/newsfirstlive-kannada/media/post_attachments/wp-content/uploads/2025/06/BR-PATIL.jpg)
ಕಲಬುರಗಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ರಾಜೀವ್ ಗಾಂಧಿ ವಸತಿ ಯೋಜನೆ ವಿಚಾರಕ್ಕೆ ಆಳಂದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗ್ತಿದೆ..
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಸಿಗುತ್ತಿದೆ ಅಂತಾ ಕಾಂಗ್ರೆಸ್ ಶಾಸಕ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ನಿಗೂಢವಾಗಿದ್ದ ನಿತ್ಯಾನಂದನ ಕೈಲಾಸ ರಾಷ್ಟ್ರದ ಜಾಗ ಬಹಿರಂಗ.. ಕೋರ್ಟ್ನಲ್ಲಿ ಶಿಷ್ಯರಿಂದ ಅಸಲಿ ಸತ್ಯ..!
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆಗೆ ಬಿಆರ್ ಪಾಟೀಲ್ ಮಾತನ್ನಾಡಿದ್ದಾರೆ ಎನ್ನಲಾಗುತ್ತಿರುವ ಆಡಿಯೋ ಅದಾಗಿದೆ. ಆಡಿಯೋದಲ್ಲಿ ವಸತಿ ಯೋಜನೆಯಡಿ ಹಣ ನೀಡಿದವರಿಗಷ್ಟೇ ಮನೆ ಮಂಜೂರು ಮಾಡಲಾಗ್ತಿದೆ. ನಮ್ಮ ಸರ್ಕಾರವನ್ನೇ ದೂರಲು ನನಗೆ ಬೇಸರವಾಗ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಬೆನ್ನಲ್ಲೇ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಗೋಲ್ಮಾಲ್ ನಡೆಯುತ್ತಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಆಡಿಯೋ ಸಂಭಾಷಣೆಯಲ್ಲಿ ಏನಿದೆ..?
ಬಿ.ಆರ್.ಪಾಟೀಲ್: ಜೀ ಸರ್ಪರಾಜ್..
ಪಿಎ ಸರ್ಫರಾಜ್ ಖಾನ್: ಹಾ ಸಾಬ್. ಹಾ ಸಾಬ್.
ಬಿ.ಆರ್.ಪಾಟೀಲ್: ನೀವು ತಪ್ಪು ತಳಿಬೇಡಿ, ಆಶ್ಚರ್ಯ ವಿಚಾರ ಇದೆ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಯಾರು ದುಡ್ಡು ಕೊಡ್ತಾರೆ ಅವರಿಗೆ ಮನೆ ಸೀಗ್ತಿವೆ. ಇದು ದಂಧೆ ಆಗ್ತಿದೆಯಾ ?.
ಪಿಎ ಸರ್ಫರಾಜ್ ಖಾನ್: ಹಾಗಾಗಿಲ್ಲ, ಹಾಗೇನಾದ್ರು ಇದ್ರೆ ಕೊಡಿ ಸರ್ ನಾನು ಕ್ರಮ ಕೈಗೊಳ್ಳುತ್ತೇನೆ.
ಬಿ.ಆರ್.ಪಾಟೀಲ್ : ನಾನು ನಮ್ಮ ಸರ್ಕಾರದ ಮೇಲೆ ಹೇಗೆ ಆರೋಪ ಮಾಡ್ತೇನಾ ? ನನ್ನ ಮಾಹಿತಿ ಪ್ರಕಾರ ಯರು ದುಡ್ಡು ಕೊಟ್ಟಿದ್ದಾರೆ ಅವರಿಗೆ ಮನೆಗಳು ಸಿಕ್ಕಿವೆ.
ಪಿಎ ಸರ್ಫರಾಜ್ ಖಾನ್: ಹಾಗಾಗಿಲ್ಲ, ಮನೆಗಳು ಇಲ್ಲ ಅಂದ್ರೆ ಹೇಗೆ ಕೊಡೋಣ ಸರ್.
ಬಿ.ಆರ್.ಪಾಟೀಲ್: ಎಷ್ಟು ಮನೆ ಕೊಟ್ಟಿದ್ದಿರಾ ?.
ಪಿಎ ಸರ್ಫರಾಜ್ ಖಾನ್: ಕಳೆದ ವರ್ಷ 10-12 ಸಾವಿರ ಮನೆಗಳು ಶಾಸಕರ ಬೇಡಿಕೆಯಂತೆ ಕೊಟ್ಟಿದ್ದೇವೆ. ಈಗ
42 ಸಾವಿರ ಮನೆಗಳಿಗಾಗಿ ಬೇಡಿಕೆ ಕೊಟ್ಟಿದ್ದೇವೆ.
ಬಿ.ಆರ್.ಪಾಟೀಲ್: ಕೇಳಿ, ನಾನು ಯಾರಿಗೂ ಹೇಳಿಲ್ಲ, ನಾನು ಕೊಟ್ಟಿರುವ ಲೇಟರ್ಗೆ ಮನೆಗಳು ಕೊಟ್ಟಿಲ್ಲ, ಅದೇ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ನಾನು ಕೊಟ್ಟಿರುವ ಲೆಟರ್ಗೆ ಹಣ ಕೊಟ್ಟು ಮನೆಗಳನ್ನ ತೆಗೆದುಕೊಂಡು ಬಂದಿದ್ದಾರೆ. ಹೀಗಾದ್ರೆ ನನ್ನ ಮರ್ಯಾದೆ ಹೇಗೆ ಇರುತ್ತೆ..
ಪಿಎ ಸರ್ಫರಾಜ್ ಖಾನ್: ಹಾಗೆನಿದ್ರು ಕೊಡಿ ಸರ್ ನಾನು ಕ್ರಮ ಕೈಗೊಳ್ಳುತ್ತೇನೆ. ಯಾರು ಮಾಡಿದ್ದಾರೆ ಅವರಿಗೆ ಹ್ಯಾಂಗ್ ಮಾಡುತ್ತೇನೆ.
ಬಿ.ಆರ್.ಪಾಟೀಲ್: ಹ್ಯಾಂಗ್ ಒಬ್ಬರಿಗಲ್ಲ, ಬಹಳಷ್ಟು ಜನರಿಗೆ ಮಾಡಬೇಕಾಗುತ್ತೆ..
ಪಿಎ ಸರ್ಫರಾಜ್ ಖಾನ್: ಕೊಡಿ ಸರ್ ಏನಾದ್ರು ಇದ್ರೆ..
ಬಿ.ಆರ್.ಪಾಟೀಲ್: ಉದಾಹರಣೆಗೆ ತೊಗೊಳ್ಳಿ ಧಂಗಾಪುರ, ಕಡಗಂಚಿ, ಹಿತ್ತಲಶಿರೂರ್,
ಪಿಎ ಸರ್ಫರಾಜ್ ಖಾನ್: ಚೆಕ್ ಮಾಡಿ ಹೇಳ್ತೇನೆ..
ಬಿ.ಆರ್.ಪಾಟೀಲ್: ಏನ್ ಚೆಕ್ ಮಾಡ್ತೀರಿ..? ನಮ್ಮ ಸಚಿವರು, ನಮ್ಮ ಪಾರ್ಟಿ ಸರ್ಕಾರದ ಮೇಲೆ ಆರೋಪ ಮಾಡ್ತೀನಾ?
ಬಿ.ಆರ್.ಪಾಟೀಲ್: ಹಣ ಕೊಡುವ, ತಿನ್ನುವ ಸಾಕ್ಷಿ ಅಂತೂ ಸಿಗಲ್ಲ.
ಪಿಎ: ಸರ್ ನಾನು ಚೆಕ್ ಮಾಡಿ ಹೇಳ್ತೇನೆ..
ಬಿ.ಆರ್.ಪಾಟೀಲ್: ನಮ್ಮ ಪಕ್ಕದ ಅಫಜಲಪುರ ಕ್ಷೇತ್ರ ಇದೆ. ಅಲ್ಲಿಯೂ ಎಷ್ಟು ಮನೆಗಳು ಹಣ ಕೊಟ್ಟು ತಂದಿದ್ದಾರೆ.
ಪಿಎ: ನಾನ್ ಚೆಕ್ ಮಾಡ್ತೇನೆ.
ಬಿ.ಆರ್.ಪಾಟೀಲ್: ನಾನ್ ಚೆಕ್ ಮಾಡಿ ಕೊಡಲಾ?
ಪಿಎ: ನಾನು ಚೆಕ್ ಮಾಡಿ ಹೇಳ್ತೇನೆ ಸರ್..
ಬಿ.ಆರ್.ಪಾಟೀಲ್: ಕೇಳಿ, ರಾಜೀವ್ ಗಾಂಧಿ-ಮುನ್ನಳ್ಳಿ- 200 ಮನೆಗಳು. ದರ್ಗಾಶಿರೂರ್ -100 ಮನೆಗಳು. ಧಂಗಾಪುರ- ಬಿಆರ್ ಅಂಬೇಡ್ಕರ್-200 ಮನೆಗಳು, ಕವಲಗಾ-200, ಮಾಡಿಯಾಳ್--100 ಮನೆಗಳು ಒಟ್ಟು 950 ಮನೆಗಳು. ಇವೆಲ್ಲ ದುಡ್ಡು ಕೊಟ್ಟು ಮನೆಗಳು ತಂದಿದ್ದಾರೆ.
ಪಿಎ: ನಾ ಚೆಕ್ ಮಾಡ್ತೇನೆ.
ಬಿ.ಆರ್.ಪಾಟೀಲ್: ಏನ್ ಚೆಕ್ ಮಾಡ್ತಿವಿ, ನಾನು ಬಾಯಿ ತೆರೆದ್ರೆ ಸರ್ಕಾರ ಅಲ್ಲಾಡುತ್ತೆ..
ಇದನ್ನೂ ಓದಿ: ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಜೊತೆಗಿರೋ ಫೋಟೋಸ್ ಡಿಲೀಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ