newsfirstkannada.com

ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಕಾಂಗ್ರೆಸ್​ನ ಸೀಟ್​​ಗಳ ಸಂಖ್ಯೆ, ಯಾಕೆ ಹೀಗೆ ಆಯಿತು..?

Share :

Published April 18, 2024 at 6:55am

Update April 18, 2024 at 9:07am

    ಇತಿಹಾಸದಲ್ಲೇ ಅತೀ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಿದೆ ಕಾಂಗ್ರೆಸ್

    ಕಾಂಗ್ರೆಸ್​ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಇದೆ ಐದು ಕಾರಣಗಳು

    ದೇಶವನ್ನ ಅತಿ ಹೆಚ್ಚು ಕಾಲ ಆಳಿದ್ದು ಇದೇ ಕಾಂಗ್ರೆಸ್ ಪಕ್ಷ

ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅನ್ನೋದು ಬಿಜೆಪಿ ನಾಯಕರ ಒಂದು ಘೋಷಣೆ. ಇದು ನಿಜವಾಗಿಸೋದು ಸದ್ಯಕ್ಕೆ ದೂರದ ಕೆಲಸ. ಆದ್ರೆ ಚುನವಣಾ ಅಖಾಡದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಕಳೆದುಕೊಂಡಂತೆ ಕಂಡು ಬರ್ತಿದೆ. ಗೆಲ್ಲೋದು ಒಂದು ಲೆಕ್ಕ, ಆದ್ರೆ ಕಾಂಗ್ರೆಸ್ ಸ್ಪರ್ಧಿಸ್ತಿರೋ ಕ್ಷೇತ್ರಗಳಲ್ಲೂ ಭಾರೀ ಇಳಿಕೆಯಾಗಿದೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

ಕಾಂಗ್ರೆಸ್​.. ದೇಶವನ್ನ ಅತಿ ಹೆಚ್ಚು ಕಾಲ ಆಳಿದ್ದು ಇದೇ ಕಾಂಗ್ರೆಸ್. ಆದ್ರೀಗ ಕಾಲ ಮೊದಲಿನಿಂತಿಲ್ಲ. ಬಲಾಢ್ಯವಾಗಿ ಬೆಳೆದು ನಿಂತಿರೋ ಬಿಜೆಪಿ ಕಾಂಗ್ರೆಸ್​ನ ಪ್ರಾಬಲ್ಯ ಕುಗ್ಗಿಸ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಈ ಬಾರಿಯ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡ್ತಿದೆ.

ಇದನ್ನೂ ಓದಿ:ಟಿ-20 ವಿಶ್ವಕಪ್​ನಲ್ಲಿ ಫಿನಿಶರ್​ ರೋಲ್ ಮಾಡಲು ಕಾರ್ತಿಕ್​ಗೆ ಇಬ್ಬರು ಆಗಾರರು ಅಡ್ಡಿ..!

ಎನ್‌ಡಿಎ ಒಕ್ಕೂಟವನ್ನ ಎದುರಿಸಲು ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದೆ. ಕ್ಷೇತ್ರ ಹಂಚಿಕೆಯ ಅನ್ವಯ ಕೇವಲ 330 ಲೋಕಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದೆ. ಕರ್ನಾಟಕ, ತೆಲಂಗಾಣ, ಪಂಜಾಬ್, ಛತ್ತೀಸ್‌ಗಡ ಸೇರಿ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ಮಾಡಿದೆ. ಉಳಿದಂತೆ ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ತಮಿಳುನಾಡಿನಂತ ದೊಡ್ಡ ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆ ಸೀಟು ಹಂಚಿಕೊಂಡಿದೆ. ಗಮನಾರ್ಹ ವಿಚಾರ ಅಂದ್ರೆ ಹೀಗೆ 400 ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡ್ತಿರೋದು ಇದೇ ಮೊದಲು.

ಕಾಂಗ್ರೆಸ್.. ಹೇಗಿತ್ತು? ಹೇಗಾಯ್ತು?
2004ರಲ್ಲಿ 417 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು. 2009ರಲ್ಲಿ ಈ ಸಂಖ್ಯೆ ಹೆಚ್ಚಳ ಕಂಡಿದ್ದು, ಕಾಂಗ್ರೆಸ್ 440 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಿತ್ತು. 2014ರಲ್ಲಿ 464 ಕ್ಷೇತ್ರಗಳಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದ ಕಾಂಗ್ರೆಸ್ ​2019ರಲ್ಲಿ 421 ಕ್ಷೇತ್ರಗಳಲ್ಲಷ್ಟೇ ಸ್ಪರ್ಧೆ ಮಾಡಿತ್ತು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400ಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸ್ತಿದ್ದು, 330 ಕ್ಷೇತ್ರಗಳಲ್ಲಷ್ಟೇ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ನಿರ್ಧರಿಸಿದೆ. ಕಾಂಗ್ರೆಸ್​ನ ಈ ಮಟ್ಟಿನ ಏರಿಳಿತ ಕಾರಣ ಏನು ಅನ್ನೋದನ್ನ ನೋಡೋದಾದ್ರೆ ಬದಲಾದ ರಾಜಕೀಯ ಸನ್ನಿವೇಶಗಳು.. ಬದಲಾದ ಪರಿಸ್ಥಿತಿ.

ಇದನ್ನೂ ಓದಿ: ರೋಹಿತ್ ಜೊತೆ ಬಿಸಿಸಿಐ ಹೈ-ವೋಲ್ಟೇಜ್ ಮೀಟಿಂಗ್; ಪಾಂಡ್ಯಗೆ ಶಾಕಿಂಗ್ ನ್ಯೂಸ್​ ಕೊಟ್ಟ ಆಯ್ಕೆ ಸಮಿತಿ..!

ಕಾಂಗ್ರೆಸ್​ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧೆ ಯಾಕೆ?

  • ಕಾರಣ 01: ಬಹಳಷ್ಟು ರಾಜ್ಯಗಳಲ್ಲಿ ಕುಸಿದ ‘ಕೈ’ ಪ್ರಾಬಲ್ಯ
  • ಕಾರಣ 02: ದುರ್ಬಲವಾದ ಕಾಂಗ್ರೆಸ್​ನ ಪಕ್ಷ ಸಂಘಟನೆ
  • ಕಾರಣ 03: ಪ್ರಬಲ ಅಭ್ಯರ್ಥಿಗಳು, ನಾಯಕರ ಕೊರತೆ
  • ಕಾರಣ 04: ಮೈತ್ರಿ ಮಾಡಿಕೊಂಡಿರೋದರ ಪರಿಣಾಮ
  • ಕಾರಣ 05: ಬಲಗೊಂಡ ಎನ್​ಡಿಎ ಮೈತ್ರಿಕೂಟದ ಪ್ರಾಬಲ್ಯ

ಕಾರಣಗಳು ಏನೇ ಇದ್ರೂ ಕಾಂಗ್ರೆಸ್ ಈ ಬಾರಿ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸ್ತಿದೆ ಅನ್ನೋದು ನಿಜ. ಆದ್ರೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ, ನಾವು ಈ ಬಾರಿ ಗೆಲ್ತೀವಿ ಅಂತಾ ಕಾಂಗ್ರೆಸ್ ನಾಯಕರು ವಿಶ್ವಾಸ ವ್ಯಕ್ತಪಡಿಸ್ತಿದ್ದಾರೆ. 2004ರಲ್ಲೂ ನಾವು ಕಡಿಮೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ವಿ. ಅಂದು ಹೆಚ್ಚು ಕ್ಷೇತ್ರದಲ್ಲಿ ಜಯ ಸಾಧಿಸಿದ್ವಿ. ಈ ಬಾರಿಯೂ 2004ರ ರೀತಿಯೇ ಫಲಿತಾಂಶ ಬರುತ್ತೆ ಅಂತಾ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದ್ರೆ ಇದು ಲಾಭವೋ? ನಷ್ಟವೋ? ಮತದಾರನ ತೀರ್ಪಿನ ಮೇಲೆ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಕಾಂಗ್ರೆಸ್​ನ ಸೀಟ್​​ಗಳ ಸಂಖ್ಯೆ, ಯಾಕೆ ಹೀಗೆ ಆಯಿತು..?

https://newsfirstlive.com/wp-content/uploads/2024/04/CONGRESS-2.jpg

Load More