newsfirstkannada.com

‘ನನ್ನ ಆತ್ಮಸಾಕ್ಷಿಗೆ ಧಕ್ಕೆ ಬಂದ್ರೆ ರಾಜೀನಾಮೆ’- ಮತ್ತೆ ಗುಡುಗಿದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್

Share :

Published July 30, 2023 at 3:56pm

Update July 30, 2023 at 3:57pm

    ನಾನು ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವ ತಪ್ಪೇ ಮಾಡಿಲ್ಲ

    ಕೆಲ ಸಚಿವರ ನಡವಳಿಕೆಯಿಂದ ಬೇಸರ ಆಗಿತ್ತು ಅಷ್ಟೇ

    ಸಿಎಂ ಸಿದ್ದರಾಮಯ್ಯ ನನಗೆ ಕರೆ ಮಾಡಿ ಮಾತಾಡಿದ್ದಾರೆ‌

ಕಲಬುರಗಿ: ಸಚಿವರ ವಿರುದ್ಧ ಸಿಡಿದೆದ್ದ ಶಾಸಕರ ಪತ್ರದ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲೋಲ, ಕಲ್ಲೋಲವನ್ನೇ ಸೃಷ್ಟಿಸಿತ್ತು. ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ ಕೊನೆಗೆ ಎಲ್ಲರನ್ನೂ ಸಮಾಧಾನ ಪಡಿಸೋ ಸಾಹಸ ಮಾಡಿದ್ರು. ಸದ್ಯಕ್ಕೆ ಬುಸುಗುಡುತ್ತಿದ್ದ ಕಾಂಗ್ರೆಸ್ ಶಾಸಕರ ಅಸಮಾಧಾನ ತಣ್ಣಗಾಗಿದೆ ಎನ್ನಲಾಗಿತ್ತು. ಆದ್ರೆ, ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರು ಮತ್ತೆ ಗುಡುಗುವ ಮೂಲಕ ಕೈ ನಾಯಕರಿಗೆ ಟೆನ್ಷನ್ ಕೊಟ್ಟಿದ್ದಾರೆ.

ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಶಾಸಕ ಬಿ.ಆರ್ ಪಾಟೀಲ್ ಅವರು ಗರಂ ಆಗಿಯೇ ಉತ್ತರಿಸಿದರು. ನಾನು ಕ್ಷಮೆ ಕೇಳಿಲ್ಲ, ಕ್ಷಮೆ ಕೇಳಲು, ನಾನೇನೂ ತಪ್ಪು ಮಾಡಿದ್ದೀನಾ? ಕ್ಷಮೆ ಕೇಳುವ ಹೇಡಿತನ ನನ್ನಲ್ಲಿಲ್ಲ. ಯಾರು ಕ್ಷಮೆ ಕೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಬಿ.ಆರ್ ಪಾಟೀಲ್ ಗುಡುಗಿದ್ದಾರೆ.

ಇದನ್ನೂ ಓದಿ: ಸರ್ಕಾರ, ಪಕ್ಷದ ಮಟ್ಟದಲ್ಲಿ ಪತ್ರ ತಂದ ಮುಜುಗರ.. ಇದರ ಹಿಂದಿನ ಮೂಲ ಪುರುಷನ ಹುಡುಕಾಟಕ್ಕಿಳಿದ ಕಾಂಗ್ರೆಸ್..!

ಇನ್ನು, ಕೆಲ ಸಚಿವರ ನಡವಳಿಕೆಯಿಂದ ಕೆಲವು ಶಾಸಕರಿಗೆ ಬೇಸರ ಆಗಿತ್ತು. ಶಾಸಕಾಂಗ ಪಕ್ಷದ ಸಭೆ ಕರೆಯಲು ಮನವಿ ಮಾಡಿದ್ದೆ‌. ಶಾಸಕಾಂಗ ಸಭೆ ಕರೆದಿದ್ದಾರೆ ಸಭೆಯೂ ಚೆನ್ನಾಗಿ ನಡೆದಿದೆ. ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಗ್ಯಾರಂಟಿ ಜಾರಿಗಾಗಿ ಹೆಚ್ಚು ಹಣ ಖರ್ಚಾಗುತ್ತಿದ್ದು, ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗ್ತಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತೆ ಅಂತಾ ಹೇಳಿದ್ದಾರೆ. ನಿನ್ನೆ ಕೂಡ ಸಿಎಂ ಸಿದ್ದರಾಮಯ್ಯ ನನಗೆ ಕರೆ ಮಾಡಿ ಮಾತಾಡಿದ್ದಾರೆ‌. ಸಿದ್ದರಾಮಯ್ಯ ನಾನು ಹಳೇ ಸ್ನೇಹಿತರು ಮಾತಾಡಿದ್ದಾರೆ. ಎಲ್ಲವನ್ನೂ ಮಾಧ್ಯಮಗಳಲ್ಲಿ ಹೇಳಲು ಆಗಲ್ಲ. ನಾನೇನು ತಪ್ಪು ಮಾಡಿದ್ದೇನೆ ಅಂತಾ ಕ್ಷಮೆ ಕೇಳಬೇಕು. ಕ್ಷಮೆ ಕೇಳೋದು ನನ್ನ ಜಾಯಮಾನದಲ್ಲೇ ಇಲ್ಲ. ನನ್ನ ಆತ್ಮಸಾಕ್ಷಿಗೆ ಧಕ್ಕೆ ಬಂದ್ರೆ ರಾಜೀನಾಮೆ ಕೊಡುತ್ತೇನೆ ಅಂತಾ ಹೇಳಿದ್ದೇನೆ ಎಂದು ಬಿ.ಆರ್ ಪಾಟೀಲ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಆತ್ಮಸಾಕ್ಷಿಗೆ ಧಕ್ಕೆ ಬಂದ್ರೆ ರಾಜೀನಾಮೆ’- ಮತ್ತೆ ಗುಡುಗಿದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್

https://newsfirstlive.com/wp-content/uploads/2023/07/Congress-MLA-B-R-Patil.jpg

Load More