newsfirstkannada.com

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಬಿಗ್​​​ ಶಾಕ್​​.. ಪಕ್ಷದ ಬ್ಯಾಂಕ್ ಖಾತೆ ಫ್ರೀಜ್​ ಆಗಿದ್ದೇಕೆ?

Share :

Published February 17, 2024 at 5:49am

    ₹115 ಕೋಟಿ ಹಣ ಠೇವಣಿ ಇಡುವಂತೆ ಐಟಿ ತಾಕೀತು

    ಐಟಿ ನಡೆ ಹಿಂದೆ ಬಿಜೆಪಿ ಕೈವಾಡದ ಬಗ್ಗೆ ಕಾಂಗ್ರೆಸ್​ ಆರೋಪ

    ಐಟಿಯಿಂದ ಕಾಂಗ್ರೆಸ್​ ಪಕ್ಷದ ಬ್ಯಾಂಕ್​ ಖಾತೆ ಮುಟ್ಟುಗೋಲು

ಲೋಕ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಗಂಭೀರ ಆರೋಪ ಮಾಡಿದೆ. ಬಿಜೆಪಿ ಕೈವಾಡದಿಂದ ಆದಾಯ ತೆರಿಗೆ ಇಲಾಖೆ ಪಕ್ಷದ ಬ್ಯಾಂಕ್​ ಖಾತೆಗಳನ್ನು ಫ್ರೀಜ್​ ಮಾಡಿದೆಯಂತೆ. ಈ ಸಂಬಂಧ ಆದಾಯ ತೆರಿಗೆ ಟ್ರಿಬ್ಯುನಲ್‌ ಮೊರೆ ಹೋಗಿದ್ದ ಕಾಂಗ್ರೆಸ್​ ಕೊಂಚ ನಿರಾಳವಾಗಿದೆ.

ಲೋಕಸಭೆ ಚುನಾವಣೆಗೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲ ರಾಜಕೀಯ ಪಕ್ಷಗಳು ಲೋಕ ಸಮರಕ್ಕೆ ಸಮರಭ್ಯಾಸ ಮಾಡ್ತಿದೆ. ಕಾಂಗ್ರೆಸ್​ ಭಾರತ್​ ನ್ಯಾಯ್​ ಯಾತ್ರೆ ಮಾಡ್ತಿದೆ. ಇನ್ನು ಬಿಜೆಪಿ ಕೂಡ ಎನ್​ಡಿಎ ಪಡೆಯನ್ನು ಬಲಪಡಿಸಿಕೊಳ್ತಿದೆ. ಇದರ ನಡುವೆಯೇ ಕಾಂಗ್ರೆಸ್​ ನಾಯಕರು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷದ ಖಜಾಂಚಿ ಅಜಯ್ ಮಾಕೇನ್​ ನಿನ್ನೆ ಬೆಳ್​ಬೆಳಗ್ಗೆಯೇ ಸುದ್ದಿಗೋಷ್ಟಿಸಿ ನಡೆಸಿ, ಕಾಂಗ್ರೆಸ್​ನ ಯುವ ಘಟಕದ ಬ್ಯಾಂಕ್​ ಖಾತೆ ಸೇರಿ ಪಕ್ಷದ ಹಲವು ಖಾತೆಗಳನ್ನು ತೆರಿಗೆ ಇಲಾಖೆ ಅಧಿಕಾರಿಗಳು ಸೀಜ್​ ಮಾಡಿದ್ದಾರೆ. ಇದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ಆರೋಪ ಮಾಡಿದ್ದರು.

ಯೂತ್ ಕಾಂಗ್ರೆಸ್, ಕಾಂಗ್ರೆಸ್ ಪಕ್ಷ 210 ಕೋಟಿ ರೂ.ತೆರಿಗೆ ಪಾವತಿ ಬಾಕಿದೆ. ತಕ್ಷಣ ಈ ತೆರಿಗೆ ಪಾವತಿಸುವಂತೆ ಕಾಂಗ್ರೆಸ್​ಗೆ ಆದಾಯ ತೆರಿಗೆ ಸೂಚಿಸಿದೆ. ಇದಕ್ಕಾಗಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಮ್ಮ ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿದೆ. ಇದರಿಂದ ನಮ್ಮ ಖಾತೆಗಳಲ್ಲಿ ಕ್ರೌಡ್ ಫಂಡಿಂಗ್ ಹಣವನ್ನು ಬಳಸಿಕೊಳ್ಳಲು ಆಗ್ತಿಲ್ಲ. ಚುನಾವಣ ಹತ್ತಿರದಲ್ಲೇ ಬಿಜೆಪಿ ಸರ್ಕಾರ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್​ನ ಬ್ಯಾಂಕ್​ ಖಾತೆ ಸ್ಥಗತಿಗೊಳಿಸಿದೆ. ಇದರಿಂದ ನಮ್ಮ ಬಳಿ ಖರ್ಚು ಮಾಡಲು, ಬಿಲ್‌ ಪಾವತಿಸಲು ಹಣವಿಲ್ಲ. ಇದು ಪ್ರಜಾಪ್ರಭುತ್ವವನ್ನು ಫ್ರೀಜ್ ಮಾಡುವುದಕ್ಕೆ ಸಮಾನ ಎಂದು ಆರೋಪ ಮಾಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ಬಿಜೆಪಿ ವಿರುದ್ಧ ಕಿಡಿಕಾರಿದ್ರು. ದೇಶದ ಅತಿದೊಡ್ಡ ವಿರೋಧ ಪಕ್ಷದ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮವು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಆದಾಯ ತೆರಿಗೆ ಇಲಾಖೆ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು.

ಆರೋಪದ ಬೆನ್ನಲ್ಲೇ ಜಪ್ತಿಯಾಗಿದ್ದ​ ಬ್ಯಾಂಕ್​ ಖಾತೆ ಮುಕ್ತ

ಐಟಿ ಅಧಿಕಾರಿಗಳ ನಡೆ ವಿರುದ್ಧ ಕಾಂಗ್ರೆಸ್​ ತೆರಿಗೆ ನ್ಯಾಯಮಂಡಳಿ ಬಳಿ ಹೋಗಿತ್ತು. ರಾಜ್ಯಸಭಾ ಸಂಸದ ಮತ್ತು ವಕೀಲರಾದ ವಿವೇಕ್ ಟಂಖಾ ಕಾಂಗ್ರೆಸ್​ ಪರವಾಗಿ ವಾದ ಮಂಡಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ತೆರಿಗೆ ನ್ಯಾಯಮಂಡಳಿ, ಬ್ಯಾಂಕ್ ಖಾತೆಗೆ ಮಾತ್ರ ಬದ್ಧತೆ ಇರುತ್ತದೆ, ಪಕ್ಷದ ಖಾತೆ ಕಾರ್ಯನಿರ್ವಹಣೆಗೆ ಯಾವುದೇ ನಿರ್ಬಂಧವಿಲ್ಲ. ಆದಾಯ ತೆರಿಗೆ ಇಲಾಖೆ ಹೊಣೆಗಾರಿಕೆಯೊಂದಿಗೆ ಖಾತೆ ನಿರ್ವಹಿಸಬಹುದು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಐಟಿಯು 115 ಕೋಟಿ ಹಣ ಠೇವಣಿ ಇಟ್ಟು, 115 ಕೋಟಿಗಿಂತ ಮೇಲಿರುವ ಹಣವನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದೆ. ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ನ ಬ್ಯಾಂಕ್​ ಸೀಜ್​ ಮಾಡಿದ್ದು, ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಸದ್ಯ ವಿವಾದದ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಖಾತೆಗಳನ್ನು ಮುಕ್ತಗೊಳಿಸಿದೆ. ಇದರಿಂದ ಕಾಂಗ್ರೆಸ್​ ನಿರಾಳವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್​​ಗೆ ಬಿಗ್​​​ ಶಾಕ್​​.. ಪಕ್ಷದ ಬ್ಯಾಂಕ್ ಖಾತೆ ಫ್ರೀಜ್​ ಆಗಿದ್ದೇಕೆ?

https://newsfirstlive.com/wp-content/uploads/2024/02/congress-7.jpg

Load More