newsfirstkannada.com

ಡಾ.ಕೆ ಸುಧಾಕರ್ ಸೋಲಿಸಲು ಚಕ್ರವ್ಯೂಹ ರಚಿಸಿದ ಪ್ರದೀಪ್ ಈಶ್ವರ್‌; ಹೇಳಿದ್ದೇನು?

Share :

Published March 25, 2024 at 2:44pm

Update March 25, 2024 at 2:47pm

    ಯಾವುದೇ ಕಾರಣಕ್ಕೂ ಪಾರ್ಲಿಮೆಂಟ್ ಮೆಟ್ಟಲು ತುಳಿಯಲು ಬಿಡಲ್ಲ

    ಸಾಮಾನ್ಯ ಕೋಚಿಂಗ್ ಸೆಂಟರ್ ಹುಡುಗನ ಮುಂದೆ ಸುಧಾಕರ್‌ಗೆ ಟಿಕೆಟ್

    ಇಡೀ ಕೇಂದ್ರ ಸರ್ಕಾರವೇ ಬಂದು ನಿಂತ್ರೂ ಸುಧಾಕರ್​ನ​ ಗೆಲ್ಲಲು ಬಿಡಲ್ಲ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಡಾ.ಕೆ ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಸುಧಾಕರ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಆದ ಬಳಿಕ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ ಅವರು ಓಪನ್ ಚಾಲೆಂಜ್ ಮಾಡಿದ್ದು, ಡಾ.ಕೆ. ಸುಧಾಕರ್ ಗೆಲ್ಲಲು ಬಿಡಲ್ಲ ನಾನು ಎಂದು ಶಪಥ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಮಾತು ಮಾತಿಗೂ ಪಂಚಿಂಗ್ ಡೈಲಾಗ್‌ಗಳನ್ನೇ ಹೊಡೆದರು. ನಿನ್ನೆ ಮಧ್ಯಾಹ್ನ ಪ್ರಜಾಪ್ರಭುತ್ವ ಸಾಯೋದಕ್ಕೆ ಮುನ್ನುಡಿ ಆಗ್ತಿದೆ ಅನ್ನಿಸಿತು. ಕೋವಿಡ್ ಸಮಯದಲ್ಲಿ ಅವರ ಮೇಲೆ 2200 ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಇದೆ. ಸಾಮಾನ್ಯ ಕೋಚಿಂಗ್ ಸೆಂಟರ್ ಹುಡುಗನ ಮುಂದೆ ಸುಧಾಕರ್ ಸೋತಿದ್ದರು. ಆದರೂ ಹೇಗೆ ಟಿಕೆಟ್ ಸಿಕ್ಕಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: BREAKING: ಬಿಜೆಪಿಯ 5ನೇ ಪಟ್ಟಿ ಬಿಡುಗಡೆ; ಬೆಳಗಾವಿ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಅಭ್ಯರ್ಥಿ ಘೋಷಣೆ

ಡಾ.ಕೆ ಸುಧಾಕರ್ ಅವರು ಬಿಜೆಪಿ ಪಕ್ಷದ ನಾಯಕರ ಮುಂದೆ ದೀರ್ಘದಂಡ ನಮಸ್ಕಾರ ಮಾಡಿರುವ ಕಾರಣಕ್ಕೆ ಟಿಕೆಟ್ ಸಿಕ್ಕಿರಬಹುದು. ನಾನು ಸಂಪಾದಿಸಿರುವ ನನ್ನ ಆದಾಯ, ಆಸ್ತಿ ಎಲ್ಲವನ್ನೂ ಸಾರ್ವಜನಿಕವಾಗಿ ತೆರೆದಿಡುತ್ತೇನೆ. ನನ್ನ ಆಸ್ತಿ ಎಷ್ಟಿದೆ ಅಂತ ಹೇಳ್ತೀನಿ. ನೀವು ಹೇಳ್ತೀರಾ. ನಾವು ಯಾವುದೇ ಕಾರಣಕ್ಕೂ ಇವರನ್ನ ಪಾರ್ಲಿಮೆಂಟ್ ಮೆಟ್ಟಲು ತುಳಿಯೋದಕ್ಕೆ ಬಿಡೋದಿಲ್ಲ ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.

ಇದೇ ವೇಳೆ ಡಾ. ಸುಧಾಕರ್​ಗೆ ಟಿಕೆಟ್​ ನೀಡಿರೋದು ಪ್ರಜಾಪ್ರಭುತ್ವ ಸಾಯೋದಕ್ಕೆ ಮುನ್ನುಡಿಯಾಗಿದೆ. ಚಿಕ್ಕಬಳ್ಳಾಪುರಕ್ಕೆ ಇಡೀ ಕೇಂದ್ರ ಸರ್ಕಾರವೇ ಬಂದು ನಿಂತ್ರೂ ಸುಧಾಕರ್​ನ​ ಗೆಲ್ಲಲು ಬಿಡಲ್ಲ. ನನ್ನ ಸುಧಾಕರ್ ಅರೆಸ್ಟ್​ ಮಾಡಿಸಿದ್ದರು. ಕಾನೂನು ಸುವ್ಯವಸ್ಥೆ​ ಅವರ ಅಪ್ಪಂದಾ? ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಾ.ಕೆ ಸುಧಾಕರ್ ಸೋಲಿಸಲು ಚಕ್ರವ್ಯೂಹ ರಚಿಸಿದ ಪ್ರದೀಪ್ ಈಶ್ವರ್‌; ಹೇಳಿದ್ದೇನು?

https://newsfirstlive.com/wp-content/uploads/2024/03/Pradeep-Eshwar.jpg

Load More