newsfirstkannada.com

‘ಕ್ಷಮಿಸಿ ಬಿಡಿ ರಾಹುಲ್ ಗಾಂಧಿ’- ಕಾಂಗ್ರೆಸ್ ಘಟಾನುಘಟಿ ನಾಯಕರಿಂದ ಅಚ್ಚರಿ ನಿರ್ಧಾರ!

Share :

Published March 20, 2024 at 9:05pm

    ಕಾಂಗ್ರೆಸ್ ಸರ್ಕಾರ ಆಸ್ತಿತ್ವಕ್ಕೆ ತರಬೇಕೆಂದು ರಾಹುಲ್ ಗಾಂಧಿ ಹೋರಾಟ

    ಘಟಾನುಘಟಿ ನಾಯಕರೇ ಕ್ಷಮಿಸಿ ಬಿಡಿ, ರಾಹುಲ್ ಗಾಂಧಿ ಎನ್ನುತ್ತಿದ್ದಾರೆ

    ಯುಪಿಎ ಸರ್ಕಾರವಿದ್ದಾಗ ಅಧಿಕಾರ ಅನುಭವಿಸಿದವ್ರೆ ಈಗ ಸ್ಪರ್ಧಿಸುತ್ತಿಲ್ಲ

ಈ ಬಾರಿಯ ಲೋಕಸಭಾ ಚುನಾವಣಾ ಕಣ ರಂಗೇರಿದ್ದು ದೇಶಾದ್ಯಂತ ಎಲ್ಲ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಈಗಾಗಲೇ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಯವರು ಪೂರ್ವದಿಂದ ಪಶ್ಚಿಮಕ್ಕೆ, ಉತ್ತರದಿಂದ ದಕ್ಷಿಣಕ್ಕೆ ಭಾರತ್ ಜೋಡೋ ನ್ಯಾಯ್​​ ಯಾತ್ರೆ ಮಾಡಿ ಮತದಾರರ ಗಮನ ಸೆಳೆದಿದ್ದಾರೆ. ಇದೀಗ ರಾಹುಲ್ ಗಾಂಧಿಯವರ ಎದೆಯ ಭಾರ ಇನ್ನಷ್ಟು ಹೆಚ್ಚಾಗುವಂತ ಆ ಮಾತು ಕಾಂಗ್ರೆಸ್​ನ ಹಿರಿಯ ನಾಯಕರಿಂದ ಕೇಳಿ ಬರುತ್ತಿದೆ. ಅದೇ ಆ ಮಾತು ‘ಕ್ಷಮಿಸಿ ಬಿಡಿ ರಾಹುಲ್ ಗಾಂಧಿ ಚುನಾವಣೆಗೆ ನಾವು ಸ್ಪರ್ಧಿಸಲ್ಲ’.

2024ರ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಕ್ಷೇತ್ರವನ್ನು ಗೆಲ್ಲುವುದು ಕಾಂಗ್ರೆಸ್​ಗೆ ತುಂಬಾ ಮುಖ್ಯವಾಗಿದೆ. ಇದು ಕಾಂಗ್ರೆಸ್​ ಪಾಲಿಗೆ ಮಾಡು ಇಲ್ಲವೇ ಮಡಿ ಎಲೆಕ್ಷನ್ ಎಂದು ಹೇಳಿದರು ತಪ್ಪಾಗಲಾರದು. ಹೀಗಾಗಿ ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಪಕ್ಷದ ಆಸ್ತಿತ್ವ ಉಳಿಸಿ, ಬೆಳೆಸಿ ಕಾಪಾಡಲು ದೀರ್ಘ ಹೋರಾಟ ಕೈಗೊಂಡಿದ್ದಾರೆ. ಆದರೆ ಪಕ್ಷದ ಘಟಾನುಘಟಿ ಹಿರಿಯ ನಾಯಕರೇ ‘ಲೋಕ’ ಸಮರದ ಅಖಾಡಕ್ಕೆ ಇಳಿಯಲ್ಲವೆಂದು ಹೇಳುತ್ತಿದ್ದಾರೆ. ಯುಪಿಎ ಅಧಿಕಾರವದಿಯಲ್ಲಿ ಒಳ್ಳೆ, ಒಳ್ಳೆಯ ಸ್ಥಾನಗಳನ್ನು ಅನುಭವಿಸಿದವರೇ ಈಗ ಎಲೆಕ್ಷನ್​ಗೆ ಸ್ಪರ್ಧಿಸಲ್ಲ ಎಂದು ಹೇಳುತ್ತಿರುವುದು ದುರಂತವೇ ಸರಿ.

ಖರ್ಗೆಯವರೇ ಕ್ಷಮಿಸಿ ಬಿಡಿ ರಾಹುಲ್ ಗಾಂಧಿ ಎಂದ್ರಾ..?

ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರೇ ಕ್ಷಮಿಸಿ ಬಿಡಿ ರಾಹುಲ್ ಗಾಂಧಿ, ಈ ಸಲದ ಚುನಾವಣೆಗೆ ನಾನು ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಇವರಷ್ಟೇ ಅಲ್ಲ, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್​ ಅವರಿಗೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್ ಹೇಳಿತ್ತು. ಆದರೆ ಅವರು ದೆಹಲಿಯಲ್ಲಿನ ಅಭ್ಯರ್ಥಿ ಆಯ್ಕೆಗೆ ಬಾರದೇ ದೂರ ಉಳಿದಿದ್ದಲ್ಲದೇ ಚುನಾವಣೆಗೂ ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಇವರ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಸಚಿನ್ ಪೈಲಟ್ ಕೂಡ ಕ್ಷಮಿಸಿ ಬಿಡಿ ರಾಹುಲ್ ಗಾಂಧಿ ಎಂದು ಅಖಾಡದಿಂದ ದೂರ ಸರಿದುಕೊಂಡಿದ್ದಾರೆ.

ರಾಜಸ್ಥಾನದ್ದು ಈ ಕಥೆಯಾದರೆ, ಮಧ್ಯಪ್ರದೇಶ ಲೋಕಸಭೆಯಲ್ಲಿ ಮಾತುಗಳು ಬೇರೆಯದ್ದೇ ಆಗಿದ್ದು ಕಳೆದ ಬಾರಿ ಚಿಂದ್ವಾರ ಲೋಕಸಭೆ ಕ್ಷೇತ್ರ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಹೀಗಾಗಿ ಮಾಜಿ ಸಿಎಂ ಕಮಲನಾಥ್​ಗೆ ಸ್ಪರ್ಧೆ ಮಾಡಲು ಪಕ್ಷ ನಿರ್ದೇಶನ ಕೊಟ್ಟಿತ್ತು. ಸದ್ಯ ಇದನ್ನು ಕಡೆಗಣಿಸಿರುವ ಕಮಲನಾಥ್ ಅವರು ಕ್ಷಮಿಸಿ ರಾಹುಲ್​ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಮಧ್ಯಪ್ರದೇಶದ ರಾಜ ಮನೆತನದ ದಿಗ್ವಿಜಯ್ ಸಿಂಗ್ ಅವರ ಬಾಯಿಯಿಂದಲೂ ಇದೇ ಮಾತುಗಳು ಕೇಳಿ ಬಂದಿವೆ.

ಕರ್ನಾಟಕದ ಸಚಿವರು ಸ್ಪರ್ಧೆ ಮಾಡಲು ಹಿಂದೇಟು

ಗುಜರಾತ್​ನ ಅಹಮದಾಬಾದ್​ನ ಪೂರ್ವ ಕ್ಷೇತ್ರದಲ್ಲಿ ರೋಹನ್ ಗುಪ್ತಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ರೋಹನ್ ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುತ್ತಿದ್ದಾರೆ. ಪಂಜಾಬ್​ನಲ್ಲಿ ನವಜೋತ್ ಸಿಂಗ್ ಸಿಧು ಅವರು ಎಲೆಕ್ಷನ್​ಗೆ ನಿಲ್ಲುತ್ತಿಲ್ಲ. ಕಾಂಗ್ರೆಸ್​​ನ ಬಹಳಷ್ಟು ನಾಯಕರು ಲೋಕಸಭೆ ಸ್ಪರ್ಧೆಗಿಂತ ರಾಜ್ಯಸಭೆಯ ಸದಸ್ಯರು ಆಗುವುದೇ ಉತ್ತಮ ಎಂಬ ಭಾವನೆಯಲ್ಲಿದ್ದಾರೆ. ಹೀಗಾಗಿ ಈ ಸಲದ ಎಲೆಕ್ಷನ್​ಗೆ ಸ್ಪರ್ಧೆ ಮಾಡಲು ಯಾರು ಮುಂದೆ ಬರುತ್ತಿಲ್ಲ.

ಇದನ್ನು ಓದಿ: ಮೆದುಳು ಶಸ್ತ್ರ ಚಿಕಿತ್ಸೆ ಯಶಸ್ವಿ.. ಆಸ್ಪತ್ರೆಯ ಬೆಡ್​ ಮೇಲಿಂದ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಏನಂದ್ರು? 

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಸಚಿವರಿಗೆ ಸ್ಪರ್ಧೆ ಮಾಡುವಂತೆ ಹೇಳಲಾಗಿತ್ತು. ರಾಹುಲ್ ಗಾಂಧಿಯವರ ಆಪ್ತ ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಅವರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಇನ್ನುಳಿದ ಸಚಿವರು ಸ್ಪರ್ಧೆ ಆಗಲ್ಲವೆಂದು ಹಿಂದಕ್ಕೆ ಬಂದಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದರೆ ಕನಿಷ್ಠ 150 ಲೋಕಸಭಾ ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕು. ಹಾಗೇ ಕಾಂಗ್ರೆಸ್​ನ ಮಿತ್ರಪಕ್ಷಗಳು 125 ಕ್ಷೇತ್ರಗಳಲ್ಲಿ ಜಯಿಸಬೇಕು. ಇಷ್ಟೇಲ್ಲ ಗೆಲುವು ಕಾಣಬೇಕಾದರೆ, ವರ್ಚಸ್ಸು, ಪ್ರಭಾವ ಇರುವಂತವರೇ ಚುನಾವಣೆಯಿಂದ ಹಿಂದೇಟು ಹಾಕಿದರೆ ಕಾಂಗ್ರೆಸ್ ಗೆಲ್ಲುವುದು ಹೇಗೆ ಎಂಬುದು ಪಕ್ಷದ ಕಾರ್ಯಕರ್ತರ ಪ್ರಶ್ನೆಯಾಗಿದೆ.

ವಿಶೇಷ ವರದಿ; ಚಂದ್ರಮೋಹನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕ್ಷಮಿಸಿ ಬಿಡಿ ರಾಹುಲ್ ಗಾಂಧಿ’- ಕಾಂಗ್ರೆಸ್ ಘಟಾನುಘಟಿ ನಾಯಕರಿಂದ ಅಚ್ಚರಿ ನಿರ್ಧಾರ!

https://newsfirstlive.com/wp-content/uploads/2024/03/RAHUL_GANDHI_KHARGE-1.jpg

Load More