newsfirstkannada.com

ಟಾರ್ಗೆಟ್​ 20+ ಕಾಂಗ್ರೆಸ್​ನ ಗುರಿ.. ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು..?

Share :

Published February 15, 2024 at 7:32am

  ಲೋಕ ಸಮರ ಗೆಲ್ಲಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

  ಕದನ ಗೆಲ್ಲಲು ಕೈ ಕಲಿಗಳಿಗೆ ನಾಯಕರಿಂದ ರಣವ್ಯೂಹದ ಪಾಠ

  ಗ್ಯಾರಂಟಿಗಳ ಫಲಾನುಭವಿಯಾದ್ರೂ ವಿಪಕ್ಷಗಳ ಬೆಂಬಲಿಗರ ಟೀಕೆ

ಟಾರ್ಗೆಟ್​ 20+.. ಇದು ಕಾಂಗ್ರೆಸ್​ನ ಗುರಿ. ಲೋಕಸಭೆಯಲ್ಲಿ ರಾಜ್ಯದಿಂದ 20ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂದು ಹಲವು ತಂತ್ರಗಳನ್ನು ಹೆಣೆಯುತ್ತಿದೆ. ಇದರ ಭಾಗವಾಗಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ನಾಯಕರು, ಶಾಸಕರಿಗೆ ಗೆಲುವಿನ ಪಾಠ ಮಾಡಿದ್ದಾರೆ.

ದೇಶಾದ್ಯಂತ ಲೋಕಸಭಾ ಚುನಾವಣಾ ಕಾವು ಜೋರಾಗತೊಡಗಿದೆ. ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿದೆ. ಈ ನಿಮಿತ್ತ ಮೋದಿ ಮತ್ತೊಮ್ಮೆ ಅಂತ ಕೇಸರಿ ಕಲಿಗಳು ಈಗಾಗಲೇ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್​ ಇಂಡಿಯಾ ಮೈತ್ರಿಕೂಟ ಕಟ್ಟಿಕೊಂಡು ತೆವಳಿಕೊಂಡೋ ಸ್ಪರ್ಧೆಯಲ್ಲಿ ಧುಮುಕಿದೆ. ಈ ನಡುವೆ ಟಾರ್ಗೆಟ್​ 20+ ಗುರಿ ಇಟ್ಕೊಂಡು ಕಾಂಗ್ರೆಸ್​ ನಾಯಕರು ರಾಜ್ಯದಲ್ಲಿ ಮಿಂಚಿನ ಸಂಚಾರ ನಡೆಸಿ ತಂತ್ರ ಹೆಣೆಯುತ್ತಿದ್ದಾರೆ.

ಲೋಕ ಸಮರ ಗೆಲ್ಲಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ-ಲೋಕಸಭಾ ಚುನಾವಣೆಗೆ ಸಿದ್ಧರಾಗಲು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಸಲಹೆ-ಸೂಚನೆ

ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದು ಕಾಂಗ್ರೆಸ್​ ನಾಯಕರು ಅಖಾಡಕ್ಕಿಳಿದಿದ್ದಾರೆ. ಈ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಈ ವೇಳೆ ಲೋಕಸಭಾ ಚುನಾವಣೆಗೆ ಸಿದ್ಧರಾಗಲು ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಸಲಹೆ-ಸೂಚನೆ ನೀಡಿದ್ದಾರೆ.

ಶಾಸಕರಿಗೆ ‘ಲೋಕ’ ತಂತ್ರ

 • ಲೋಕಸಭಾ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಿ
 • ಸದನ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ
 • ಬೆಂಗಳೂರಿಗೆ ಬರಬೇಡಿ, ಜನರನ್ನ ವಿಶ್ವಾಸಕ್ಕೆ ತಗೊಳ್ಳಿ
 • ಮುಖಂಡರು,ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿರಿ
 • ಸರ್ಕಾರದ ಗ್ಯಾರೆಂಟಿಗಳ ಬಗ್ಗೆ ಜನರಿಗೆ ತಿಳಿಸಿ ಕೊಡಿ
 • ನಿಮ್ಮ ಕ್ಷೇತ್ರದ ಅನುದಾನವನ್ನ ಬಿಡುಗಡೆ ಮಾಡ್ತೇವೆ
 • ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ಕೊಡಿ
 • ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಹೆಚ್ಚಿನ ಲೀಡ್ ತಂದು ಕೊಡಿ
 • ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿ ಕೊಡುವತ್ತ ಗಮನಹರಿಸಿ

ಇದೇ ವೇಳೆ ಲೋಕಸಭಾ ಚುನಾವಣೆಗೆ ರಾಜ್ಯ ಪ್ರವಾಸ ಮಾಡುವ ಕುರಿತೂ ಸಮಾಲೋಚನೆ ಮಾಡಲಾಗಿದೆ. ಅಧಿವೇಶನ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಪ್ರತ್ಯೇಕವಾಗಿ ಪ್ರವಾಸ ಕೈಗೊಳ್ಳುವ ಬಗ್ಗೆ ಚರ್ಚೆಯಾಗಿದೆ. ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಕ್ಷೇತ್ರಾವಾರು ಹಂಚಿಕೆ ಮಾಡಿಕೊಂಡು ಪ್ರವಾಸ ಕೈಗೊಳ್ಳುವ ಕುರಿತು ಮಾತುಕತೆಯಾಗಿದೆ. ಇನ್ನೂ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ನೀಡದಿರುವ ಕುರಿತು ವಿಷಯ ಪ್ರಸ್ತಾಪವಾಗಿದ್ದು ಆದಷ್ಟು ಬೇಗ ಸಂಭವನೀಯರ ಪಟ್ಟಿ ನೀಡುವಂತೆ ನಾಯಕರು ಸೂಚಿಸಿದ್ದಾರೆ.

‘ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳು ಜನರ ಹಕ್ಕು’
ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳು ಜನರ ಹಕ್ಕು. ಇದನ್ನು ನಾವು ಗಟ್ಟಿ ಧ್ವನಿಯಲ್ಲಿ ಹೇಳಬೇಕು ಅಂತ ಸಿಎಂ ಸಿದ್ದರಾಮಯ್ಯ ಶಾಸಕರಿಗೆ ಸೂಚಿಸಿದ್ದಾರೆ. ಬಿಜೆಪಿ – ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು, ಬೆಂಬಲಿಗರು ಗ್ಯಾರಂಟಿಗಳ ಫಲಾನುಭವಿಗಳಾಗಿದ್ರೂ ಟೀಕಿಸುತ್ತಿದ್ದಾರೆ. ಅಲ್ಲದೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಹೆಮ್ಮೆಯಿಂದ ಮಾತನಾಡಬೇಕು ಅಂತ ಸಿಎಂ ಹೇಳಿದರು.

ಒಟ್ಟಾರೆ ಹಸ್ತಪಡೆ ಲೋಕಸಮರದಲ್ಲಿ ಟಾರ್ಗೆಟ್​ 20+ ಇಟ್ಕೊಂಡು ಮುನ್ನುಗ್ಗುತ್ತಿದೆ. ವಿಧಾನಸಭೆ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್​ ಇದೇ ಚಾರ್ಜ್​ನೊಂದಿಗೆ ಲೋಕಸಭೆಯಲ್ಲೂ ಗೆಲ್ಲಲು ತಯಾರಿ ನಡೆಸಿದೆ.

ವಿಶೇಷ ವರದಿ: ಶಿವಪ್ರಸಾದ ನ್ಯೂಸ್​ ಫಸ್ಟ್ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾರ್ಗೆಟ್​ 20+ ಕಾಂಗ್ರೆಸ್​ನ ಗುರಿ.. ಶಾಸಕಾಂಗ ಪಕ್ಷದ ಸಭೆಯಲ್ಲಿ ತೆಗೆದುಕೊಂಡ ಮಹತ್ವದ ನಿರ್ಧಾರಗಳೇನು..?

https://newsfirstlive.com/wp-content/uploads/2024/02/CONGRESS-MEETING.jpg

Load More