/newsfirstlive-kannada/media/post_attachments/wp-content/uploads/2024/12/CONGRESS-MLA-GRANT.jpg)
ಅನುದಾದನ ವಿಚಾರದಲ್ಲಿ ಕಾಂಗ್ರೆಸ್ ಶಾಸಕರೇ ತಮ್ಮ ಅಸಮಾಧಾನವನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ತೋಡಿಕೊಂಡಿದ್ದಾರೆ. ನಮ್ಮ ಸಮಸ್ಯೆ ಹಾಗೂ ನೋವನ್ನು ಸಿಎಲ್​ಪಿ ಸಭೆ ನಡೆಸಿದರೂ ಕೂಡ ಆಲಿಸಲಿಲ್ಲ ಎಂದು ಬೇಸರವ್ಯಕ್ತಪಡಿಸಿದ್ದಾರೆ.
ಅನುದಾನ ವಿಚಾರದಲ್ಲಿ ಹಲವು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿಯು ಬಂದಿದೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾಪಿಸೋಕೆ ಮುಂದಾಗಿದ್ದರು. ಎದ್ದು ನಿಂತು ಅನುದಾನ ಕೇಳಲು ಮುಂದಾದರೂ ಕೂಡ ಅವಕಾಶ ಸಿಗಲಿಲ್ಲ ಎಂಬ ಬೇಸರ ಶಾಸಕರಲ್ಲಿದೆ.
ಇನ್ನು ಬಿಜೆಪಿ ಹಾಗೂ ಅನುದಾನ ಎರಡು ವಿಚಾರವನ್ನು ಪ್ರಸ್ತಾಪಿಸಿದ್ದ ಸಿಎಂ ಸಿದ್ದರಾಮಯ್ಯನವರು ದುಡ್ಡಿಲ್ಲ ದುಡ್ಡಿಲ್ಲ ಎಂದು ಹೇಳಬೇಡಿ. ನಮ್ಮ ಬಳಿ ದುಡ್ಡಿದೆ. ಬಿಜೆಪಿಯವರು ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ದುಡ್ಡಿಲ್ಲದಿದ್ರೆ, ರೋಣದಲ್ಲಿ 200 ಕೋಟಿ ರೂಪಾಯಿಯ ಕೆಲಸ ಮಾಡೋಕೆ ಆಗ್ತಿತ್ತಾ? ಸಚಿವ ಪರಮೇಶ್ವರ್ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ಆಗುತ್ತಿತ್ತಾ? ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತದ್ದಾರೆ ಎಂದು ಸಿಎಂ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ
ಇದನ್ನೂ ಓದಿ: 224 ಶಾಸಕರಿಗೂ ಅನುದಾನದ ಭಾಗ್ಯ ಕರುಣಿಸಿದ ಸಿಎಂ ಸಿದ್ದರಾಮಯ್ಯ; ಬೀಸೋ ದೊಣ್ಣೆಯಿಂದ ಪಾರು!
ಸಿಎಂ ಇಷ್ಟೆಲ್ಲಾ ಹೇಳಿದರೂ ಕೂಡ ಏರು ಧ್ವನಿಯಲ್ಲಿ ಬಂಗಾರಪೇಟೆ ಶಾಸಕ ನಾರಾಯಣ ಸ್ವಾಮಿ ಅನುದಾನದ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಏಯ್, ನಾರಾಯಣಸ್ವಾಮಿ ಆಮೇಲೆ ಮಾತಾಡ್ತೀನಿ ಅಂದ್ರಂತೆ. ಇತ್ತ ವಿಜಯಾನಂದ ಕಾಶಪ್ಪನವರು ಕೂಡ ಅನುದಾನ ಬೇಡಿಕೆಯಿಟ್ಟಾಗ ನೀನಾ? ನಾಮ ಹಾಕಿಕೊಂಡೇ ಬಂದಿಲ್ಲವಲ್ಲ ಅಂತ ಸಿಎಂ ಮಾತು ಮರೆಸಿದ್ದಾರಂತೆ. ಪರವಾಗಿಲ್ಲ. ಸಿಎಂ ನಮಗೆಲ್ಲಾ ನಾಮ ಹಾಕಿದ್ರು ಎಂದರಂತೆ ಕೆಲವು ಶಾಸಕರು. ಕಳೆದ ಬಾರಿ ಘೋಷಿಇಸದ್ದ 25 ಕೋಟಿ ರೂಪಾಯಿ ಅನುದಾನ ಬಂದಿಲ್ಲವೆಂದು ಕೆಲವು ಶಾಸಕರು ಖ್ಯಾತೆ ತೆಗೆದಿದ್ದಾರೆ. ಅದಕ್ಕೆ ಕೆಲವರಿಗೆ ಬಂದಿಲ್ಲ ಮುಂದೆ ಎಲ್ಲಾ ಸರಿ ಹೋಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us