newsfirstkannada.com

ಲೋಕಸಭೆ ಚುನಾವಣೆ; ಗೆಲ್ಲೋ ಅಭ್ಯರ್ಥಿಗಳಿಗೆ ಕಾಂಗ್ರೆಸ್​​ ಟಿಕೆಟ್ ಎಂದ ಹೈಕಮಾಂಡ್​​​​

Share :

Published January 20, 2024 at 8:26pm

  ಕಾಂಗ್ರೆಸ್​ನಲ್ಲಿ ‘ಲೋಕ’ ಟಿಕೆಟ್ ಆಯ್ಕೆ ಕಸರತ್ತು

  ಗೆಲ್ಲುವ ಕುದುರೆಗಳಿಗೆ ಮಣೆ ಹಾಕಲು ‘ಹಸ್ತ’ ಚಿತ್ತ!

  ಸಂಭವನೀಯ ಅಭ್ಯರ್ಥಿಗಳ ಪಟ್ಟಿಗೆ ಕೆಲವರ ಅಪಸ್ವರ

ಬೆಂಗಳೂರು: ರಾಜ್ಯ ಕಾಂಗ್ರೆಸ್​​ ಪಾಳಯ ‘ಲೋಕ’ ಕದನ ಗೆಲಲ್ಲು ಸಜ್ಜಾಗ್ತಿದೆ.. ಟಾರ್ಗೆಟ್-20 ರೀಚ್ ಆಗಲು ಗೆಲ್ಲುವ ಕುದುರೆಗಳಿಗಾಗಿ ಚಿಂತನ-ಮಂಥನ ನಡೆಸ್ತಿದೆ.. ಆದ್ರೆ ಕೈ ಅಭ್ಯರ್ಥಿಗಳ ಸಂಭವನೀಯ ಪಟ್ಟಿಗೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರಿಂದ ಅಪಸ್ವರ ಕೇಳಿಬಂದಿದೆ.

ವಿಧಾನಸಭೆ ಚುನಾವಣೆಯಲ್ಲಿ ‘ಗ್ಯಾರಂಟಿ‘ ಭರವಸೆಗಳ ಮೂಲಕ ಗದ್ದುಗೆ ಏರಿದ್ದ ರಾಜ್ಯ ಕಾಂಗ್ರೆಸ್ ಪಡೆ ಈಗ ಲೋಕಸಭೆಯ ಚುನಾವಣೆಯಲ್ಲೂ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ.. ಹೀಗಾಗಿ ಹಸ್ತ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ಶುರುವಾಗಿವೆ.

ಲೋಕ ಅಭ್ಯರ್ಥಿಗಳ ಆಯ್ಕೆಗೆ ಸುರ್ಜೇವಾಲಾ ಮೀಟಿಂಗ್

ಲೋಕಸಭಾ ಚುನಾವಣೆಯಲ್ಲಿ ಶತಾಯಗತಾಯ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್​​ನಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೀತಿದೆ.. ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆದಿದೆ.. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಸೇರಿ ಪ್ರಮುಖ ಸಚಿವರ ಜೊತೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರಮುಖ ಚರ್ಚೆ ನಡೆದಿದೆ.

ಕಾಂಗ್ರೆಸ್​​ನಲ್ಲಿ ‘ಲೋಕ’ ಅಭ್ಯರ್ಥಿಗಳ ಪಟ್ಟಿಗೆ ಅಪಸ್ವರ!

ಇನ್ನು ಲೋಕಸಭೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆಗೆ ಸಲಹೆ ನೀಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿತ್ತು.. ಹೀಗಾಗಿ ಸಚಿವರು ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಸೂಚಿಸಿದ್ದರು.. ಆದ್ರೆ ಸಚಿವರ ಶಿಫಾರಸಿಗೆ ಕಾಂಗ್ರೆಸ್​​ನಲ್ಲಿ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.. ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಬಲ ಆಕಾಂಕ್ಷಿಗಳ ಹೆಸರು ಇಲ್ಲದೇ ಇರುವುದು ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸುಮಾರು 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಈ ಗೊಂದಲ ಸೃಷ್ಟಿಯಾಗಿದೆ. ಸಚಿವರು ಕೆಲವು ಹೆಸರುಗಳನ್ನು ನೀಡಿದರೂ ಆ ಕ್ಷೇತ್ರಗಳಲ್ಲಿ ಪ್ರಬಲ ಆಕಾಂಕ್ಷಿಯನ್ನು ಕಡೆಗಣಿಸಲಾಗಿದೆ ಅಂತ ಬೇಸರ ವ್ಯಕ್ತವಾಗಿದೆ.. ಹೀಗಾಗಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ.

ಅನಿವಾರ್ಯ ಇದ್ರೆ ಸಚಿವರಿಗೆ ಟಿಕೆಟ್ ಕೊಡುವ ಪ್ಲಾನ್

ಅನಿವಾರ್ಯ ಇದ್ರೆ ಹಾಲಿ ಸಚಿವರಿಗೆ ಟಿಕೆಟ್ ಕೊಡಲು ನೀಡಲು ಕಾಂಗ್ರೆಸ್ ಹೈಕಮಾಂಡ್ ಪ್ಲಾನ್ ಮಾಡಿದೆ. ಮಂತ್ರಿಸ್ಥಾನ ಕೈತಪ್ಪುತ್ತೆ ಅಂತೆ ಸ್ಪರ್ಧೆಗೆ ಹಿಂದೇಟು ಹಾಕಬಾರದು, 28 ಲೋಕಸಭಾ ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸುತ್ತೇವೆ. ಎಲ್ಲಿ ಜನರ ಒಲವು ಹೆಚ್ಚು ವ್ಯಕ್ತವಾಗುವ ಸಚಿವರು ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕಾಗುತ್ತೆ. ಅಂತಹ ಸಚಿವರ ಹೆಸರು ಮುಂಚೂಣಿಯಲ್ಲಿದ್ದರೆ ಅವರು ಸ್ಪರ್ಧಿಸಲೇಬೇಕು, ಒಂದು ವೇಳೆ ಸ್ಪರ್ಧಿಸಿದ್ರೂ ಪೈಪೋಟಿ ನೀಡದೇ ಕಾಟಾಚಾರಕ್ಕೆ ಚುನಾವಣೆ ಎದುರಿಸಬಾರದು. ಇಲ್ಲದಿದ್ರೆ ಮುಲಾಜಿಲ್ಲದೇ ಅಂತವರಿಗೆ ಸಚಿವ ಸ್ಥಾನ ಕೈತಪ್ಪಲಿದೆ ಅಂತ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸಿಎಂ, ಡಿಸಿಎಂ ಸೂಚನೆ!

ರಾಜ್ಯದಲ್ಲಿ 20 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಿದೆ ಅಂತ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಸೂಚನೆ ನೀಡಿದ್ದಾರೆ.. ವಿಧಾನಸಭೆಯಲ್ಲಿ ಜನ ನಿರೀಕ್ಷೆಗೂ ಮೀರಿ ನಮ್ಮನ್ನು ಬೆಂಬಲಿಸಿದ್ದಾರೆ.. ಲೋಕಸಭೆಯಲ್ಲೂ ಕೈ ಹಿಡಿಯುವ ಭರವಸೆ ಇದೆ.. ಹೈಕಮಾಂಡ್ ಸಾಕಷ್ಟು ನಿರೀಕ್ಷೆ ಇಟ್ಕೊಂಡಿದೆ.. ನಾವೆಲ್ಲ ಒಟ್ಟಾಗಿ ಕೆಲಸ ಮಾಡುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಅಂತ ಸೂಚನೆ ನೀಡಿದ್ದಾರೆ.

ಇನ್ನು ‘ಲೋಕ’ ಸಂಭಾವ್ಯ ಪಟ್ಟಿಗೆ ತಮ್ಮ ಅಸಮಾಧಾನದ ಬಗ್ಗೆ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.. ಒಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್ ತಂತ್ರಗಾರಿಕೆ ಮಾಡುತ್ತಿದೆ. ಪಕ್ಷದ ಹೈಕಮಾಂಡ್ ಕೂಡ ಪಕ್ಷ ಅಧಿಕಾರಲ್ಲಿರುವ ರಾಜ್ಯಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆ; ಗೆಲ್ಲೋ ಅಭ್ಯರ್ಥಿಗಳಿಗೆ ಕಾಂಗ್ರೆಸ್​​ ಟಿಕೆಟ್ ಎಂದ ಹೈಕಮಾಂಡ್​​​​

https://newsfirstlive.com/wp-content/uploads/2024/01/SIDDU-DKS-1.jpg

Load More