newsfirstkannada.com

VIDEO: ‘ಅನಂತಕುಮಾರ್ ಹೆಗಡೆ ಅವ್ರೇ ಚಾಲೆಂಜ್​ಗೆ ರೆಡಿ, ತಾಕತ್ತಿದ್ರೆ ಬನ್ನಿ’- ಶಾಸಕ ಪ್ರದೀಪ್ ಈಶ್ವರ್

Share :

Published January 14, 2024 at 2:38pm

Update January 14, 2024 at 2:40pm

  ‘ಮೈಂಡ್ ಯುವರ್ ಟಂಗ್. ನಾಲಿಗೆ ಹಿಡಿತದಲ್ಲಿ ಇರಬೇಕು’

  ನಾವೂ ಹಿಂದೂಗಳೇ.. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಆಸ್ತಿನಾ?

  ಬಿಜೆಪಿ ಸಂಸದರಿಗೆ ಮೈಂಡ್ ಯುವರ್ ಟಂಗ್ ಎಂದ ಪ್ರದೀಪ್ ಈಶ್ವರ್

ಬೆಂಗಳೂರು: ಅಯೋಧ್ಯೆ ರಾಮಮಂದಿರ ಉದ್ಘಾಟನೆ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರ ವಾಗ್ಯುದ್ಧ ಮುಂದುವರಿದಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆಯನ್ನ ಕೈ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ ಅವರು ಸಂಸದ ಅನಂತಕುಮಾರ್ ಹೆಗಡೆ ಮೇಲೆ ಹಿಗ್ಗಾಮುಗ್ಗ ಟೀಕಾ ಪ್ರಹಾರ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರದೀಪ್ ಈಶ್ವರ್‌, ಮೈಂಡ್ ಯುವರ್ ಟಂಗ್. ನಾಲಿಗೆ ಹಿಡಿತದಲ್ಲಿ ಇರಬೇಕು. ನಾವೂ ಹಿಂದೂಗಳೇ. ಹಿಂದೂ ಧರ್ಮ ನಿಮ್ಮ ಅಪ್ಪನ ಮನೆ ಆಸ್ತಿನಾ ಅನಂತ ಕುಮಾರ್ ಹೆಗಡೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯನವರೇ. ನಮಗೂ ಶ್ರೀರಾಮ ಆರಾಧ್ಯ ದೈವ. ನೀವು ಒಂದು ಮಾತಾಡಿದ್ರೆ ನಾವು ನಾಲ್ಕು ಮಾತಾಡ್ತೇವೆ. ಸವಾಲಿಗೆ ನಾವು ರೆಡಿ ಇದ್ದೇವೆ. ಅನಂತಕುಮಾರ್ ಹೆಗಡೆ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ಸಿಗಲ್ಲ. ಸಚಿವ ಸ್ಥಾನ ಕೂಡ ಹೋಯ್ತು. ಕಾಮ್ ಕೀ ಬಾತ್ ಮಾತಾಡೋಣ ಬನ್ನಿ ಎಂದು ನೇರಾನೇರ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: ರಾಮ ವಿರೋಧಿ ಆರೋಪ.. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯಲು ಸಿಎಂ ಸಿದ್ದರಾಮಯ್ಯ ಮಾಸ್ಟರ್​ ಪ್ಲಾನ್​​

ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಶಾಸಕ ಪ್ರದೀಪ್ ಈಶ್ವರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಯೋಗ್ಯ, ಮುಠ್ಠಾಳರನ್ನ ಅಯೋಗ್ಯ ಮುಠ್ಠಾಳ ಅಂತ ಕರೆದರೆ ತಪ್ಪಿಲ್ಲ. ಕೊಚ್ಚೆಗೆ ಕೈ ಹಾಕೋದು ಹಂದಿಗಳ ಕೆಲಸ. ಹಂದಿಗಳು ಕೈ ಹಾಕುವ ಕೆಲಸ ನೀವು ಮಾಡಬೇಡಿ. ಮೈಸೂರು -ಬೆಂಗಳೂರು ರೋಡು ನೀನು ಹಾಕ್ಸಿದ್ದಾ? ಯುಪಿಎ ಸರ್ಕಾರದ ಅವಧಿಯಲ್ಲಿ ‌ರೋಡ್ ಮಂಜೂರು ಆಗಿದ್ದು. ನಮ್ಮ ಸರ್ಕಾರ ಇದ್ದಾಗ ಭೂಸ್ವಾದೀನ ಆಗಿತ್ತು. ಈ ಸಲ ಚುನಾವಣೆಯಲ್ಲಿ ಸೋಲಿಸಿ, ನಮ್ಮ ಕಾವೇರಿ ನದಿಯಲ್ಲಿ ನೀನೇ ಪಾಪ ತೊಳೆದುಕೋ. ಅವರು ಮೈಸೂರಿಗೆ ಕರ್ಕೊಂಡು ಹೋಗಿ ಅಭಿವೃದ್ಧಿ ತೋರಿಸಲಿ. ನಾನು ಚಿಕ್ಕಬಳ್ಳಾಪುರಕ್ಕೆ ಕರ್ಕೊಂಡು ಹೋಗಿ ಅಭಿವೃದ್ಧಿ ತೋರಿಸುವೆ ಎಂದು ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ಅವರು ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ‘ಅನಂತಕುಮಾರ್ ಹೆಗಡೆ ಅವ್ರೇ ಚಾಲೆಂಜ್​ಗೆ ರೆಡಿ, ತಾಕತ್ತಿದ್ರೆ ಬನ್ನಿ’- ಶಾಸಕ ಪ್ರದೀಪ್ ಈಶ್ವರ್

https://newsfirstlive.com/wp-content/uploads/2024/01/Pradeep-Eshwar-ON-Ananth-kumar-Hegde.jpg

Load More