newsfirstkannada.com

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ; ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

Share :

Published February 7, 2024 at 6:26am

  ಇಂದು ಡೆಲ್ಲಿ ದಂಗಲ್​ಗೆ ಕೈ ಪಡೆಯಿಂದ ರಣಕಹಳೆ

  ಕರ್ನಾಟಕದ ಬೆವರಿನ ಪಾಲು ಕೇಳಲು ಡೆಲ್ಲಿ ಚಲೋ!

  ಕೇಂದ್ರದ ವಿರುದ್ಧ ಕಾಂಗ್ರೆಸ್ ಸರ್ಕಾರದ ಪ್ರತಿಭಟನೆ

ಬೆಂಗಳೂರು: ಕರ್ನಾಟಕಕ್ಕೆ ಆಗ್ತಿರುವ ಅನುದಾನ ಅನ್ಯಾಯದ ವಿರುದ್ಧ ರಾಜ್ಯ ಕಾಂಗ್ರೆಸ್​​​ ಸರ್ಕಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೀದಿಗಿಳಿಯಲಿದೆ. ಕೇಂದ್ರದ ತಾರತಮ್ಯ ಖಂಡಿಸಿ ಸಂಸತ್​​​ನ ಕೂಗಳತೆಯಲ್ಲೇ ರಾಜ್ಯ ಸರ್ಕಾರ, ಡಂಗೂರ ಬಾರಿಸಲಿದೆ. ಇಂದು ಪ್ರತಿಭಟನೆಗಾಗಿ ಸಕಲ ಸಿದ್ಧತೆಗಳು ಆಗಿದ್ದು, ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ಸೇರಿ ಎಲ್ಲರೂ ದೆಹಲಿಯಲ್ಲಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಅನುದಾನ ತಾರತಮ್ಯ ವಿರುದ್ಧ ಡೆಲ್ಲಿಯ ಜಂತರ್​​​ಮಂಥರ್​​​ನಲ್ಲಿ ಗಟ್ಟಿಧ್ವನಿ ಮೊಳಗಿಸಲಿದೆ. ರಾಜ್ಯ ಸರ್ಕಾರವೊಂದು ಅನುದಾನ ವಿಚಾರದಲ್ಲಿ ಮೊದಲ ಸಲ ಪ್ರತಿಭಟನೆಗೆ ಸಜ್ಜಾಗಿದೆ. ಇಡೀ ಕಾಂಗ್ರೆಸ್​​​ ಸರ್ಕಾರವೇ ಡೆಲ್ಲಿಯಲ್ಲಿ ಬಿಡಾರ ಹೂಡ್ತಿರೋದು ಮೋದಿ ಸರ್ಕಾರಕ್ಕೆ ಮುಜುಗರಕ್ಕೆ ತಳ್ಳಿದೆ.

ಕರ್ನಾಟಕದ ಬೆವರಿನ ಪಾಲು ಕೇಳಲು ಡೆಲ್ಲಿ ಚಲೋ!

ನನ್ನ ತೆರಿಗೆ ನನ್ನ ಹಕ್ಕು ಘೋಷ ವಾಕ್ಯದಡಿ ಜಂತರ್ ಮಂತರ್‌ನಲ್ಲಿ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸರ್ಕಾರದ ಎಲ್ಲ ಸಚಿವರು, ಶಾಸಕರು ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡಲಿದ್ದಾರೆ.

ಕರ್ನಾಟಕ & ಕನ್ನಡಿಗರ ಮೇಲೆ ಕೇಂದ್ರದ ಆರ್ಥಿಕ ದೌರ್ಜನ್ಯ

ಕರ್ನಾಟಕ & ಕನ್ನಡಿಗರ ಮೇಲೆ ಕೇಂದ್ರದ ಆರ್ಥಿಕ ದೌರ್ಜನ್ಯ ನಡೆಯುತ್ತಿದೆ ಎಂದು ಕಾಂಗ್ರೆಸ್​​ ಆರೋಪಿಸಿದೆ. ಅನುದಾನ ನೀಡಿಕೆಯಲ್ಲಿ ಕೇಂದ್ರದಿಂದ ಕರ್ನಾಟಕಕ್ಕೆ ತಾರತಮ್ಯ ಆಗ್ತಿದೆ. ಜೊತೆಗೆ ಸೌಲಭ್ಯ ನೀಡಿಕೆಯಲ್ಲೂ ಈ ಅನ್ಯಾಯ ಮುಂದುವರೆದಿದೆ. ಇದಕ್ಕೆ ತಾಜಾ ಉದಾಹರಣೆ ಕೇಂದ್ರದ ಅನ್ಯಾಯದಿಂದ ರಾಜ್ಯಕ್ಕೆ 2017-18 ರಿಂದ ಈವರೆಗೆ ₹1,87,000 ಕೋಟಿ ನಷ್ಟ ಆಗಿದೆ ಅಂತ ಆರೋಪಿಸಿದೆ.

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಡೆಲ್ಲಿ ಚಲೋ ಅಭಿಯಾನ ಹಮ್ಮಿಕೊಂಡಿದೆ. ಈ ಮೂಲಕ ಕೇಂದ್ರದಿಂದ ಆಗಿರುವ ತಾರತಮ್ಯ ವಿಚಾರದಲ್ಲಿ ಕನ್ನಡಿಗರಿಗೆ ಆದ ಅನ್ಯಾಯ ಎಲ್ಲವನ್ನು ಜಗಜ್ಜಾಹೀರು ಮಾಡುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿದೆ. ರಾಜ್ಯದಲ್ಲಿ ಅಷ್ಟೇ ಅಲ್ದೆ ಇದೀಗ ರಾಷ್ಟ್ರ ಮಟ್ಟದಲ್ಲೂ ಕೇಂದ್ರಕ್ಕೆ ಮುಜುಗರ ತರಲು ಕಾಂಗ್ರೆಸ್ ಪ್ಲಾನ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ; ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ

https://newsfirstlive.com/wp-content/uploads/2024/02/CM_SIDDARAMIAH.jpg

Load More