newsfirstkannada.com

ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್​ ಕಾರ್ಡ್​ ಹಂಚಿಕೆ ಆರೋಪ.. ಎಲ್ಲೆಲ್ಲಿ?

Share :

Published April 26, 2024 at 9:30am

  ಕಾಂಗ್ರೆಸ್​ ನಾಯಕರು ಮತದಾರರಿಗೆ ಆಮಿಷವೊಡುತ್ತಿರುವ ಆರೋಪ

  ಜಿಲ್ಲೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಾಂಗ್ರೆಸ್​ನ ಸ್ಮಾರ್ಟ್ ಕಾರ್ಡ್​ಗಳು ಪತ್ತೆ

  ಸ್ಮಾರ್ಟ್​ ಕಾರ್ಡ್​ ಮೇಲೆ ಸಿಎಂ ಸೇರಿ ಹಲವರ ಫೋಟೋ ಇದೆ

ರಾಮನಗರ: ಕಾಂಗ್ರೆಸ್​ ನಾಯಕರು ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಮತದಾರರಿಗೆ ಆಮಿಷವೊಡ್ಡಲು ಸ್ಮಾರ್ಟ್​ ಕಾರ್ಡ್​ಗಳನ್ನು ವಿತರಣೆ ಮಾಡ್ತಿದ್ದಾರೆ ಎಂದು ಬಿಜೆಪಿ-ಜೆಡಿಎಸ್​ನ ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಏನಿದು ಆರೋಪ..?

ಕಾಂಗ್ರೆಸ್​ ಮುಖಂಡರ ವಿರುದ್ಧ ಮೈತ್ರಿ ಕಾರ್ಯಕರ್ತರು ಗಂಭೀರವಾದ ಆರೋಪ ಮಾಡಿದ್ದು, ಜಿಲ್ಲೆಯ ಸಾಕಷ್ಟು ಕಡೆ ಸ್ಮಾರ್ಟ್​ ಕಾರ್ಡ್​​ಗಳು ಪತ್ತೆಯಾಗಿವೆ. ರಾಮನಗರದ 31 ವಾರ್ಡ್​​ಗಳಲ್ಲೂ ಹಂಚಿಕೆ ಮಾಡುತ್ತಿರುವ ಕಾರ್ಡ್ ಮೇಲೆ ಡಿಸಿಎಂ ಡಿ.ಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಫೋಟೋ ಇವೆ. ಮಾಗಡಿ ಕ್ಷೇತ್ರದ ಕಾರ್ಡ್​ಗಳ ಮೇಲೆ ಶಾಸಕ ಹೆಚ್​.ಸಿ ಬಾಲಕೃಷ್ಣ ಅವರ ಫೋಟೋ ಇದ್ದರೇ ಇತ್ತ ಕನಕಪುರ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಫೋಟೋ ಪತ್ತೆಯಾಗಿದೆ ಎಂದು ಮೈತ್ರಿ ಕಾರ್ಯಕರ್ತರು ಆರೋಪಿಸಿದ್ದಾರೆ.  ಚನ್ನಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್ ಅವರ ಫೋಟೋ ಇರುವುದು ಗೊತ್ತಾಗಿದೆ.

ಇದನ್ನೂ ಓದಿ: ಹೊಸ ರೂಪದಲ್ಲಿ ಬರ್ತಿದೆ ಕಾಮಿಡಿ ಕಿಲಾಡಿಗಳು.. ಪ್ರತಿವಾರ 1 ಲಕ್ಷ ನಗದು ಬಹುಮಾನ ಕೊಡ್ತಾರಾ?

ಕಾಂಗ್ರೆಸ್​ ಮುಖಂಡರು ರಾತ್ರಿ ಮನೆಮನೆಗೆ ತೆರಳಿ ಕಾರ್ಡ್ ಹಂಚಿದ್ದಾರೆ ಎಂದು ಆರೋಪ ಮಾಡಲಾದೆ. ಇದನ್ನು ಮೈತ್ರಿ ನಾಯಕರು ರೆಡ್​ ಆ್ಯಂಡ್​ ಆಗಿ ಹಿಡಿದು ಪ್ರಶ್ನೆ ಮಾಡಿದ್ದಾರೆ. ಇಂದು ಎಲ್ಲೆಡೆ ಮತದಾನ ಆರಂಭವಾಗಿದ್ದು, ಜನರು ಸ್ವ-ಇಚ್ಛೆಯಿಂದ ಬಂದು ವೋಟ್ ಮಾಡುತ್ತಿದ್ದಾರೆ. ಮತದಾನ ಮಾಡುವಾಗಲೂ ಬೂತ್ ಬಳಿಯೇ ಸ್ಮಾರ್ಟ್​ ಕಾರ್ಡ್​ಗಳನ್ನು ಮತದಾರರಿಗೆ ನೀಡುತ್ತಿರುವ ದೃಶ್ಯ ಕಂಡು ಬಂದ ಹಿನ್ನೆಲೆಯಲ್ಲಿ ಕೈಮುಖಂಡರಿಗೆ ಮೈತ್ರಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತದಾರರಿಗೆ ಸಿಎಂ, ಡಿಸಿಎಂ ಫೋಟೋ ಇರೋ ಸ್ಮಾರ್ಟ್​ ಕಾರ್ಡ್​ ಹಂಚಿಕೆ ಆರೋಪ.. ಎಲ್ಲೆಲ್ಲಿ?

https://newsfirstlive.com/wp-content/uploads/2024/04/RMG_VOTE.jpg

Load More