newsfirstkannada.com

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ನಿಂದ ಕರ್ನಾಟಕದ ಮೂವರಿಗೆ ಟಿಕೆಟ್‌; ಯಾರವರು..?

Share :

Published February 14, 2024 at 4:40pm

Update February 14, 2024 at 4:44pm

    ರಾಜಸ್ಥಾನದಿಂದ ನಾಮಪತ್ರ ಸಲ್ಲಿಸಿರುವ ಸೋನಿಯಾ ಗಾಂಧಿ

    ರಾಜ್ಯದಿಂದ ಯಾರ್​ ಯಾರ ಹೆಸರು ಘೋಷಣೆ ಮಾಡಲಾಗಿದೆ?

    ಎಲ್​​ ಹನುಮಂತಯ್ಯ ಸೇರಿ ಇನ್ನು ಯಾರಿಗೆ ನಿರಾಸೆ ಆಗಿದೆ?

ಬೆಂಗಳೂರು: ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಅವರು ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ಕರ್ನಾಟಕದಿಂದ ಮೂವರ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ.

ಸೈಯ್ಯದ್​​ ನಾಸೀರ್ ಹುಸೇನ್, ಜಿ.ಸಿ ಚಂದ್ರಶೇಖರ್​ ಹಾಗೂ ಅಜಯ್ ಮಾಕನ್​ಗೆ ಈ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ಬಿಜೆಪಿ ರಾಜ್ಯಸಭೆ ಎಲೆಕ್ಷನ್​​ಗೆ ತನ್ನ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಸದ್ಯ ಕಾಂಗ್ರೆಸ್​ ಕೂಡ ಮೂವರ ಹೆಸರುಗಳನ್ನು ಅನೌನ್ಸ್ ಮಾಡಿದೆ.

ಡಾಕ್ಟರ್ ಎಲ್​ ಹನುಮಂತಯ್ಯ, ಬಿ.ಎಲ್ ಶಂಕರ್‌, ಎಂ.ಸಿ ವೇಣುಗೋಪಾಲ್ ಅವರಿಗೆ ಟಿಕೆಟ್ ನೀಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಈ ಮೂವರನ್ನ ಬಿಟ್ಟು ಬೇರೆ ಅಭ್ಯರ್ಥಿಗಳಿ ಕಾಂಗ್ರೆಸ್ ಮಣೆ ಹಾಕಿದೆ. ಇದರಿಂದ ಎಲ್​ ಹನುಮಂತಯ್ಯ, ಬಿ.ಎಲ್ ಶಂಕರ್‌, ಎಂ.ಸಿ ವೇಣುಗೋಪಾಲ್ ಅವರಿಗೆ ದೊಡ್ಡ ನಿರಾಸೆ ಆದಂತೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ನಿಂದ ಕರ್ನಾಟಕದ ಮೂವರಿಗೆ ಟಿಕೆಟ್‌; ಯಾರವರು..?

https://newsfirstlive.com/wp-content/uploads/2024/02/CONGRESS_RAJYASABHA.jpg

Load More