/newsfirstlive-kannada/media/post_attachments/wp-content/uploads/2025/03/SHAMA-MOHAMED.jpg)
ಕಾಂಗ್ರೆಸ್ನ ನಾಯಕಿ ಹಾಗೂ ವಕ್ತಾರೆ ಶಮಾ ಮೊಹಮ್ಮದ್ ಈ ಹಿಂದೆ ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹದ ಬಗ್ಗೆ ಮಾತನಾಡಿ, ಬಾಡಿ ಶೇಮಿಂಗ್ ವಿಚಾರದಲ್ಲಿ ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಈಗ ಮತ್ತೊಂದು ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ. ಅದರಲ್ಲೂ ಪಕ್ಕಾ ಬಿಜೆಪಿಗರು ಟ್ರೋಲ್ ಮಾಡಲು ಕಾಯ್ದು ಕುಳಿತಿರುವಂತ ಹೇಳಿಕೆ ನೀಡಿ ಟ್ರೋಲ್ಗೆ ಆಹಾರವಾಗಿದ್ದಾರೆ.ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡುತ್ತಾ ಶಮಾ ಗಣಿತ ಹುಟ್ಟಿದ್ದು ಇಸ್ಲಾಂನಿಂದ, ಅದು ಇಸ್ಲಾಂನ ಆವಿಷ್ಕಾರ ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಅದರ ಜೊತೆಗೆ ಇಸ್ಲಾಂ ಹೇಗೆ ಪ್ರಗತಿಪರವಾಗಿದೆ ಎಂಬುದನ್ನು ಕೂಡ ಹೇಳಿದ್ದಾರೆ.
“Islam is a very scientific religion. Mathematics has come through Islam.”
~ Shama Mohamed, spokesperson of Indian National Congress.
They don’t even flinch while lying. Admirable.pic.twitter.com/A1yKIlnGe1— Abhijit Majumder (@abhijitmajumder) March 6, 2025
ಶಮಾ ಅವರ ಈ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯ ನಾಯಕರು ಹಾಗೂ ಕೆಲವು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕರು. ಇಂತಹದೊಂದು ಹೇಳಿಕೆ ದೇಶದ ಅತ್ಯಂತ ಹಳೆಯದಾದ ಪಕ್ಷದ ವಕ್ತಾರರಿಂದ ಬಂದಿದೆ. ಕೇವಲ ರಾಹುಲ್ ಗಾಂಧಿ ಮಾತ್ರ ಅಸಂಬದ್ಧ ಹೇಳಿಕೆ ಕೊಡಲು ಕಾಂಗ್ರೆಸ್ನಲ್ಲಿ ಇಲ್ಲ ನಾನು ಇದ್ದೇನೆ ಎಂಬ ನಿರ್ಧಾರಕ್ಕೆ ಬಂದು ಈ ಹೇಳಿಕೆಯನ್ನು ಕೊಟ್ಟಿದ್ದಾರೆ ಎಂದು ಬಿಜೆಪಿಯ ಐಟಿ ಶೆಲ್ನ ಮುಖ್ಯಸಥ ಅಮಿತ್ ಮಾಳವಿಯಾ ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 30 ಕೋಟಿ ಗಳಿಸಿದ ಬೋಟ್ಮ್ಯಾನ್ ಕಥೆಗೆ ಹೊಸ ಟ್ವಿಸ್ಟ್; ಸಾಧಕನ ಮೇಲೆ 20 ಕ್ರಿಮಿನಲ್ ಕೇಸ್!
ಇನ್ನು ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ವಕ್ತಾರ ಶೆಹ್ಜಾದ್ ಪೂನಾವಾಲ, ಕಾಂಗ್ರೆಸ್ನಲ್ಲಿ ಅನೇಕ ಜನರು ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿಯಾಗಿ ನಿಲ್ಲುತ್ತಿದ್ದಾರೆ ಎಂದು ಹೇಳಿದ್ದಾರೆ. ಅಸಂಬದ್ಧ ಹೇಳಿಕೆ ವಿಚಾರದಲ್ಲಿ ಕೇವಲ ರಾಹುಲ್ ಗಾಂಧಿಯಲ್ಲಿ ಕಾಂಗ್ರೆಸ್ನಲ್ಲಿ ಅನೇಕರು ಮುನ್ನೆಲೆಗೆ ಬರುತ್ತಿದ್ದಾರೆ. ಕಾಂಗ್ರೆಸ್ನಲ್ಲೊಂದು ಮೂಲಭೂತವಾದಿಗಳ ಪರಿಸರ ವ್ಯವಸ್ಥೆ ಇದೆ. ಹೀಗಾಗಿಯೇ ರಾಷ್ಟ್ರ ಮೊದಲು ಎಂದು ಭಾವಿಸಿ ಕ್ರೀಡಾಸ್ಪೂರ್ತಿ ಮೆರೆದ ಮೊಹಮದ್ ಶಮಿಯನ್ನು ಗುರಿಯಾಗಿಸಿಕೊಂಡು ಬಾಯಿಗೆ ಬಂದಂತೆ ಮಾತನಾಡಿದರು. ಇನ್ನು ರೋಹಿತ್ ಶರ್ಮಾ ಅವರ ತೂಕದ ಬಗ್ಗೆಯೂ ಕೂಡ ಮಾತನಾಡಿದ್ದಾರೆ. ಅದರ ಜೊತೆಗೆ ಸನಾತನ ಧರ್ಮವನ್ನೂ ನಿರ್ಮೂಲನೆ ಮಾಡುತ್ತೇನೆ ಎನ್ನುವವರ ಜೊತೆಯಾಗಿ ನಿಂತಿದ್ದಾರೆ. ಹೀಗೆ ಹಿಂದೂಗಳ ಬಗ್ಗೆ ಮಾತನಾಡುವ ಇವರು ತಮ್ಮ ವೋಟ್ ಬ್ಯಾಂಕ್ಗಾಗಿ ಮುಸ್ಲಿಂ ಮೂಲಭೂತವಾದದ ಬಗ್ಗೆ ಒಂದೇ ಒಂದು ಮಾತನ್ನು ಕೂಡ ಆಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾಗೆ ಆಘಾತ.. ಅಮ್ಮನ ಬಗ್ಗೆ ಭಾವನಾತ್ಮಕ ಪೋಸ್ಟ್!
ಶಮಾ ಅವರು ಮೊಟ್ಟ ಮೊದಲ ಬಾರಿಗೆ ರೋಹಿತ್ ಶರ್ಮಾ ದೇಹದ ತೂಕದ ಬಗ್ಗೆ ಮಾತನಾಡಿದಾಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು ಟ್ರೋಲಿಗರ ಬಾಯಿಗೆ ಆಹಾರವಾಗಿದ್ದರು. ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಬಳಿಕ ಆಸ್ಟ್ರೇಲಿಯಾ ಜೊತೆ ಸೆಮಿಫೈನಲ್ನಲ್ಲಿ ಭಾರತ ತಂಡ ಗೆದ್ದಾಗ ಸಂಭ್ರಮಾಚರಣೆ ಮಾಡಿ ನಾನು ತುಂಬಾ ತುಂಬಾ ಖುಷಿಯಾಗಿದ್ದೀನಿ ಎಂದು ಹೇಳಿಕೊಂಡು ವಿರಾಟ್ ಕೊಹ್ಲಿಗೆ ಶುಭಾಶಯ ಕೋರುವ ಮೂಲಕ ತೇಪ ಹಚ್ಚುವ ಕೆಲಸ ಮಾಡಿದ್ದರು. ಈಗ ಮತ್ತೊಮ್ಮೆ ಇಸ್ಲಾಂನಿಂದ ಮ್ಯಾಥಮೆಟಿಕ್ಸ್ ಆವಿಷ್ಕಾರ ಆಗಿದ್ದು ಎಂದು ಹೇಳುವ ಮೂಲಕ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಇದನ್ನು ಹೇಗೆ ಸಮರ್ಥಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ