Advertisment

ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಯಡವಟ್ಟು.. ರಾಷ್ಟ್ರ ಮಟ್ಟದಲ್ಲಿ ಭಾರೀ ಟೀಕೆ; ಕಾರಣವೇನು?

author-image
Gopal Kulkarni
Updated On
ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಯಡವಟ್ಟು.. ರಾಷ್ಟ್ರ ಮಟ್ಟದಲ್ಲಿ ಭಾರೀ ಟೀಕೆ; ಕಾರಣವೇನು?
Advertisment
  • ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವದಲ್ಲಿ ಕಾಂಗ್ರೆಸ್​ನ ಯಡವಟ್ಟು
  • ಆ ಒಂದು ಬ್ಯಾನರ್​ನಿಂದ ವಿಪಕ್ಷಗಳ ಕೈಗೆ ಅಸ್ತ್ರ ಕೊಟ್ಟಿತಾ ಕಾಂಗ್ರೆಸ್ ಪಾಳಯ?
  • ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕೈ ವಿರುದ್ಧ ಆಕ್ರೋಶ, ಟೀಕೆಗಳ ಸುರಿಮಳೆ

ಸದ್ಯ ಬೆಳಗಾವಿಯಲ್ಲಿ ಕಾಂಗ್ರೆಸ್​ನದ್ದೆ ಕಲರವ ನಡೆಯತ್ತಿದೆ. 1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಜೀ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದೇ ಸಂಭ್ರಮ ಈಗ ಕಾಂಗ್ರೆಸ್​ಗೆ ಸಂಕಟವಾಗಿ ಕಾಡಲಿದೆಯಾ. ವಿಪಕ್ಷಗಳ ಕೈಗೆ ಹೊಸ ಅಸ್ತ್ರ ಸಿಕ್ಕಿತಾ ಅನ್ನೋ ಅನುಮಾನಗಳು ಸದ್ಯ ವ್ಯಕ್ತವಾಗುತ್ತಿವೆ.

Advertisment

ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್​ಗಳಲ್ಲಿ ಭಾರತ ದೇಶದ ನಕ್ಷೆ ವಿರೂಪಗೊಳಿಸಿ ಅವಮಾನ ಮಾಡಲಾಗಿದೆ ಎಂದು  ಆರೋಪಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಶಾಸಕರು, ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಭಾರತ ನಕ್ಷೆ ಕೇವಲ ಪಾಕಿಸ್ತಾನ ಮತ್ತು ಚೀನಾದಲ್ಲಿ ಮಾತ್ರ ಸಿಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಬ್ಯಾನರ್​ನಲ್ಲಿ ಗಾಂಧಿ ಭಾರತ ಎಂದು ಉಲ್ಲೇಖಿಸಿ ಭಾರತದ ನಕಾಶೆಯನ್ನು ಹಾಕಲಾಗಿದ್ದು. ಆ ನಕಾಶೆಯಲ್ಲಿ ಕಾಶ್ಮೀರವೇ ಕಾಣುತ್ತಿಲ್ಲ. ಈ ನಕಾಶೆಯ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವರಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ಫೋಟೋ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಸಂಕ್ರಾಂತಿ ಬಳಿಕ ಗ್ರಾಹಕರಿಗೆ ಕಾದಿದೆ ಆಘಾತ; ಸರ್ಕಾರದಿಂದ ಶಾಕಿಂಗ್ ನಿರ್ಧಾರ ಸಾಧ್ಯತೆ

Advertisment


">December 26, 2024

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್​ ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಾಡು ಮಾಡುವುದು ದೇಶದ್ರೋಹದಂತ ಗಂಭೀರ ಅಪರಾಧಿ ಕೃತ್ಯ ಕರ್ನಾಟಕ ಕಾಂಗ್ರೆಸ್​ ಸಮಾವೇಶದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕೆ ನೇರ ಹೊಣೆಗಾರರು. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಆದರೆ ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್​ನ ದೇಶದ್ರೋಹದ ಮನಸ್ಥಿತಿ ಬ್ಯಾನರ್​ಗಳಿಂದ ಜಗಜ್ಜಾಹೀರಾಗಿದೆ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ರಾಜ್ಯದ ಸೈನಿಕರು.. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದ ಪಾರ್ಥಿವ ಶರೀರಗಳು

Advertisment

publive-image

ಇನ್ನು ಬ್ಯಾನರ್​​ನಲ್ಲಾಗಿರು ಪ್ರಮಾದದ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ. ಇದು ವ್ಯವಸ್ಥಿತವಾದ ಷಡ್ಯಂತ್ರ ಹಾಗೂ ಪಿತೂರಿ, ಭಾರತದ ಮುಕುಟವನ್ನೇ ತೆಗೆದು ಹಾಕುವ ಕೆಲಸ ಮಾಡಿದೆ ಕಾಂಗ್ರೆಸ್​, ಸಿಯಾಚಿನ್ ಎಲ್​ಒಸಿ, ಪಿಒಸಿ ಇವರೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತೆ ಕಾಣುತ್ತಿದೆ. ಈ ದೇಶದ ಒಂದಿಂಚೂ ಜಾಗವನ್ನು ಪಾಕಿಸ್ತಾನಕ್ಕೆ, ಚೀನಾಗೆ ಬಿಟ್ಟುಕೊಡಲ್ಲ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ದುಷ್ಟ ಕಾಂಗ್ರೆಸ್​ನವರು ನಕ್ಷೆ ಬದಲಾವಣೆ ಮಾಡಿ ದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಇದ್ರಲ್ಲೆ ಗೊತ್ತಾಗುತ್ತೆ ದೇಶದ ಬಗ್ಗೆ ಯಾವ ಬದ್ದತೆ ಇಟ್ಟುಕೊಂಡಿದ್ದಾರೆ, ದೇಶದ ಅಖಂಡತೆಯ ಬಗ್ಗೆ ಕಾಂಗ್ರೆಸ್ ನಿಲುವು ಏನು? ಅಂಬೇಡ್ಕರ್​ ಆಗಲಿ, ಭಾರತದ ಬದ್ಧತೆಯ ಬಗ್ಗೆ ಆಗಲಿ ಕಾಂಗ್ರೆಸ್​ನವರಿಗೆ ಎಷ್ಟು ಕಳಕಳಿಯಿದೆ ಎಂಬುದು ಬೆಳಗಾವಿಯಲ್ಲಿ ಗೊತ್ತಾಗಿದೆ, ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಅವರ ಹೆಸರು ಹೇಳುವ ನೈತಿಕೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಗುಡುಗಿದ್ದಾರೆ.

publive-image

ಇನ್ನು ಈ ಒಂದು ವಿಚಾರ ಕೇವಲ ರಾಜ್ಯಮಟ್ಟದಲ್ಲಿ ಅಲ್ಲ, ರಾಷ್ಟ್ರಮಟ್ಟದಲ್ಲಿಯೂ ಕೂಡ ದೊಡ್ಡ ಕೋಲಾಹಲವೆಬ್ಬಿಸಿದೆ. ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಈ ಬಗ್ಗೆ ಮಾತನಾಡಿದ್ದು. ಕಾಂಗ್ರೆಸ್​ ಪಕ್ಷ ದೇಶವನ್ನು ಇಬ್ಭಾಗ ಮಾಡುತ್ತಿದೆ,ಕಾಂಗ್ರೆಸ್​ನ ತುಷ್ಟೀಕರಣದ ಮನಸ್ಥಿತಿ ಈಗ ಮತ್ತೆ ಬಹಿರಂಗವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment