newsfirstkannada.com

ಗಂಡನನ್ನ ಹೊರಗಿಟ್ಟು ಚುನಾವಣೆಗೆ ಸ್ಪರ್ಧೆ ಮಾಡೋ ಶಕ್ತಿ ನನಗಿದೆ- ವೀಣಾ ಕಾಶಪ್ಪನವರ ಎಚ್ಚರಿಕೆ

Share :

Published March 25, 2024 at 8:58am

    ಸಂಯುಕ್ತ ಪಾಟೀಲ್​ಗೆ ಕಾಂಗ್ರೆಸ್ ಟಿಕೆಟ್​ ನೀಡಿದ ಬೆನ್ನಲ್ಲೇ ಬೇಸರ

    ಲೋಕಸಭಾ ಟಿಕೆಟ್​ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ವೀಣಾ

    ಸಿಎಂ, ಡಿಸಿಎಂ ಸಭೆಯಲ್ಲಿ ನ್ಯಾಯ ಸಿಗದಿದ್ದರೆ ಸ್ಪರ್ಧೆ ಮಾಡುತ್ತೇನೆ

ಬಾಗಲಕೋಟೆ: ಸಂಯುಕ್ತ ಪಾಟೀಲ್​ಗೆ ಕಾಂಗ್ರೆಸ್ ಟಿಕೆಟ್​ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ವೀಣಾ ಕಾಶಪ್ಪನವರ ನನಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೇ ಈ ಸಲ ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳಿದ್ದಾರೆ. ​

ನವನಗರದಲ್ಲಿನ ಕಾಶಪ್ಪನವರ ಮನೆಯಲ್ಲಿ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ವಿನಯ್​ ಕುಲಕರ್ಣಿ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಕಾಂಗ್ರೆಸ್​ ನಾಯಕಿ ವೀಣಾ ಕಾಶಪ್ಪನವರ, ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ನ್ಯಾಯ ಸಿಗದಿದ್ದರೆ ಸ್ಪರ್ಧೆ ಮಾಡುತ್ತೇನೆ. ನನ್ನ ಪತಿ ಹಾಗೂ ಶಾಸಕ ಆಗಿರುವ ವಿಜಯಾನಂದ ಕಾಶಪ್ಪನವರನ್ನ ಹೊರಗಿಟ್ಟು ಚುನಾವಣೆಗೆ ಸ್ಪರ್ಧೆ ಮಾಡುವ ಶಕ್ತಿ ಇದೆ. ಗಂಡನನ್ನು ಇದರೊಳಗೆ ಎಳೆದು ತರುವುದಿಲ್ಲ. ಜಿಲ್ಲೆಯ ಜನರು ನನ್ನ ಜೊತೆಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾತ್ರಿ ಮಲಗಿದ್ದವನ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ.. ದುಷ್ಕರ್ಮಿಗಳು, ಎಸ್ಕೇಪ್

ಶಾಸಕ ವಿನಯ್ ಕುಲಕರ್ಣಿ ಎದುರೆ ವೀಣಾ ಕಾಶಪ್ಪನವರ ಬೆಂಬಲಿರು ಆಕ್ರೋಶ ವ್ಯಕ್ತಪಡಿಸಿ ಟಿಕೆಟ್ ಕೊಡಿಸುವಂತೆ ಪಟ್ಟು ಹಿಡಿದಿದ್ದರು. ಸಭೆಯಲ್ಲಿ ವಿನಯ್ ಕುಲಕರ್ಣಿ ಮಾತಾಡುವಾಗ ವೇದಿಕೆ ಮುಂದೆ ಬಂದು ಬೆಂಬಲಿಗರು ಪ್ರಶ್ನೆ ಮಾಡಲು ಮುಂದಾದರು. ಮಾರ್ಚ್​ 28ರಂದು ಎಲ್ಲ ಬಗೆ ಹರಿಯುತ್ತದೆ ಎಂದು ಹೇಳಿದರೂ ಇದನ್ನು ಕೇಳದೆ ಪಕ್ಷದ ಕಾರ್ಯಕರ್ತರು ಟಿಕೆಟ್ ಕೊಡಿಸಿ ಇಲ್ಲವೇ ಬಂಡಾಯ ಸ್ಫರ್ಧೆಗೆ ಅವಕಾಶ ಕೊಡಿಸಿ ಎಂದು ಪಟ್ಟು ಹಿಡಿದರು. ಮುಂದಿನ ಸಭೆಯಲ್ಲಿ ಸಮಸ್ಯೆ ಬಗೆಹರಿಯುತ್ತೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡನನ್ನ ಹೊರಗಿಟ್ಟು ಚುನಾವಣೆಗೆ ಸ್ಪರ್ಧೆ ಮಾಡೋ ಶಕ್ತಿ ನನಗಿದೆ- ವೀಣಾ ಕಾಶಪ್ಪನವರ ಎಚ್ಚರಿಕೆ

https://newsfirstlive.com/wp-content/uploads/2024/03/VEENA_KASHAPPANAVAR_1.jpg

Load More