newsfirstkannada.com

ಕನ್ಹಯ್ಯ ಕುಮಾರ್​ಗೆ ಲೋಕಸಭೆ ಟಿಕೆಟ್​; ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ?

Share :

Published April 15, 2024 at 8:21am

    ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ನಿಂದ ಹೊಸ ಅಭ್ಯರ್ಥಿಗಳ ಪ್ರಕಟ

    2019ರ ಲೋಕಸಭೆ ಚುನಾವಣೆಯಲ್ಲಿ ಬೆಗುಸರೈ ಕ್ಷೇತ್ರದಿಂದ ಕನ್ಹಯ್ಯ ಸ್ಪರ್ಧೆ

    ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಕಣಕ್ಕೆ ಇಳಿದಿದ್ದ ಕನ್ಹಯ್ಯ

ಕಾಂಗ್ರೆಸ್​​ ನಿನ್ನೆ ಲೋಕಸಭೆ ಚುನಾವಣೆಗೆ ಹೊಸ ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ವಿಶೇಷ ಅಂದರೆ ಕನ್ಹಯ್ಯ ಕುಮಾರ್​​​​ ಹಾಗೂ ಪಂಜಾಬ್​​ನ ಮಾಜಿ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್​ ಚನ್ನಿಗೆ ಟಿಕೆಟ್ ಘೋಷಣೆ ಮಾಡಿದೆ.

37 ವರ್ಷದ ಕನ್ಹಯ್ಯ ಕುಮರ್​​ಗೆ ನಾರ್ತ್​​ ಈಸ್ಟ್​ ದೆಹಲಿ ಕ್ಷೇತ್ರದ ಟಿಕೆಟ್ ನೀಡಿದೆ. ಜೆಎನ್​ಯು ವಿವಿಯ ಸ್ಟೂಡೆಂಟ್ ಯೂನಿಯನ್​​ನ ಮಾಜಿ ಅಧ್ಯಕ್ಷರಾಗಿದ್ದ ಕನ್ಹಯ್ಯಗೆ, ಎದುರಾಳಿಯಾಗಿ ಬಿಜೆಪಿಯಿಂದ ಸಂಸದ ಮನೋತ್ ತಿವಾರಿ ನಿಂತಿದ್ದಾರೆ. ಮೇ 25 ರಂದು ದೆಹಲಿಯಲ್ಲಿ ಮತದಾನ ನಡೆಯಲಿದೆ.

2019ರ ಲೋಕಸಭೆ ಚುನಾವಣೆ ವೇಳೆ ಕನ್ಹಯ್ಯ ಕುಮಾರ್ ಕಮ್ಯುನಿಸ್ಟ್​ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಬಿಹಾರದ ಬೆಗುಸರೈ ಲೋಕಸಭೆ ಕ್ಷೇತ್ರದಿಂದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿರುದ್ಧ ನಿಂತು ಸೋಲನ್ನು ಅನುಭವಿಸಿದ್ದರು. ನಂತರದ ದಿನಗಳಲ್ಲಿ ಅಂದರೆ 2021ರಲ್ಲಿ ಕನ್ಹಯ್ಯ ಕಾಂಗ್ರೆಸ್​ ಪಕ್ಷವನ್ನು ಸೇರ್ಪಡೆಗೊಂಡಿದ್ದರು.

ಈಶಾನ್ಯ ದೆಹಲಿ ಕ್ಷೇತ್ರದಿಂದ ಕನ್ಹಯ್ಯ ಕುಮಾರ್​ಗೆ ಗೆಲುವು ಸಿಗೋದು ಅಷ್ಟು ಸುಲಭ ಇಲ್ಲ. ಸದ್ಯ ಈ ಕ್ಷೇತ್ರವು ಬಿಜೆಪಿ ಭದ್ರ ಕೋಟೆಯಾಗಿದೆ. 2014, 2019ರ ಲೋಕಸಭೆ ಚುನಾವಣೆಗಳಲ್ಲಿ ಮನೋಜ್ ತಿವಾರಿ ಗೆದ್ದು, ಎರಡು ಬಾರಿ ಸಂಸದರಾಗಿದ್ದಾರೆ. 2014ರ ಚುನಾವಣೆಯಲ್ಲಿ ಶೀಲಾ ದೀಕ್ಷಿತ್​​ ಅವರನ್ನು ಸೋಲಿಸಿ ಸಂಸದರಾಗಿದ್ದಾರೆ.

ಇದನ್ನೂ ಓದಿ:ಧೋನಿ ಸಿಕ್ಸ್ ಹೊಡೆಯಲಿ ಅಂತಾ ಕೆಟ್ಟ ಬೌಲಿಂಗ್ -ಹಾರ್ದಿಕ್ ಪಾಂಡ್ಯ ಸುತ್ತ ಮತ್ತೊಂದು ವಿವಾದ

ಇನ್ನು ಚಾಂದಿನಿ ಚೌಕ್​​ನಿಂದ ಜೈ ಪ್ರಕಾಶ್ ಅಗರ್ವಾಲ್​​​ರನ್ನು ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಆಲ್​ ಇಂಡಿಯಾ ಸೆಕ್ರೆಟರಿ ಪ್ರವೀಣ್ ಕುಮಾರ್ ಬಿಜೆಪಿ ಟೆಕೆಟ್ ಪಡೆದು ಸ್ಪರ್ಧ ಮಾಡುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಹರ್ಷ ವರ್ಧನ್ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು, ಈ ಬಾರಿ ಅವರಿಗೆ ಟಿಕೆಟ್ ನೀಡಿಲ್ಲ. ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಉದಿತ್​​ ರಾಜ್​ಗೆ ಟಿಕೆಟ್ ನೀಡಿದೆ. ಅದೇ ರೀತಿ ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್​ ಅವರಿಗೂ ಕಾಂಗ್ರೆಸ್​ ಟಿಕೆಟ್ ನೀಡಿದ್ದು, ಜಲಂಧರ್​ನಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ಹಯ್ಯ ಕುಮಾರ್​ಗೆ ಲೋಕಸಭೆ ಟಿಕೆಟ್​; ಯಾವ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಿದ್ದಾರೆ?

https://newsfirstlive.com/wp-content/uploads/2024/04/KANHYA-KUMAR.jpg

Load More