ ಅವರನ್ನ ಬಾ ಎಂದು ಕರೆದೇವು. ಟಿಕೆಟ್ ಕೂಡ ನೀಡುತ್ತೇವೆ ಎಂದು ಹೇಳಿದ್ದೇವು. ಆದ್ರೆ, ಅವರು ಟಿಕೆಟ್​​ ಜೊತೆಗೆ 30 ಕೋಟಿ ರೂಪಾಯಿ ಕೇಳಿದರು ಅನ್ನೋ ಹೇಳಿಕೆ ಸದ್ದು ಮಾಡುತ್ತಿದೆ.

ಸಿ.ಪಿ ಯೋಗೇಶ್ವರ್ ಅವರನ್ನು ಸೋತರೂ ಕೂಡ ಎಂಎಲ್​​ಸಿ ಮಾಡುತ್ತಾರೆ. ಅವರಿಗೆ ಗೊತ್ತು ನಾನು ಜಂಪಿಂಗ್ ಸ್ಟಾರ್ ಅಂತ. ಉಪ ಚುನಾವಣೆಗೆ ಟಿಕೆಟ್ ಕೊಡುತ್ತೇವೆ. ನಮ್ಮ ಪಕ್ಷಕ್ಕೆ ಬನ್ನಿ ಎಂದು ಕರೆದ್ವಿ. ಟಿಕೆಟ್​​ ಕೊಡುತ್ತೇವೆ ಎಂದು ಹೇಳಿದ್ದೇವು. ಆದರೆ ಅವರು 30 ಕೋಟಿ ಅಮೌಂಟ್ ಕೇಳಿದರು.

ಸಮೃದ್ಧಿ ಮಂಜುನಾಥ್​, ಜೆಡಿಎಸ್​ ಶಾಸಕ

ಇದನ್ನೂ ಓದಿ:ನಕ್ಸಲರು ಪಲಾಯನ.. ಮಲೆನಾಡಿನಲ್ಲಿ ಹೆಜ್ಜೆ ಗುರುತು.. ANF, ಪೊಲೀಸರಿಂದ ಕಾರ್ಯಾಚರಣೆ ಚುರುಕು

publive-image

ಮೂರು ಕ್ಷೇತ್ರದಲ್ಲಿ ಮತೋತ್ಸಾಹ!

  • ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ
  • ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.88.80ರಷ್ಟು ಮತದಾನ
  • ಶಿಗ್ಗಾಂವಿಯಲ್ಲಿ ಶೇ.80.48ರಷ್ಟು ಮತ ಚಲಾವಣೆ
  • ಸಂಡೂರು ಕ್ಷೇತ್ರದಲ್ಲಿ ಶೇ.76.24 ರಷ್ಟು ಮತದಾನ

ಗೆಲುವು-ಸೋಲಿನ ಲೆಕ್ಕಾಚಾರ ನಡೆಯುತ್ತಿದ್ದು, ನವೆಂಬರ್ 23ರ ರಿಸಲ್ಟ್‌ ಯಾರ ಪರ ಇರಲಿದೆ ಅನ್ನೋದು ಬಹಿರಂಗ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment