ಕಾಂಗ್ರೆಸ್​ನ 50 ಶಾಸಕರ ಖರೀದಿಗೆ ಒಬ್ಬೊಬ್ಬರಿಗೆ 100 ಕೋಟಿ ಆಫರ್ -ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ನಾಯಕ..!

author-image
Ganesh
Updated On
ಕಾಂಗ್ರೆಸ್​ನ 50 ಶಾಸಕರ ಖರೀದಿಗೆ ಒಬ್ಬೊಬ್ಬರಿಗೆ 100 ಕೋಟಿ ಆಫರ್ -ಆಪರೇಷನ್ ಕಮಲದ ರಹಸ್ಯ ಬಿಚ್ಚಿಟ್ಟ ನಾಯಕ..!
Advertisment
  • ಫೋನ್ ಮಾಡಿ ಆಫರ್ ಮಾಡಿದವನ ಆಡಿಯೋ ಇದೆ
  • ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಎವಿಡೆನ್ಸ್ ಕಲೆ ಹಾಕ್ತಿದ್ದೀವಿ
  • ಆಪರೇಷನ್ ಕಮಲದ ಬಗ್ಗೆ ಅಚ್ಚರಿಯ ಮಾಹಿತಿ ನೀಡಿದ ಶಾಸಕ

ಮಂಡ್ಯ: ನಮ್ಮ 50 ಶಾಸಕರ ಖರೀದಿಗೆ ಪ್ರಯತ್ನ ನಡೆಯುತ್ತಿದ್ದು, ಒಬ್ಬೊಬ್ಬರಿಗೆ 100 ಕೋಟಿಯ ಆಫರ್ ಮಾಡಿದ್ದಾರೆ ಎಂದು ಆಪರೇಷನ್ ಕಮಲದ ಬಗ್ಗೆ ಕಾಂಗ್ರೆಸ್​ ಶಾಸಕ ಗಣಿಗ ರವಿಕುಮಾರ್ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಗಣಿಗ ರವಿಕುಮಾರ್.. ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರನ್ನ ಸಂಪರ್ಕಿಸುತ್ತಿದ್ದಾರೆ‌. ಮೊದಲು 50 ಕೋಟಿಯಿಂದ 100 ಕೋಟಿಗೆ ಆಫರ್ ಏರಿಕೆ ಆಗಿದೆ. ಮೊನ್ನೆಯೂ ಕೆಲ ಕಾಂಗ್ರೆಸ್ ಶಾಸಕರಿಗೆ ಕರೆಗಳು ಬಂದಿವೆ. 100 ಕೋಟಿ ರೆಡಿ.. 100 ಕೋಟಿ ರೆಡಿ ಇದೆ ಎಲ್ಲಿಗೆ ಬರ್ತೀರಾ? 50 ಜನ MLA ಖರೀದಿಗೆ ಪ್ಲಾನ್ ನಡೆದಿದೆ ಎಂದಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಜರ್ಸಿ 40 ಲಕ್ಷಕ್ಕೆ ಸೇಲ್.. KL ರಾಹುಲ್​ ಮಾನವೀಯ ಸೇವೆಗೆ ಹರಿದುಬಂದು ಹಣದ ಹೊಳೆ..!

publive-image

ನನಗೆ ಯಾರೋ ಒಬ್ಬ ಫೋನ್ ಮಾಡಿದ್ದ, ನೂರು ಕೋಟಿ ರೆಡಿ ಅಂತಾ ಹೇಳ್ದ. ಹೇಯ್ ನೂರು ಕೋಟಿ ಇಟ್ಕೊಳಯ್ಯ, ನಿನ್ನನ್ನು ಯಾರು ಇಡಿಯವರು ಹಿಡಿಯುತ್ತಿಲ್ವಾ ಅಂತಾ ಹೇಳಿದ್ದೇನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕರೆ ಮಾಡಬೇಕು ಅಂತಲೂ ಚಿಂತಿಸಿದ್ದೆ‌. ನಮ್ಮ ಸರ್ಕಾರ ಬೀಳಿಸಲು ದಿನನಿತ್ಯ ಪ್ರಯತ್ನ ನಡೀತಿದೆ ಎಂದು ಕಿಡಿಕಾರಿದ್ದಾರೆ‌.

ನಮ್ಮ ಸರ್ಕಾರ, ಸಿಎಂ ಸ್ಥಿರವಾಗಿದ್ದಾರೆ. ಸಂತೋಷ್, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಇವರೆಲ್ಲಾ ಒಂದು ಗ್ಯಾಂಗ್ ಆಗಿದ್ದಾರೆ‌‌. ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಬೀಳಿಸುವುದಾಗಿ ಮೋದಿಗೆ ಮಾತು ಕೊಟ್ಟಿದ್ದಾರೆ‌. ಆದರೆ ನಮ್ಮದು 136 ಶಾಸಕರಿರುವ ಬಂಡೆಯಂತ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ. ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಫೋನ್ ಮಾಡಿ ಆಫರ್ ಮಾಡಿದವನ ಆಡಿಯೋ ಇದೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡ್ತೀವಿ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಎವಿಡೆನ್ಸ್ ಕಲೆ ಹಾಕ್ತಿದ್ದೀವಿ. ಸಾಕ್ಷಿ ಸಮೇತ ಐಟಿ, ಇಡಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡ್ತೀವಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:ರೋಹಿತ್​ ಖರೀದಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾದ ಎರಡು ಫ್ರಾಂಚೈಸಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment