newsfirstkannada.com

ಬಿಜೆಪಿಗೆ ಸೆಡ್ಡು ಹೊಡೆಯುತ್ತಾ ಮಹಾಘಟಬಂಧನ; ಜೆಡಿಎಸ್‌ಗೆ ಆಹ್ವಾನ ಇದ್ಯಾ? ನಾಳೆಯ ಸಭೆಗೆ ಯಾಱರು ಬರ್ತಾರೆ?

Share :

Published July 16, 2023 at 4:48pm

    ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎಂ.ಕೆ ಸ್ಟಾಲಿನ್, ಉದ್ಧವ್ ಠಾಕ್ರೆ

    ನಾಳೆ ನಿತೀಶ್ ಕುಮಾರ್ ಸೇರಿ ಹಲವು ಪ್ರಮುಖ ನಾಯಕರು ಆಗಮನ

    ಪಾಟ್ನಾದಲ್ಲಿ ನಡೆದ ಸಭೆಗೆ ಜೆಡಿಎಸ್ ಪಕ್ಷಕ್ಕೆ ಆಹ್ವಾನ ನೀಡಿದ್ದ ನಾಯಕರು

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದಿಟ್ಟ ಹೋರಾಟ ನಡೆಸಲು ವಿರೋಧಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಪಾಟ್ನಾದಲ್ಲಿ ನಡೆದ ಮೊದಲ ರಾಜಕೀಯ ಸಭೆಯ ಬಳಿಕ ಯುಪಿಎ ಮಿತ್ರಪಕ್ಷಗಳ ದಂಡು ಬೆಂಗಳೂರಿನತ್ತ ಆಗಮಿಸುತ್ತಿದೆ. ನಾಳೆ, ನಾಡಿದ್ದು ಬೆಂಗಳೂರಿನ ಖಾಸಗಿ ಹೋಟೆಲ್‌ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಮಹಾಘಟಬಂಧನ ನಾಯಕರ ಮಹಾಮಿಲನವೇ ಆಗಲಿದೆ. ನಾಳೆ ಮಿತ್ರಪಕ್ಷಗಳ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಈಗಾಗಲೇ ರಾಷ್ಟ್ರ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಮಹಾಘಟಬಂಧನ ಮೀಟಿಂಗ್ ನಡೆಯುವ ಹಿನ್ನೆಲೆ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಸಕಲ ತಯಾರಿ ಮಾಡಲಾಗಿದೆ. ರೇಸ್‌ಕೋರ್ಸ್‌ ರಸ್ತೆಯಲ್ಲಿ ಯುಪಿಎ ಮಿತ್ರಪಕ್ಷಗಳ ಪ್ರಮುಖ ನಾಯಕರ ಬಾವುಟಗಳು ರಾರಾಜಿಸುತ್ತಿವೆ. ಇಂದು ಕೋಲ್ಕತ್ತಾ ಹಾಗೂ ಉತ್ತರ ಪ್ರದೇಶದಿಂದ ವಿವಿಧ ಪಕ್ಷದ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಕಾಂಗ್ರೆಸ್‌ನ ಮಾಜಿ ಸಚಿವ ಹಾಲಿ ರಾಜ್ಯಸಭಾ ಸದಸ್ಯ ಡೆರೆಕ್ ಒರ್ಬಿನ್, ಸಮಾಜವಾದಿ ಪಾರ್ಟಿಯ ಲಾಲ್ ಜಿ ವರ್ಮಾ, ರಾಮಚಂದ್ರ ರಾಜ್ಯಾಭಾರ್ ಆಗಮಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರಾದ ಶರತ್ ಬಚ್ಚೇಗೌಡ ಮತ್ತು ಎಸಿ ಶ್ರೀನಿವಾಸ್ ಅವರು ಗಣ್ಯರಿಗೆ ಸ್ವಾಗತ ಕೋರಿದ್ದಾರೆ.

ರಾಜ್ಯ ಕಾಂಗ್ರೆಸ್ ಘಟಕ ಒಬ್ಬೊಬ್ಬ ಪಾರ್ಟಿ ನಾಯಕರನ್ನ ಬರಮಾಡಿಕೊಳ್ಳಲು ಒಬ್ಬೊಬ್ವ ಶಾಸಕರನ್ನು ನೇಮಕ ಮಾಡಿದೆ. ರಾಷ್ಟ್ರೀಯ ನಾಯಕರನ್ನು ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಿಂದ ನೇರವಾಗಿ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಲಾಗ್ತಿದೆ. ಇಂದು ಮತ್ತು ನಾಳೆ ಬೆಂಗಳೂರಲ್ಲೇ ಉಳಿಯಲಿರುವ ಮಿತ್ರ ಪಕ್ಷಗಳ ನಾಯಕರು ಮಹತ್ವದ ಚರ್ಚೆ ನಡೆಸಲಿದ್ದಾರೆ.

ನಾಳಿನ ಮಹಾಘಟಬಂಧನ್ ಸಭೆಗೆ 24 ಪಕ್ಷದ ಪ್ರಮುಖ ನಾಯಕರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಖಾಸಗಿ ಹೊಟೇಲ್‌ನಲ್ಲಿ ಸಭೆಗೆ ಭರ್ಜರಿ ತಯಾರಿ ನಡೆಸಲಾಗಿದೆ. ರೇಸ್ ಕೋರ್ಸ್ ರಸ್ತೆ, ಕುಮಾರಕೃಪ ರಸ್ತೆಯಲ್ಲಿ ಬೃಹತ್ ಫ್ಲೆಕ್ಸ್, ಬ್ಯಾನರ್ ಅಳವಡಿಸಲಾಗಿದೆ. ಸೋನಿಯಾ ಗಾಂಧಿ, ಎಂ.ಕೆ ಸ್ಟಾಲಿನ್, ಮಲ್ಲಿಕಾರ್ಜುನ ಖರ್ಗೆ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ರಾಹುಲ್ ಗಾಂಧಿ, ಉದ್ದವ್ ಠಾಕ್ರೆ ಸೇರಿದಂತೆ ಪ್ರಮುಖರ ಫ್ಲೆಕ್ಸ್ ಬ್ಯಾನರ್ ಅಳವಡಿಸಲಾಗಿದೆ. ಹೋಟೆಲ್‌ಗೆ ಆಗಮಿಸಿದ ಕೆಲ ಕಾಂಗ್ರೆಸ್ ನಾಯಕರು ಸಿದ್ಧತೆಗಳನ್ನ ಪರಿಶೀಲನೆ ನಡೆಸಿದ್ದಾರೆ.

‘ಜೆಡಿಎಸ್ ಪಕ್ಷಕ್ಕೆ ಆಹ್ವಾನ ಇಲ್ಲ’
ಪಾಟ್ನಾದಲ್ಲಿ ನಡೆದ ಮೊದಲ ಮಹಾಘಟಬಂಧನ ಸಭೆಗೆ ಜೆಡಿಎಸ್ ಪಕ್ಷವನ್ನು ಆಹ್ವಾನ ನೀಡಲಾಗಿತ್ತು. ಜೆಡಿಎಸ್ ನಾಯಕರು ಆ ಸಭೆಯಲ್ಲಿ ಭಾಗವಹಿಸಿರಲಿಲ್ಲ. ಇನ್ನು ನಾಳೆ, ನಾಡಿದ್ದು ರಾಜ್ಯ ರಾಜಧಾನಿ ಬೆಂಗಳೂರಲ್ಲೇ ಮೈತ್ರಿ ಕೂಟದ ಸಭೆ ಕರೆಯಲಾಗಿದೆ. ಜೆಡಿಎಸ್ ಪಕ್ಷ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಳ್ಳುವ ವದಂತಿಯ ಹಿನ್ನೆಲೆಯಲ್ಲಿ ಇದುವರೆಗೂ ಜೆಡಿಎಸ್ ಪಕ್ಷಕ್ಕೆ ಅಧಿಕೃತ ಆಹ್ವಾನ ನೀಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಗೆ ಸೆಡ್ಡು ಹೊಡೆಯುತ್ತಾ ಮಹಾಘಟಬಂಧನ; ಜೆಡಿಎಸ್‌ಗೆ ಆಹ್ವಾನ ಇದ್ಯಾ? ನಾಳೆಯ ಸಭೆಗೆ ಯಾಱರು ಬರ್ತಾರೆ?

https://newsfirstlive.com/wp-content/uploads/2023/07/Sonia-Gandhi.jpg

Load More